ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ಧನಾತ್ಮಕ ವಹಿವಾಟಿನ ಪರಿಣಾಮ ಗುರುವಾರ (ಜೂನ್ 02) ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 400ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ.
ಇದನ್ನೂ ಓದಿ:ಸಂಖ್ಯೆ ಹೆಚ್ಚಾಯಿತೆಂದು ಸರ್ಕಾರಿ ಶಾಲೆಗೆ ಪ್ರವೇಶಾತಿ ನಿರಾಕರಣೆ: ವಿದ್ಯಾರ್ಥಿಗಳು ಅತಂತ್ರ
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 436.94 ಅಂಕ ಏರಿಕೆಯಾಗಿದ್ದು, 55,818.11 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 105.20 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಸೆನ್ಸೆಕ್ಸ್ ಸೂಚ್ಯಂಕ ಏರಿಕೆಯ ನಿಟ್ಟಿನಲ್ಲಿ ರಿಯಲನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಸನ್ ಫಾರ್ಮಾ ಸ್ಯೂಟಿಕಲ್ ಇಂಡಸ್ಟ್ರೀಸ್, ಟಿಸಿಎಸ್, ಇನ್ಪೋಸಿಸ್ ಲಿಮಿಡೆಟ್, ಏಷಿಯನ್ ಪೇಂಟ್ಸ್, ಟಾಟಾ ಸ್ಟೀಲ್ ಲಿಮಿಟೆಡ, ಅದಾನಿ ಪೋರ್ಟ್ಸ್ ಷೇರುಗಳು ಲಾಭ ಗಳಿಸಿದೆ.
ಮತ್ತೊಂದೆಡೆ ಎಚ್ ಡಿಎಫ್ ಸಿ ಬ್ಯಾಂಕ್, ಹೀಟೋ ಮೋಟಾರ್ಸ್, ಪವರ್ ಗ್ರಿಡ್ ಕಾರ್ಪೋರೇಶನ್, ಹಿಂದೂಸ್ತಾನ ಯೂನಿಲಿವರ್, ಬಜಾಜ್ ಆಟೋ, ಕೋಟಕ್ ಮಹೀಂದ್ರ ಬ್ಯಾಂಕ್ ಗಳ ಷೇರು ಮೌಲ್ಯ ನಷ್ಟ ಕಂಡಿದೆ.