Advertisement

ಸಿಂಹದ ಮೇಲೇರಿ ಬಂದ ವರ ಸಾಹೇಬ

03:45 AM Mar 27, 2017 | Team Udayavani |

ಇಸ್ಲಾಮಾಬಾದ್‌: ಶ್ರೀಮಂತರು ತಮ್ಮ ಪುತ್ರ ಅಥವಾ ಪುತ್ರಿಯ ವಿವಾಹವನ್ನು ವಿಶೇಷವಾಗಿ ಮಾಡಬೇಕೆಂದು ಬಯಸುತ್ತಾರೆ. ಪಾಕಿಸ್ತಾನದ ಮುಲ್ತಾನ್‌ನ ಶ್ರೀಮಂತ ಉದ್ಯಮಿಯೊಬ್ಬರು ಪುತ್ರನ ವಿವಾಹಕ್ಕಾಗಿ ತಲೆಯಿಂದ ಕಾಲಿನ ವರೆಗೆ ಚಿನ್ನದ ಆಭರಣಗಳನ್ನೇ ಮಾಡಿ ತೊಡಿಸಿದ್ದಾರೆ. ಇಷ್ಟಾದರೇನೂ ವಿಶೇಷ ಎಲ್ಲ ಎನ್ನಬಹುದೇನೋ? ಪುತ್ರ ಶೇಕ್‌ ಮೊಹಮ್ಮದ್‌ಗೆ ಸಿಂಹದ ಮೇಲೆ ಕುಳಿತು ಮೆರವಣಿಗೆಯಲ್ಲಿ ಬರಬೇಕೆಂಬ ಆಸೆ.ಸರಿ. ಅಪ್ಪ ಇನ್ನೇನು ಮಾಡುತ್ತಾರೆ. ಅದನ್ನೂ ಈಡೇರಿಸಿಬಿಟ್ಟಿದ್ದಾರೆ. ಪಂಜರದಲ್ಲಿರುವ ಸಿಂಹವನ್ನು ದೊಡ್ಡದಾಗಿರುವ ಲಾರಿಯ ಮೇಲೆ ಇರಿಸಲಾಯಿತು. ಅದರ ಮೇಲೆ ವರ ಕುಳಿತುಕೊಳ್ಳುವ ಅಲಂಕಾರಿಕ ಕುರ್ಚಿಯನ್ನು ಇರಿಸಿ, ಮೆರವಣಿಗೆಯನ್ನು ಆತನನ್ನು ಕರೆತಂದಿದ್ದಾರೆ.

Advertisement

ಪಾಕಿಸ್ತಾನದ ಸುದ್ದಿ ವಾಹಿನಿಯಲ್ಲಿ ಈ ವಿಚಾರ ಪ್ರಸಾರವೂ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಉದ್ಯಮಿಯ ದುಂದು ವೆಚ್ಚವನ್ನು ಖಂಡಿಸಿಯೂ ಇದ್ದಾರೆ.

ಮೆರವಣಿಗೆಯಲ್ಲಿ ವರನ ಕುಟುಂಬ ವರ್ಗದವರು, ಸ್ನೇಹಿತರು ಡ್ಯಾನ್ಸ್‌ ಮಾಡುತ್ತಿರುವ ದೃಶ್ಯ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇನ್ನು ವಿವಾಹಕ್ಕೆ ಬಂದಿರುವ ಅತಿಥಿಗಳ ಸಂಖ್ಯೆ ಬರೋಬ್ಬರಿ 15 ಸಾವಿರ. ವರನ ಕುಟುಂಬ ಇಷ್ಟೆಲ್ಲ ಅದ್ಧೂರಿಯಾಗಿ ಮೆರವಣಿಗೆಯಲ್ಲಿ ಬಂದು ದವಲತ್ತು ತೋರಿಸಿದ ಬಳಿಕ ವಧುವಿನ ಕುಟುಂಬದವರು ಸುಮ್ಮನಿದ್ದರೆ ಆಗುತ್ತದೆಯೇ? ಅವರು ವರನಿಗೆ ಬರೋಬ್ಬರಿ 5 ಕೋಟಿ ರೂ. ವರದಕ್ಷಿಣೆ ನೀಡಿ ತಾವೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಈ ಪ್ರಕರಣದ ಬಳಿಕ ಪಾಕಿಸ್ತಾನದ ತೆರಿಗೆ ಇಲಾಖೆ ಕುಟುಂಬಗಳಿಗೆ ನೋಟಿಸ್‌ ನೀಡಿದೆ.

ಭಾರತದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪುತ್ರಿ ವಿವಾಹಕ್ಕೆ ಬಹುಕೋಟಿ ವೆಚ್ಚವಾಗಿದೆ ಎಂಬ ಅಂದಾಜಿದೆ. ಕೇರಳದಲ್ಲಿನ ಬಾರ್‌ ಒಂದರ ಮಾಲೀಕರು ತಮ್ಮ ಪುತ್ರಿಯ ವಿವಾಹ ಆರತಕ್ಷತೆಗೆ ಭಾರಿ ವೆಚ್ಚ ಮಾಡಿದ್ದ ಇತಿಹಾಸವಿದೆ.

Advertisement

Udayavani is now on Telegram. Click here to join our channel and stay updated with the latest news.

Next