Advertisement

ಟಾಪ್‌ ಸೀಡ್‌ ಓಪನ್‌ ಟೆನಿಸ್‌: ವೀನಸ್‌ಗೆ ಸೋಲುಣಿಸಿದ ಸೋದರಿ ಸೆರೆನಾ

05:07 PM Aug 14, 2020 | keerthan |

ಲೆಕ್ಸಿಂಗ್ಟನ್‌ (ಕೆಂಟುಕಿ): ಅಕ್ಕ ವೀನಸ್‌ ವಿಲಿಯಮ್ಸ್‌ ವಿರುದ್ಧ ಒಂದಿಷ್ಟು ಆಘಾತಕಾರಿ ಕ್ಷಣಗಳನ್ನು ಎದುರಿಸಿದ ಸೆರೆನಾ ವಿಲಿಯಮ್ಸ್‌ ಮೊದಲ “ಟಾಪ್‌ ಸೀಡ್‌ ಓಪನ್‌’ ವನಿತಾ ಟೆನಿಸ್‌ ಕೂಟದ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಕಳೆದ ರಾತ್ರಿಯ ಜಿದ್ದಾಜಿದ್ದಿ ಸೆಣಸಾಟದಲ್ಲಿ ಸೆರೆನಾ 3-6, 6-3, 6-4 ಅಂತರದ ಜಯ ಸಾಧಿಸುವಲ್ಲಿ ಯಶಸ್ವಿಯಾದರು.

Advertisement

ಇದು ಅಕ್ಕ-ತಂಗಿಯರ ನಡುವಿನ 31ನೇ ಮುಖಾಮುಖೀಯಾಗಿತ್ತು. ಈ ಫ‌ಲಿತಾಂಶದೊಂದಿಗೆ ಸೆರೆನಾರ ಗೆಲುವಿನ ದಾಖಲೆ 19-12ಕ್ಕೆ ಏರಿತು.

“ಇದೊಂದು ಉತ್ತಮ ಗುಣಮಟ್ಟದ ಪಂದ್ಯವಾಗಿತ್ತು. ನಮ್ಮ ಸರ್ವ್‌, ರಿಟರ್ನ್ಸ್ ಎಲ್ಲವೂ ಉತ್ತಮ ಮಟ್ಟದಲ್ಲಿತ್ತು’ ಎಂಬುದಾಗಿ ಸೆರೆನಾ ಪ್ರತಿಕ್ರಿಯಿಸಿದರು.

ಸೆರೆನಾ ಅವರ ಮುಂದಿನ ಎದುರಾಳಿ ಅಮೆರಿಕದವರೇ ಆದ ಶೆಲ್ಬಿ ರೋಜರ್. ವೈಲ್ಡ್‌ಲಾರ್ಡ್‌ ಮೂಲಕ ಪ್ರವೇಶ ಪಡೆದ ಶೆಲ್ಬಿ ಕೆನಡಾದ ಲೇಲಾ ಫೆರ್ನಾಂಡೆಝ್ ವಿರುದ್ಧ 6-2, 7-5 ಅಂತರದ ಗೆಲುವು ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next