Advertisement

ನಾಳೆ, ನಾಡಿದ್ದು ಸಾಮಾನ್ಯ ಪ್ರವೇಶ ಪರೀಕ್ಷೆ

07:00 AM Apr 17, 2018 | Team Udayavani |

ಬೆಂಗಳೂರು: ಎಂಜಿನಿಯರಿಂಗ್‌ ಸೇರಿ ವೃತ್ತಿಪರ ಕೋರ್ಸ್‌ಗಳ ಸರ್ಕಾರಿ ಕೋಟಾದ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಏ.18ರಿಂದ ಆರಂಭವಾಗಲಿದೆ.

Advertisement

1,00,071 ಪುರುಷ ಅಭ್ಯರ್ಥಿ, 98,568 ಮಹಿಳಾ ಅಭ್ಯರ್ಥಿ ಸೇರಿ 1,98,639 ಅಭ್ಯರ್ಥಿಗಳು ಸಿಇಟಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಬೆಂಗಳೂರಿನ 86 ಸೇರಿ ರಾಜ್ಯದ 430 ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಏ.18ರ ಬೆಳಗ್ಗೆ 10.30ರಿಂದ 11.50ರ ತನಕ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರ ತನಕ ಗಣಿತ ಮತ್ತು ಏ.19ರ ಬೆಳಗ್ಗೆ 10.30ರಿಂದ 11.50ರ ತನಕ ಭೌತಶಾಸ್ತ್ರಹಾಗೂ ಮಧ್ಯಾಹ್ನ 2.30ರಿಂದ 3.50ರ ತನಕ ರಸಾಯನ ಶಾಸ್ತ್ರ ಪರೀಕ್ಷೆ ನಡೆಯಲಿದೆ. 

ಹೊರನಾಡು ಮತ್ತು ಗಡಿನಾಡಿನ ಕನ್ನಡ ಅಭ್ಯರ್ಥಿಗಳಿಗೆ ಬೆಂಗಳೂರು ಕೇಂದ್ರದಲ್ಲಿ ಏ.20ರಂದು ಕನ್ನಡ ಪರೀಕ್ಷೆ ನಡೆಯ
ಲಿದೆ. ಹೊರನಾಡು, ಗಡಿನಾಡು ಭಾಗದ 2,240 ಅಭ್ಯರ್ಥಿಗಳು ಕನ್ನಡ ಪರೀಕ್ಷೆ ಬರೆಯಲಿದ್ದಾರೆ.

ವಿದ್ಯಾರ್ಥಿಗಳಿಗೆ ಸೂಚನೆ: ಓಎಂಆರ್‌ ಉತ್ತರ ಪತ್ರಿಕೆಯು ಅಭ್ಯರ್ಥಿಗೆ ನಿರ್ದಿಷ್ಟವಾಗಿದ್ದು,ಪ್ರವೇಶ ಪತ್ರದ ಸಂಖ್ಯೆ, ಅಭ್ಯರ್ಥಿ ಹೆಸರು ಹಾಗೂ ಪ್ರಶ್ನೆಪತ್ರಿಕೆಯ ವರ್ಷನ್‌ ಕೋಡ್‌ ಅದರಲ್ಲಿ ಮುದ್ರಿಸಲಾಗಿದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಓಎಂಆರ್‌ ಉತ್ತರ ಪತ್ರಿಕೆಯಲ್ಲಿ ಎಲ್ಲವೂ ಸರಿಯಾಗಿದೆ ಎಂಬುದನ್ನು ಪರಿಶೀಲಿಸಿ ನಂತರ ಪರೀಕ್ಷೆ ಬರೆಯಬೇಕು. ಓಎಂಆರ್‌ ಶೀಟ್‌ನಲ್ಲಿ ಉತ್ತರ ಟಿಕ್‌ ಮಾಡಲು ನೀಲಿ ಅಥವಾ ಕಪ್ಪು ಶಾಯಿ ಬಾಲ್‌ ಪೆನ್‌ ತೆಗೆದುಕೊಂಡು ಹೋಗಬೇಕು. ಪರೀಕ್ಷೆ ಆರಂಭಕ್ಕೂ ಮೊದಲೇ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿ ಇರಬೇಕೆಂದು ಪ್ರಾಧಿಕಾರ ಸೂಚಿಸಿದೆ.

Advertisement

ಪ್ರವೇಶ ಪತ್ರದ ಜತೆಗೆ ಕಾಲೇಜಿನ ಗುರುತಿನ ಚೀಟಿ, 12ನೇ ತರಗತಿ ಪ್ರವೇಶ ಪತ್ರ, ಬಸ್‌ಪಾಸ್‌,ಆಧಾರ್‌ ಕಾರ್ಡ್‌, ಪಾನ್‌ಕಾರ್ಡ್‌ ಅಥವಾ ಯಾವುದಾದರೂ ಒಂದು ಗುರುತಿನ ಚೀಟಿ ಕೊಂಡೊಯ್ಯಬೇಕು. ಪ್ರಶ್ನೆಗಳು ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿರುತ್ತದೆ. ಯಾವುದೇ ಭಾಷೆಯ ಪ್ರಶ್ನೆಯಲ್ಲಿ ಸಂಶಯ ಬಂದರೂ ಇಂಗ್ಲಿಷ್‌ ಭಾಷೆಯ ಪ್ರಶ್ನೆಯೇ ಅಂತಿಮವೆಂದು ಪರಿಗಣಿಸಬೇಕೆಂದು ನಿರ್ದೇಶಿಸಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರೀಕ್ಷೆ ನಡೆಯಲಿದೆ.

ಕೆಪಿಎಸ್ಸಿ ಪರೀಕ್ಷೆ ಮುಂದೂಡಿಕೆ
ಬೆಂಗಳೂರು:
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ 12ರಿಂದ 31ರವರೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳು,
ನವದೆಹಲಿ ಹಾಗೂ ಮುಸ್ಸೂರಿಯಲ್ಲಿ ನಿಗದಿಯಾಗಿದ್ದ 2018ನೇ ಸಾಲಿನ ಇಲಾಖಾ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಮೇ 19ರಿಂದ ಜೂನ್‌ 8ರವರೆಗೆ ಪರೀಕ್ಷೆಗಳು ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ ಎಂದು ಕರ್ನಾಟಕ ಲೋಕ ಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next