Advertisement
ಬಾಗಲಕೋಟೆ ಜಿಲ್ಲಾ ಕೇಂದ್ರದಿಂದ ಬೆಳಗಾವಿ-ರಾಯಚೂರು ಹೆದ್ದಾರಿ ಕಡೆಗೆ 20 ಕಿ.ಮೀ ಸಾಗಿದರೆ ಕಲಾದಗಿ ಗ್ರಾಮ ಸಿಗುತ್ತದೆ. ಹಾಗೇ ನೀವು ಕಣ್ಣು ಹಾಯಿಸಿ, ರಾಷ್ಟ್ರೀಯ ಹೆದ್ದಾರಿಯಿಂದ 500 ಮೀಟರ್ ದೂರದಲ್ಲಿ ಒಂದಷ್ಟು ಗೋರಿಗಳು ಕಾಣುತ್ತವೆ. ಹತ್ತಿರ ಹೋದರೆ, ಸುಮಾರು ಒಂದೂವರೆ ಎಕರೆಯಲ್ಲಿ ಸುಮಾರು 40 ಗೋರಿಗಳಿರುವ ದೃಶ್ಯ ಕಾಣುತ್ತದೆ. ಇದೇಕೆ ಇಷ್ಟೊಂದು ಗೋರಿಗಳು ಅಂತ ಹುಡುಕಹೊರಟರೆ ಇತಿಹಾಸದ ಪುಟವೊಂದು ತೆರೆದುಕೊಳ್ಳುತ್ತದೆ.
ಒಂದೇ ಜಾಗದ ಅಕ್ಕ-ಪಕ್ಕದಲ್ಲಿ ತಾಯಿ ಮತ್ತು ಮಗಳ ಗೋರಿಗಳನ್ನು ಕಾಣಬಹುದು. ತಾಯಿಯ ಮಡಿಲಲ್ಲಿ ಬೆಳೆದ 13 ತಿಂಗಳ ಮಗಳು ಪೌಲಿನಾ ಕಿಂಗ್ ಸಾವಿನಲ್ಲೂ ತನ್ನ ತಾಯಿಯ ಪಕ್ಕದಲ್ಲಿ ಮಲಗಿ¨ªಾಳೆ. ಆಕೆಯ ಹೆಸರು ಮೇರಿ ಆನ್‌ಕಿಂಗ್. 1822 ಜುಲೈ 11ರಲ್ಲಿ ಮೃತಪಟ್ಟಿ¨ªಾಳೆ ಅಂತ ಬರೆದಿದೆ. ಮೇರಿಯ ಗಂಡ ಹೆನ್ರಿ ರೈಸ್ ಕಿಂಗ್ ಪತ್ನಿಯ ಗೋರಿಯ ಮೇಲೆ “ಹೋಗು, ಎಲ್ಲ ಬಿಟ್ಟು ಹೋಗು, ನಮ್ಮನ್ನು ಮರೆಯಬೇಡ. ನಾಳೆ ನಾವೆಲ್ಲರೂ ನಿನ್ನವರಾಗುತ್ತೇವೆ’ ಎಂಬ ಸಾಲುಗಳನ್ನು ಕೆತ್ತಿಸಿದ್ದಾನೆ. ಇದು ನೊಡುಗರನ್ನು ಮೌನಿಯನ್ನಾಗಿಸುತ್ತದೆ.
Related Articles
ನಮ್ಮನ್ನು ಆಳಲು ಬಂದು ಇಲ್ಲಿಯೇ ಮಣ್ಣಾದ ಸಾಕಷ್ಟು ಅಧಿಕಾರಿಗಳ ಗೋರಿಗಳಿವೆ. ಅದರಲ್ಲಿ ಅಧಿಕಾರಿಯೊಬ್ಬರ ಕ್ಯಾಪ್ಟನ್ ಆರ್.ಇ. ಬೋರ್ಡಮ ಮತ್ತು ಈತನ ಮಡದಿ ಆರ್.ಇ ಜಿಮಂತ, ಇವರಿಬ್ಬರ ಗೋರಿಗಳ ಮುಂದೆ ಮಗ ಎಡ್ವರ್ಡ ಹೆನ್ರಿ ಮತ್ತು ಮಗಳು ಜಾನ್ ಗೇಸ್ಟ ಎಂದು ಉಲ್ಲೇಖವಿದೆ.
Advertisement
ಅವನತಿಯಲ್ಲಿ ಅಧಿಕಾರಿಗಳದ್ದು ಸುಮಾರು 150 ವರ್ಷಗಳ ಈ ಗೋರಿಗಳಿರುವ ಜಾಗದಲ್ಲಿ ಮುಳ್ಳಿನ ಗಿಡಗಂಟೆಗಳು ಹುಲುಸಾಗಿ ಬೆಳೆದಿವೆ. ಒಣಗಿದ ಹುಲ್ಲು ಗೋರಿಗಳ ಸುತ್ತಲೂ ಬೆಳೆದು ನಿಂತಿದೆ. ರಕ್ಷಣೆಯೇ ಇಲ್ಲದ ಕಾರಣದಿಂದ ಗೋರಿಗಳು ಹಾಳು ಬಿದ್ದಿವೆ. ಈ ಅಧಿಕಾರಿಗಳ ಗೋರಿಗಳನ್ನು ನೋಡಲು ಇಂಗ್ಲೆàಂಡಿನಲ್ಲಿರುವ ಅವರ ವಂಶಸ್ಥರು ಆಗಾಗ ಬಂದು ಹೋಗುತ್ತಾರೆ ಎಂದು ಕಲಾದಗಿಯ ಜನ ಹೇಳುತ್ತಾರೆ. ಚಿತ್ರ-ಲೇಖನ :ರೇವಣ್ಣ ಅರಳಿ