Advertisement

Wholesale market ; 50ರೂ.ಗೆ ಕೆ.ಜಿ.ಟೊಮೇಟೊ

12:19 AM Aug 15, 2023 | Team Udayavani |

ಹೊಸದಿಲ್ಲಿ: ಸಗಟು ಮಾರುಕಟ್ಟೆಯಲ್ಲಿ ಟೊಮೇಟೊ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಪತೀ ಕೆ.ಜಿ. ಟೊಮೇಟೊವನ್ನು 50 ರೂ.ಗೆ ಮಾರಾಟ ಮಾಡುವಂತೆ ನ್ಯಾಶನಲ್‌ ಕೋ-ಅಪರೇಟಿವ್‌ ಕನ್ಸೂಮರ್ಸ್‌ ಫೆಡರೇಶನ್‌ ಆಫ್ ಇಂಡಿಯಾ ಲಿ.(ಎನ್‌ಸಿಸಿಎಫ್) ಮತ್ತು ನ್ಯಾಶ‌ನಲ್‌ ಅಗ್ರಿಕಲ್ಚರ್‌ ಮಾರ್ಕೆಟಿಂಗ್‌ ಫೆಡರೇಶನ್‌ ಆಫ್ ಇಂಡಿಯಾ ಲಿ.(ಎನ್‌ಎಎಫ್ಇಡಿ)ಗೆ ಕೇಂದ್ರ ಸರಕಾರ‌ ಸೋಮವಾರ ನಿರ್ದೇಶಿಸಿದೆ.

Advertisement

ಟೊಮೇಟೊ ಬೆಲೆ ಗಗನಕ್ಕೆ ಏರಿದ ಹಿನ್ನೆಲೆಯಲ್ಲಿ ಕಳೆದ ಜುಲೈಯಿಂದ ದಿಲ್ಲಿ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಬಿಹಾರದಲ್ಲಿ ರಿಯಾಯಿತಿ ಬೆಲೆಗೆ ಎನ್‌ಸಿಸಿಎಫ್ ಮತ್ತು ಎನ್‌ಎಎಫ್ಇಡಿ ಟೊಮೇಟೊ ಮಾರಾಟ ಮಾಡುತ್ತಿವೆ. ಇಲ್ಲಿಯವರೆಗೆ 15 ಲಕ್ಷ ಕೆ.ಜಿ. ಟೊಮೇಟೊ ಅನ್ನು ಈ ಎರಡು ಸಂಸ್ಥೆಗಳು ಮಾರಾಟ ಮಾಡಿವೆ.

 

Advertisement

Udayavani is now on Telegram. Click here to join our channel and stay updated with the latest news.

Next