ಹೊಸದಿಲ್ಲಿ: ಜೂ.4ರಂದು ಪ್ರಕಟವಾದ ನೀಟ್ ಪರೀûಾ ಫಲಿತಾಂಶ ದೇಶಾದ್ಯಂತ ಭಾರೀ ಆಕ್ರೋಶ ಕೆರಳಿಸಿದೆ. ಗರಿಷ್ಠ 67 ಮಂದಿಗೆ 720ಕ್ಕೆ 720 ಅಂಕ ಬಂದಿದ್ದು ಹೇಗೆ, ಅವರು ದೇಶಕ್ಕೆ ಅಗ್ರರಾಗಿದ್ದು ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸೇರಿ ಕೆಲವು ರಾಜಕೀಯ ಪಕ್ಷಗಳು ನೀಟ್ ಪರೀಕ್ಷೆಯಲ್ಲಿ ಅಕ್ರಮ ವಾಗಿದೆ, ಪ್ರಶ್ನೆಪತ್ರಿಕೆಯೇ ಸೋರಿಕೆಯಾ ಗಿದೆ. ಇದಕ್ಕೆ ಕೇಂದ್ರ ಸರಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿವೆ. ಇತ್ತೀಚೆ ಗಷ್ಟೇ ವಿದ್ಯಾರ್ಥಿಗಳು ಮೇ 5ರಂದು ನಡೆದ ನೀಟ್ ಪರೀಕ್ಷೆಯನ್ನೇ ರದ್ದು ಮಾಡಿ, ಹೊಸತಾಗಿ ಪರೀಕ್ಷೆ ನಡೆಸಬೇ ಕೆಂದು ಆಗ್ರಹಿಸಿದ್ದನ್ನು ಇಲ್ಲಿ ನೆನಪಿಸಿ ಕೊಳ್ಳಬಹುದು.
ನೀಟ್ ಪರೀಕ್ಷೆ ಆಯೋಜಿಸುವ ಎನ್‌ಟಿಎ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ), ಸಮಯ ನಷ್ಟವಾಗಿದೆ ಎಂದು ದೂರಿತ್ತ ವಿದ್ಯಾರ್ಥಿಗಳಿಗೆ ಕೃಪಾಂಕ (ಗ್ರೇಸ್ ಮಾರ್ಕ್Õ) ನೀಡಲಾಗಿದೆ ಎಂದು ಬುಧ ವಾರ ಹೇಳಿತ್ತು. ಅಲ್ಲದೇ ಎನ್‌ಸಿಇಆರ್‌ಟಿ ಪಠ್ಯದಲ್ಲಿ ಬದಲಾವಣೆಯಾಗಿದ್ದು, ಕೃಪಾಂಕ ನೀಡಿದ್ದು ವಿದ್ಯಾರ್ಥಿಗಳ ಅಂಕ ಗಳು ಹೆಚ್ಚಲು ಕಾರಣವಾಗಿದೆ ಎಂದು ಸ್ಪಷ್ಟನೆ ನೀಡಿತ್ತು.
ಇದರ ಬೆನ್ನಲ್ಲೇ ಭಾರೀ ಪ್ರಮಾಣದಲ್ಲಿ ಪ್ರತಿರೋಧ ವ್ಯಕ್ತವಾಗಿತ್ತು. ಕೃಪಾಂಕ ನೀಡಲು ಆದೇಶಿಸಿದ ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರತಿ ಎಲ್ಲಿದೆ? ಎಷ್ಟು ಮಂದಿ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿದೆ? ಯಾಕೆ ಪೂರ್ಣ ಪಟ್ಟಿ ಬಿಡುಗಡೆ ಮಾಡುತ್ತಿಲ್ಲ? ಈ ಬಾರಿ ನಿಮ್ಮ ಪತ್ರಿಕಾ ಬಿಡುಗಡೆಯಲ್ಲಿ ಪರ್ಸೆಂ ಟೈಲ್ ಮಾತ್ರವಿದೆ, ಅಂಕಗಳು ಏಕಿಲ್ಲ? ಎಂದು ಪ್ರಶ್ನೆಗಳ ಸುರಿಮಳೆಯಾಗಿತ್ತು.
ಇನ್ನು ಕೆಲವರು, 180 ವಿದ್ಯಾರ್ಥಿಗಳು ಪ್ರತೀ ಪ್ರಶ್ನೆಗಳೂ ಸರಿ ಉತ್ತರ ಬರೆದರೆ 720 ಅಂಕ ಪಡೆಯಲು ಸಾಧ್ಯ. ಒಂದು ವೇಳೆ ತಪ್ಪು ಉತ್ತರ ಬರೆದರೆ 716 (4 ಅಂಕ ಕಡಿತ) ಅಥವಾ 715 (ತಪ್ಪು ಉತ್ತರಕ್ಕಾಗಿ 1 ಋಣಾಂಕ) ಪಡೆಯಲು ಸಾಧ್ಯ. 719, 718, 717, 714, 709ರ ಅಂಕ ಸಿಗಲು ಸಾಧ್ಯವೇ ಇಲ್ಲ ಎಂದು ಆರೋಪಿಸಿದ್ದಾರೆ.
‘ಸರ್’ ವಿದೇಶಿ ನೆಲದಲ್ಲಿ ಯುದ್ಧ ನಿಲ್ಲಿಸಿರುವುದಾಗಿ ಹೇಳುತ್ತಾರೆ. ಆದರೆ ಅವರಿಗೆ ದೇಶದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿರುವು ದನ್ನೇ ತಡೆಯಲಾಗುತ್ತಿಲ್ಲ. -ಕಾಂಗ್ರೆಸ್
ನೀಟ್ ಆಕಾಂಕ್ಷಿ ಆತ್ಮಹತ್ಯೆ: ವರ್ಷದ 10ನೇ ಪ್ರಕರಣ
ಕೋಟಾ: ನೀಟ್ ಪರೀಕ್ಷೆಯ ಫಲಿತಾಂಶ ಬಂದ ಬೆನ್ನಲ್ಲೇ ನೀಟ್-ಯುಜಿ ಆಕಾಂಕ್ಷಿಯಾಗಿದ್ದ 18 ವರ್ಷದ ವಿದ್ಯಾರ್ಥಿ ನಿ ಕಟ್ಟಡವೊಂದರ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಧ್ಯಪ್ರದೇಶದ ರೇವಾ ಜಿಲ್ಲೆಯ ಬಗೀಶಾ ತಿವಾರಿ ತನ್ನ ತಾಯಿ ಹಾಗೂ ಸೋದರನೊಂದಿಗೆ ಕೋಟಾದಲ್ಲಿರುವ ಇದೇ ಕಟ್ಟಡದ 5ನೇ ಮಹಡಿಯಲ್ಲಿ ವಾಸವಿದ್ದಳು. ಬುಧವಾರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಸಕ್ತ ವರ್ಷ ನೀಟ್ ಆಕಾಂಕ್ಷಿ ಗಳ ಸಾವಿನ ಸಂಖ್ಯೆ 10ಕ್ಕೇರಿದೆ.