Advertisement

ಲವ್‌ ಮಾಕ್ಟೇಲ್ ಗೆ ಟಾಲಿವುಡ್‌ ಮಂದಿ ಫಿದಾ

09:09 AM Apr 04, 2020 | Suhan S |

ನಟ ಮದರಂಗಿ ಕೃಷ್ಣ ಮೊದಲ ಬಾರಿಗೆ ನಿರ್ದೇಶಿಸಿ ಜೊತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದ “ಲವ್‌ ಮಾಕ್ಟೇಲ್’ ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

Advertisement

ಇದೀಗ ಕನ್ನಡ ಮಾತ್ರವಲ್ಲದೆ ಹಲವು ಪರಭಾಷೆಯ ಸ್ಟಾರ್, ಡೈರೆಕ್ಟರ್ “ಲವ್‌ ಮಾಕ್ಟೇಲ್’ ಚಿತ್ರ ನೋಡಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇತ್ತೀಚೆಗೆ “ಲವ್‌ ಮಾಕ್ಟೇಲ್’ ಚಿತ್ರವನ್ನು ತೆಲುಗಿನ ಸ್ಟಾì ನಟ ಅಲ್ಲು ಅರ್ಜುನ್‌ ತಮ್ಮ ಅಲ್ಲು ಸಿರೀಶ್‌ ಆನ್ಲೈನ್‌ ನಲ್ಲಿ ವೀಕ್ಷಿಸಿದ್ದಾರೆ. ಅಲ್ಲದೆ ಚಿತ್ರ ತುಂಬಾ ಇಷ್ಟವಾಗಿದೆಯೆಂದು ಟ್ವೀಟ್‌ ಮಾಡಿ ಸಂತಸವನ್ನೂ ಹಂಚಿಕೊಂಡಿದ್ದಾರೆ. “ಲವ್‌ ಮಾಕ್ಟೇಲ್’ ಚಿತ್ರದ ಪೋಸ್ಟರ್‌ ಟ್ವೀಟ್‌ ಮಾಡಿರುವ ಅಲ್ಲು ಸಿರೀಶ್‌, ಅಮೇಜಾನ್‌ ಪ್ರೈಮ್‌ನಲ್ಲಿ “ಲವ್‌ ಮಾಕ್ಟೇಲ್’ ಕನ್ನಡ ಸಿನಿಮಾವನ್ನು ನೋಡಿದೆ. ಸಿನಿಮಾ ತುಂಬಾ ಇಷ್ಟವಾಯಿತು. ಹೃದಯಕ್ಕೆ ಮುದ ನೀಡಿತು. 90 ಹಾಗೂ 2000ರ ಆಸುಪಾಸಿನ ಹುಡುಗರು ಈ ಸಿನಿಮಾವನ್ನು ಹೆಚ್ಚು ಪ್ರೀತಿಸುತ್ತಾರೆ. ಟ್ಯೂಶನ್‌ ಕ್ರಷಸ್‌, ಎಸ್‌ ಎಂಎಸ್‌ ದಿನಗಳು, ಗಲ್ಲಿ ಕ್ರಿಕೆಟ್‌, ಪ್ರಿ ಸ್ಮಾರ್ಟ್‌ ಫೋನ್‌ ಲವ್‌ ಇವೆಲ್ಲವುಗಳು ನನ್ನನ್ನು ಹಿಂದಿನ ದಿನಗಳಿಗೆ ಕರೆದುಕೊಂಡು ಹೋದವು’ ಎಂದು ಹಾರ್ಟ್‌ ಎಮೋಜಿಗಳನ್ನು ಹಾಕಿ ಬರೆದುಕೊಂಡಿದ್ದಾರೆ. ಇದಕ್ಕೆ ಕೃಷ್ಣ ಧನ್ಯವಾದ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next