Advertisement
ಥೈಲ್ಯಾಂಡ್‌ನಲ್ಲಿ ದಾಖಲೆ ತಾಪಮಾನಪ್ರತೀ ವರ್ಷದ ಎಪ್ರಿಲ್ ಮತ್ತು ಮೇ ತಿಂಗಳು ಥೈಲ್ಯಾಂಡ್‌ನಲ್ಲಿ ತಾಪಮಾನ ಅತ್ಯಂತ ಹೆಚ್ಚಾಗಿರುತ್ತದೆ. ಆದರೆ ಈ ಬಾರಿ ಎಪ್ರಿಲ್ ತಿಂಗಳಲ್ಲಿ ಪ್ರತಿದಿನವೂ ತಾಪಮಾನ ಹೆಚ್ಚುತ್ತಲೇ ಸಾಗಿದ್ದು ತನ್ನ ಹಳೆಯ ದಾಖಲೆಯನ್ನೆಲ್ಲ ಮುರಿದು ಮುನ್ನಡೆಯುತ್ತಿದೆ. ಶುಕ್ರವಾರ ಥೈಲ್ಯಾಂಡ್‌ನ ತಕ್‌ನಲ್ಲಿ 45.4 ಡಿ.ಸೆ. ತಾಪಮಾನ ದಾಖಲಾಗಿದ್ದು ಇದು ಈವರೆಗೆ ದೇಶದ ಯಾವುದೇ ಭಾಗದಲ್ಲಿ ದಾಖಲಾದ ಅತ್ಯಂತ ಗರಿಷ್ಠ ತಾಪಮಾನವಾಗಿದೆ. ಇಷ್ಟು ಮಾತ್ರವಲ್ಲದೆ ದೇಶದ ಬಹುತೇಕ ಭಾಗಗಳಲ್ಲಿ ತಾಪಮಾನ 43 ಡಿ.ಸೆ. ನ ಆಸುಪಾಸಿನಲ್ಲಿದೆ.
ಜನರಿಗೆ ಬಿಸಿಲಿನ ಝಳದಿಂದ ರಕ್ಷಣೆ ಪಡೆಯುವುದೇ ಬಲುದೊಡ್ಡ ಸವಾಲಾಗಿದೆ. ಹಗಲಿನ ವೇಳೆ ಬಿಸಿಲಾಘಾತದಿಂದ ಪಾರಾಗಲು ಸಾಧ್ಯವಾದಷ್ಟು ಮನೆ ಅಥವಾ ಕಚೇರಿಯೊಳಗೆ ರಕ್ಷಣೆ ಪಡೆದುಕೊಳ್ಳುವಂತೆ ಅಲ್ಲಿನ ಸರಕಾರ ಜನತೆಗೆ ಸಲಹೆ ನೀಡಿದೆ.
Related Articles
Advertisement
ಚೀನಕ್ಕೂ ತಟ್ಟಿದೆ ಸೂರ್ಯನ ತಾಪಭಾರತದ ನೆರೆಯ ರಾಷ್ಟ್ರ ಚೀನದಲ್ಲೂ ತಾಪಮಾನ ಏರುಗತಿಯಲ್ಲಿದೆ. ದೇಶದ 12 ಪ್ರಾಂತಗಳಲ್ಲಿರುವ 109 ಹವಾಮಾನ ಕೇಂದ್ರಗಳಲ್ಲಿ ಕಳೆದ ಸೋಮವಾರ ಗರಿಷ್ಠ ತಾಪಮಾನ ದಾಖಲಾಗಿದ್ದು ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಇನ್ನುಳಿದ 9 ಕೇಂದ್ರಗಳಲ್ಲಿ ದಾಖಲಾಗಿರುವ ತಾಪಮಾನ ಈ ಹಿಂದಿನ ದಾಖಲೆಯನ್ನು ಸರಿಗಟ್ಟಿದೆ. ಬಹುತೇಕ ಹವಾಮಾನ ಕೇಂದ್ರಗಳಲ್ಲಿ ತಾಪಮಾನ 35-39 ಡಿ. ಸೆ. ಗಳ ಅಂತರದಲ್ಲಿದೆ. ಸಾಮಾನ್ಯವಾಗಿ ಚೀನದಲ್ಲಿ ಜೂನ್ ಮತ್ತು ಜುಲೈ ಬಿರುಬಿಸಿಲಿನ ಮಾಸಗಳಾಗಿವೆ. ಕಳೆದ ವರ್ಷ ಚಾಂಗ್‌ಕ್ವಿಂಗ್ ಪ್ರಾಂತದ ಬೀಬೈಯಲ್ಲಿ 45 ಡಿ.ಸೆ. ತಾಪಮಾನ ದಾಖಲಾಗಿದ್ದು ಈವರೆಗಿನ ಗರಿಷ್ಠ ತಾಪಮಾನವಾಗಿತ್ತು. ಈ ಸಂದರ್ಭದಲ್ಲಿ ಪ್ರಾಂತದ ಬಹುತೇಕ ನದಿಗಳು ಸಂಪೂರ್ಣ ಬತ್ತಿಹೋಗಿತ್ತಲ್ಲದೆ ಅರಣ್ಯಗಳಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡು ವ್ಯಾಪಕ ಹಾನಿ ಸಂಭವಿಸಿತ್ತು. ಆದರೆ ಈ ಬಾರಿ ಎಪ್ರಿಲ್‌ನಲ್ಲಿಯೇ ಬಿಸಿಲಿನ ಕಾವು ಒಂದೇ ಸಮನೆ ಏರತೊಡಗಿದ್ದು ಮುಂದಿನ ದಿನಗಳಲ್ಲಿ ಇದರ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಬಾಂಗ್ಲಾದಲ್ಲೂ ಏರುತ್ತಿದೆ ಬಿಸಿಲ ಕಾವು
ಬಾಂಗ್ಲಾದೇಶದಲ್ಲೂ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು ದೇಶದ ಬಹುತೇಕ ಭಾಗಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಎಪ್ರಿಲ್ ಆರಂಭದಿಂದಲೇ ಒಂದೇ ಸಮನೆ ಸೂರ್ಯ ಸುಡುತ್ತಿದ್ದು ಜನರನ್ನು ಜರ್ಝರಿತಗೊಳಿಸಿದೆ. ಇಲ್ಲಿನ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನ 43-45 ಡಿ.ಸೆ. ನ ಆಸುಪಾಸಿನಲ್ಲಿದೆ. ಮೇ ಅಂತ್ಯದವರೆಗೂ ತಾಪಮಾನ ಹೆಚ್ಚಳದ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಾರಣವೇನು?
ನಿಸರ್ಗ ಪ್ರಕ್ರಿಯೆಯಲ್ಲಿ ಹೆಚ್ಚುತ್ತಿರುವ ಮಾನವನ ಹಸ್ತಕ್ಷೇಪ, ಅತಿಯಾದ ಕೈಗಾ ರಿಕೀಕರಣದ ಕಾರಣದಿಂದಾಗಿ ಹವಾಮಾನ ಬದಲಾವಣೆಯ ಪರಿಣಾಮದ ಭಾಗ ವಾಗಿ ತಾಪಮಾನ ಒಂದೇ ಸಮನೆ ಹೆಚ್ಚುತ್ತಿದೆ ಮತ್ತು ಈ ಹೆಚ್ಚಳದ ಪ್ರಕ್ರಿಯೆ ಸುದೀರ್ಘ ಅವಧಿಯವರೆಗೆ ವಿಸ್ತರಿಸಲ್ಪಡುತ್ತಿದೆ ಎಂಬುದು ಹಲವಾರು ಅಧ್ಯಯನ ಗಳಿಂದ ಸಾಬೀತಾಗಿದೆ. ಅಲ್ಲದೆ ಬಂಗಾಲಕೊಲ್ಲಿಯಿಂದ ಫಿಲಿಪ್ಪೀನ್ ಸಮುದ್ರದತ್ತ ಚಲಿಸುತ್ತಿರುವ ಗಾಳಿಯ ಒತ್ತಡದ ಪರಿಣಾಮವಾಗಿ ಮೋಡಗಳು ಸೃಷ್ಟಿಯಾಗಲು ಬಲುದೊಡ್ಡ ತಡೆಯಾಗಿ ಪರಿಣಮಿಸಿವೆ. ಇದೇ ವೇಳೆ ಅರಬಿ ಸಮುದ್ರದ ಅಲ್ಲಲ್ಲಿ ಬಿಸಿಗಾಳಿ ಸೃಷ್ಟಿಯಾಗಿರುವುದರಿಂದ ತಾಪಮಾನ ಹೆಚ್ಚುತ್ತಿದೆ. ಮೋಡಗಳು ಸೃಷ್ಟಿಯಾಗಿ ಮಳೆ ಸುರಿಯಲು ಪೂರಕವಾದ ವಾತಾವರಣ ನಿರ್ಮಾಣಗೊಳ್ಳದೇ ಇರುವುದರಿಂದ ಮಳೆ ವಿಳಂಬಗೊಳ್ಳುತ್ತಿದೆ. ಬೇಸಗೆ ಮಳೆ ವಿಳಂಬವಾದಷ್ಟು ತಾಪ ಮಾನದಲ್ಲಿನ ಏರಿಕೆ ಪ್ರಕ್ರಿಯೆ ಮುಂದುವರಿ ಯುತ್ತದೆ ಎಂಬುದು ಹವಾಮಾನ ತಜ್ಞರ ವಿಶ್ಲೇಷಣೆ. ಏಷ್ಯಾದ ಇತರ ರಾಷ್ಟ್ರಗಳಲ್ಲೂ ಧಗೆ
ಜಪಾನ್, ಕೊರಿಯಾ, ಭಾರತ, ನೇಪಾಲ, ಪಾಕಿಸ್ಥಾನ, ಮ್ಯಾನ್ಮಾರ್, ಲಾವೋಸ್, ತುರ್ಕೆಮೆನಿಸ್ಥಾನ್, ಉಜ್ಬೆಕಿಸ್ಥಾನ್ ಸಹಿತ ಏಷ್ಯಾದ ಇತರ ರಾಷ್ಟ್ರಗಳಲ್ಲೂ ತಾಪಮಾನ ಸಾಮಾನ್ಯಕ್ಕಿಂತ ಅಧಿಕವಾಗಿದೆ. ಈ ದೇಶಗಳಲ್ಲಿನ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನ ಈಗಾಗಲೇ 40 ಡಿ.ಸೆ.ಗಡಿಯನ್ನು ದಾಟಿದ್ದು ಹೆಚ್ಚಿನೆಡೆಗಳಲ್ಲಿ ಇದು 43 ಡಿ. ಸೆ.ಗಳವರೆಗೂ ತಲುಪಿದೆ.