Advertisement

Bellary; ಕೊಳಗಲ್ಲು ಗ್ರಾಮದಲ್ಲಿ ಖಾಕಿ ಪಹರೆ; ಊರು ಬಿಟ್ಟು ಹಲವರು

02:24 PM Apr 08, 2024 | Team Udayavani |

ಬಳ್ಳಾರಿ: ಕೊಳಗಲ್ಲು ಗ್ರಾಮದಲ್ಲಿ ಎರ್ರೆಪ್ಪ ದೇವರ ಮೂರ್ತಿ ಕೂರಿಸುವ ವಿಚಾರಕ್ಕೆ ಗಲಾಟೆ ಪ್ರಕರಣದ ಕಾರಣದಿಂದ ಈಗ ಹಲವಾರು ಮಂದಿ ಗ್ರಾಮ ತೊರೆದಿದ್ದಾರೆ.

Advertisement

ಕೊಳಗಲ್ಲು ಗ್ರಾಮದಲ್ಲಿ ಖಾಕಿ ಪಡೆ ಸರ್ಪಗಾವಲು ಹಾಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 50 ಜನರ ಬಂಧನವಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ಹೆದರಿ ಹಲವು ಪುರುಷರು ಗ್ರಾಮ ತೊರೆದಿದ್ದಾರೆ. ಕೊಳಗಲ್ಲು ಗ್ರಾಮದಲ್ಲಿ ಬಿಗುವಿನ ವಾತಾವರಣವಿದೆ.

ಎರ್ರಿ ಸ್ವಾಮಿ ಮಠದ ಮುಂದೆ ಡಿಎಆರ್ ಪೊಲೀಸರ ನಿಯೋಜನೆ ಮಾಡಲಾಗಿದೆ. ಡಿಎಆರ್, ಕೆಎಸ್ ಆರ್ಪಿ ಪೊಲೀಸರು ಗ್ರಾಮದಲ್ಲಿ ಪಹರೆ ಹಾಕಿದ್ದಾರೆ.

ಘಟನೆ ಹಿನ್ನೆಲೆ

ಕುರುಬ ಸಮುದಾಯದ ಅವಧೂತ ಎರ್ರಿತಾತಾ ದೇವಸ್ಥಾನದಲ್ಲಿ ಎಸ್ಸಿ ಸಮುದಾಯಕ್ಕೆ ಸೇರಿದ, ಭಕ್ತ, ಧರ್ಮಾಧಿಕಾರಿ ಎರಿಯಪ್ಪನ ವಿಗ್ರಹ ಪ್ರತಿಷ್ಠಾಪನೆ ಮಾಡಿತ್ತು.

Advertisement

ಇದಕ್ಕೆ ಕುರುಬ ಸಮುದಾಯ ಆಕ್ಷೇಪ ವ್ಯಕ್ತಪಡಿಸಿ, ನ್ಯಾಯಾಲ‌ಯದಿಂದ ವಿಗ್ರಹ ತೆರವಿಗೆ ಆದೇಶ ತಂದು ಕೆಲ ದಿನಗಳ ಹಿಂದೆ ಜಿಲ್ಲಾಡಳಿದ ಮೂಲಕ ವಿಗ್ರಹ ತೆರವು ಮಾಡಿತ್ತು.

ಇದೇ ವಿಚಾರದಲ್ಲಿ ಕಳೆದೊಂದು ತಿಂಗಳಿನಿಂದ ಮುಸುಕಿನ ಗುದ್ದಾಟ ನಡೆಯುತ್ತಿತ್ತು

Advertisement

Udayavani is now on Telegram. Click here to join our channel and stay updated with the latest news.

Next