Advertisement

Washington: ಇಲ್ಲಿ ಟೂಥ್‌ಪೇಸ್ಟ್‌, ಸೋಪ್‌, ಚಾಕೊಲೇಟ್‌ಗಳಿಗೂ ಬೀಗ!

11:13 PM Sep 03, 2023 | Team Udayavani |

ವಾಷಿಂಗ್ಟನ್‌: ಅಮೆರಿಕದಲ್ಲಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ಇದು ಸಾಮಾನ್ಯ ಜನರ ಜೀವನವನ್ನು ಹೈರಾಣಾಗಿಸಿದೆ. ಇದರಿಂದ ಕಂಗೆಟ್ಟಿರುವ ಕೆಲವರು ದಿನನಿತ್ಯದ ವಸ್ತುಗಳ ಕಳ್ಳತನಕ್ಕೆ ಕೈಹಾಕಿದ್ದಾರೆ. ಇತ್ತೀಚೆಗೆ ಅಮೆರಿಕದಲ್ಲಿ ದೊಡ್ಡ ದೊಡ್ಡ ಚಿಲ್ಲರೆ ಮಳಿಗೆಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ವಾಲ್‌ಮಾರ್ಟ್‌, ಟಾರ್ಗೆಟ್‌, ಸಿವಿಎಸ್‌, ವಾಲ್‌ಗ್ರೀನ್ಸ್‌ ತರಹದ ಮಳಿಗೆಗಳಲ್ಲಿ ಟೂಥ್‌ಪೇಸ್ಟ್‌, ಚಾಕೊಲೇಟ್‌, ವಾಷಿಂಗ್‌ ಪೌಡರ್‌, ಡಿಯೋಡ್ರೆಂಟ್‌ ಸೇರಿದಂತೆ ಚಿಕ್ಕ ಚಿಕ್ಕ ವಸ್ತುಗಳನ್ನು ಸಹ ಕಪಾಟುಗಳಲ್ಲಿ ಲಾಕ್‌ ಮಾಡಲಾಗುತ್ತಿದೆ. “ಕಳ್ಳತನ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಳಿಗೆಗಳ ಅಧಿಕಾರಿಗಳು ತಿಳಿಸಿದ್ದಾರೆ.

Advertisement

“ಅಮೆರಿಕದ ರೀಟೆಲ್‌ ಮಳಿಗೆಗಳಲ್ಲಿ ಕಳ್ಳತನ ಮತ್ತು ಸಂಘಟಿತ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಈ ವರ್ಷದ ಮೊದಲ ಐದು ತಿಂಗಳಲ್ಲಿ ರೀಟೆಲ್‌ ಮಳಿಗೆಗಳಲ್ಲಿ ಕಳ್ಳತನ ಪ್ರಕರಣಗಳು ಶೇ.120ರಷ್ಟು ಹೆಚ್ಚಳವಾಗಿದೆ. ಮಳಿಗೆಗಳ ಸಿಬಂದಿ ಮೇಲೆ ಸಂಘಟಿತ ಅಪರಾಧ ಕೃತ್ಯಗಳು, ಹಿಂಸಾಚಾರ ಪ್ರಕರಣಗಳು ಹೆಚ್ಚಿದೆ. ಇದೊಂದು ಗಂಭೀರ ವಿಷಯವಾಗಿದೆ. ಹೀಗಾಗಿ ಕಳ್ಳತನದ ಕಡಿವಾಣಕ್ಕಾಗಿ ಅಗತ್ಯ ವಸ್ತುಗಳಿಗೆ ಕಪಾಟಿನಲ್ಲಿ ಲಾಕ್‌ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ’ ಎಂದು ಟಾರ್ಗೆಟ್‌ ಕಂಪೆನಿ ಮುಖ್ಯ ನಿರ್ವಾಹಕ ಬ್ರಿಯಾನ್‌ ಕಾರ್ನೆಲ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next