Advertisement

ಅಣುಬಾಂಬ್‌ ಶಕ್ತಿ ಹಿಂದಿಕ್ಕಿದ ಟೋಂಗಾ ಸ್ಫೋಟ

11:58 PM Jan 24, 2022 | Team Udayavani |

ಹೊಸದಿಲ್ಲಿ: ದಕ್ಷಿಣ ಪೆಸಿಫಿಕ್‌ ರಾಷ್ಟ್ರವಾದ ಟೋಂಗಾದಲ್ಲಿ ಜ. 15ರಂದು ಸಂಭವಿಸಿದ್ದ ಜ್ವಾಲಾಮುಖಿ ಸ್ಫೋಟದ ತೀವ್ರತೆಯು 2ನೇ ಮಹಾಯುದ್ಧದಲ್ಲಿ ಹಿರೋಶಿಮಾ- ನಾಗಸಾಕಿಯಲ್ಲಿ ಸಂಭವಿಸಿದ ಅಣುಬಾಂಬ್‌ ಸ್ಫೋಟಗಳಿಗಿಂತ ದ್ವಿಗುಣವಾಗಿತ್ತು ಎಂದು ತಜ್ಞರು ತಿಳಿಸಿದ್ದಾರೆ.

Advertisement

ದ್ವೀಪ ರಾಷ್ಟ್ರದ ಒಂದು ಪಾರ್ಶ್ವವನ್ನು ಬೂದಿಯಾಗಿಸಿದ ಹುಂಗಾ ಟೋಂಗಾ- ಹುಂಗಾ ಹಪಾಯ್‌ ಅಗ್ನಿ ಪರ್ವತವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ವತಿಯಿಂದ (ನಾಸಾ) ಗಗನಕ್ಕೆ ಹಾರಿಬಿಡಲಾಗಿರುವ ಅರ್ತ್‌ ಅಬ್ಸರ್ವೇಟರಿಯಿಂದ ಅಧ್ಯಯನ ಮಾಡಲಾಗಿದೆ.

1945ರ ಆಗಸ್ಟ್‌ನಲ್ಲಿ ನಡೆಸಲಾಗಿದ್ದ ಹಿರೋಶಿಮಾ- ನಾಗಸಾಕಿಯಲ್ಲಿ ಅಣುಬಾಂಬ್‌ ದಾಳಿಯಲ್ಲಿ 15 ಸಾವಿರ ಟನ್‌ನಷ್ಟು (ಟಿಎನ್‌ಟಿ) ಶಕ್ತಿಶಾಲಿಯಾದ ಸ್ಫೋಟ ಉಂಟಾಗಿತ್ತು. ಟೋಂಗಾ ಅಗ್ನಿಪರ್ವತ ಸ್ಫೋಟಗೊಂಡಾಗ 3 ಕೋಟಿ ಟನ್‌ (ಟಿಎನ್‌ಟಿ)ನಷ್ಟು ಶಕ್ತಿಶಾಲಿ ಸ್ಫೋಟ ಆಗಿತ್ತು ಎಂದು ತಜ್ಞರು ವಿವರಿಸಿದ್ದಾರೆ.

ಇದನ್ನೂ ಓದಿ:ರೀಬಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್‌ ; “ರೀಬಾಕ್‌ ಆ್ಯಕ್ಟಿವ್‌ ಫಿಟ್‌ 1.0′ ಬಿಡುಗಡೆ

ಜ್ವಾಲಾಮುಖಿ ಸ್ಫೋಟ ಸಂಭವಿಸಿದಾಗ ಅದರ ಲಾವಾ ಹಾಗೂ ಬೆಟ್ಟದ ತುದಿಯಿಂದ 40 ಕಿ.ಮೀ. ಮೇಲಕ್ಕೆ ಚಿಮ್ಮಿದ್ದವು. ಈ ಅಗ್ನಿಪರ್ವತವು ಸಾಗರ­ದಾಳ­ದಲ್ಲಿ ಇದ್ದಿದ್ದರಿಂದ ಜ್ವಾಲಾಮುಖಿ ಸ್ಫೋಟಗೊಳ್ಳುತ್ತಲೇ ಸಮುದ್ರದಲ್ಲಿ ಸುನಾಮಿ ಮಾದರಿಯ ದೈತ್ಯ ಅಲೆಗಳು ಎದ್ದಿದ್ದವು ಎಂದು ನಾಸಾದ ತಜ್ಞರು ವಿವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next