Advertisement
ಇದು ಕೋವಿಡ್ ಕಾಲದಲ್ಲಿ ನಡೆದ ಮೊದಲ ಡಬ್ಲ್ಯುಟಿಎ ಟೆನಿಸ್ ಪಂದ್ಯಾವಳಿಯಾಗಿದೆ. ಇದು ಯಶಸ್ವಿಯಾಗಿ ನಡೆದದ್ದು ಮುಂಬರುವ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಗೊಂದು ಸ್ಫೂರ್ತಿಯಾಗಲಿದೆ ಎಂದು ಸಂಘಟಕರು ಅಭಿಪ್ರಾಯಪಟ್ಟಿದ್ದಾರೆ.
“ಅಂಕಣಕ್ಕೆ ಇಳಿಯುವ ಮೊದಲು ನಾನು ಸ್ವಯಂ ನಂಬಿಕೆ ಹೊಂದಿದ್ದೆ. ಈ ಪಂದ್ಯವನ್ನು ನಾನು ಗೆಲ್ಲಬಲ್ಲೆ ಎಂಬುದೊಂದೇ ನನ್ನ ತಲೆಯಲ್ಲಿತ್ತು. ನಾನು ಎಣಿಸಿದ್ದೆಲ್ಲವೂ ಇಲ್ಲಿ ಸಾಕಾರಗೊಂಡಿದೆ’ ಎಂದು ಗೆಲುವಿನ ಬಳಿಕ ಬ್ರಾಡಿ ಹೇಳಿದರು. ಆದರೆ ಕೋವಿಡ್-19 ನಿಯಮಾವಳಿಯಿಂದಾಗಿ ಅವರ ಸಂಭ್ರಮಕ್ಕೆ ಯಾವುದೇ ಅವಕಾಶವಿರಲಿಲ್ಲ. ನೆಚ್ಚಿನ ತಿಂಡಿಯನ್ನು ತರಿಸಿಕೊಂಡು ಸಂಭ್ರಮಿಸುತ್ತೇನೆ ಎಂಬುದಾಗಿ ಬ್ರಾಡಿ ಹೇಳಿದರು.
Related Articles
ವರ್ಷದ 4ನೇ ಹಾಗೂ ಅಂತಿಮ ಗ್ರ್ಯಾನ್‌ಸ್ಲಾಮ್ ಕೂಟವಾಗಬೇಕಿದ್ದ ಯುಎಸ್ ಓಪನ್ ಪಂದ್ಯಾವಳಿ ಈ ಬಾರಿ ವರ್ಷದ ಎರಡನೇ ಟೂರ್ನಿಯಾಗಿ ಆಯೋಜನೆಗೊಳ್ಳಲಿದ್ದು, ಆ. 31ರಿಂದ ಸೆ. 13ರ ತನಕ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಇದಕ್ಕೂ ಮೊದಲು ಸಿನ್ಸಿನಾಟಿ ಮಾಸ್ಟರ್ ಪಂದ್ಯಾವಳಿ ಇಲ್ಲಿ ಆರಂಭವಾಗಲಿದೆ.
Advertisement