Advertisement
ತನಗೆ ಕಾಯಿಲೆಯಿದ್ದರೂ ಬಣ್ಣದ ಲೋಕದಲ್ಲಿ ಸಮಂತಾ ನಿರಂತರವಾಗಿ ಕಾಣಿಸಿಕೊಂಡಿದ್ದಾರೆ. ಚಿಕಿತ್ಸೆಯ ಜೊತೆ ಜೊತೆಗೆ ತಮ್ಮ ಸಿನಿಮಾಗಳ ಕೆಲಸದಲ್ಲೂ ಅವರು ಸಕ್ರೀಯವಾಗಿ ತೂಡಗಿಸಿಕೊಂಡಿದ್ದಾರೆ.
Related Articles
Advertisement
ಇದೀಗ ನಟಿ ಸಮಂತಾ ಈ ಬಗ್ಗೆ ಮೌನ ಮುರಿದಿದ್ದಾರೆ. ಸುಳ್ಳು ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಗರಂ ಆಗಿದ್ದಾರೆ.
“ಮಯೋಸಿಟಿಸ್ ಚಿಕಿತ್ಸೆಗೆ 25 ಕೋಟಿ ರೂ. ಖರ್ಚು? ಯಾರೋ ಕೆಟ್ಟದಾಗಿ ಡೀಲ್ ಮಾಡಿಕೊಂಡಿದ್ದಾರೆ. ಇದರ ಚಿಕ್ಕ ಖರ್ಚನ್ನು ನಾನೇ ಮಾಡುತ್ತಿದ್ದೇನೆ ಎನ್ನುವುದು ನನಗೆ ಖುಷಿಯಿದೆ. ನಾನು ವೃತ್ತಿ ಜೀವನದಲ್ಲಿ ಮಾಡಿದ ಎಲ್ಲಾ ಕೆಲಸಗಳಿಗೆ ನಾನು ಮಾರ್ಬಲ್ಸ್ ಗಳಿಂದ ಪಾವತಿಸಿಲ್ಲ. ನನ್ನನು ನಾನು ಆರಾಮವಾಗಿ ನೋಡಿಕೊಳ್ಳುಬಹುದು. ಮಯೋಸಿಟಿಸ್ ನಿಂದ ಸಾವಿರಾರು ಮಂದಿ ಬಳಲುತ್ತಿದ್ದಾರೆ. ಚಿಕಿತ್ಸೆ ಸಂಬಂಧ ನೀಡುವ ಮಾಹಿತಿಯೊಂದಿಗೆ ನಾವು ಜವಬ್ದಾರಿಯುತವಾಗಿ ಇರಬೇಕು” ಎಂದು ನಟಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ಸಮಂತಾ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸಿರುವ ʼಖುಷಿʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಈ ಸಿನಿಮಾ ಸೆ. 1 ರಂದು ತೆರೆಗೆ ಬರಲಿದೆ. ಇದಾದ ಬಳಿಕ ರಾಜ್ ಮತ್ತು ಡಿಕೆ ಅವರ ‘ಸಿಟಾಡೆಲ್: ಇಂಡಿಯಾ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.