Advertisement
ಈ ಮಧ್ಯೆ ಅದಕ್ಕೆ ಪೂರಕವಾಗಿ ಗುಣರಂಜನ್ ಶೆಟ್ಟಿ ಪತ್ರಿಕಾ ಪ್ರಕಟನೆ ನೀಡಿದ್ದು, ಹತ್ಯೆಗೆ ಸಂಚು ರೂಪಿಸಿರುವ ವಿಷಯ ಸತ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೂಂದೆಡೆ ಹತ್ಯೆ ಸಂಚಿಗೂ ತನಗೂ ಯಾವುದೇ ಸಂಬಂಧವಿಲ್ಲ. ನಾನು ವ್ಯವಹಾರ ಸಂಬಂಧ ವಿದೇಶದಲ್ಲಿದ್ದೇನೆ. ಪೊಲೀಸರು ತನಿಖೆ ನಡೆಸಲಿ ಎಂದು ಮನ್ವಿತ್ ರೈ ಹೇಳಿದ್ದಾರೆ.
Related Articles
Advertisement
ಬಂಟ್ವಾಳದಲ್ಲಿ ಮುತ್ತಪ್ಪ ರೈ ಆಪ್ತರ ವಿಚಾರಣೆಪ್ರಕರಣದ ಬೆನ್ನಲ್ಲೇ ಮುತ್ತಪ್ಪ ರೈ ಆಪ್ತರಾದ ಬಂಟ್ವಾಳದ ಒಬ್ಬರನ್ನು ಮಂಗಳೂರು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಮನ್ವಿತ್ ರೈ ಮತ್ತು ಆ ವ್ಯಕ್ತಿ ಆಪ್ತರಾಗಿದ್ದರಿಂದ ಹೆಚ್ಚಿನ ಮಾಹಿತಿ ಸಿಗುವ ನಿರೀಕ್ಷೆ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಹತ್ಯೆ ಸಂಚಿಗೂ ತನಗೂ ಸಂಬಂಧವಿಲ್ಲ
ಹತ್ಯೆ ಸಂಚಿನ ಕುರಿತು ಸ್ಪಷ್ಟನೆ ನೀಡಿರುವ ಮನ್ವಿತ್ ರೈ, “ಕೆಲಸ ನಿಮಿತ್ತ ವಿದೇಶದಲ್ಲಿದ್ದೇನೆ. ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ನನ್ನ ಹೆಸರು ಕೇಳಿ ಬಂದಿದೆ. ಆದರೆ, ಯಾವ ಕಾರಣಕ್ಕೆ ಬಂದಿದೆ ಎನ್ನುವುದು ಗೊತ್ತಾಗಿಲ್ಲ. ನಾನು ಯಾರಿಗೂ ಬೆದರಿಕೆ ಹಾಕಿಲ್ಲ. ಈ ಬಗ್ಗೆ ಯಾರು ಕೂಡ ಪೊಲೀಸರಿಗೂ ದೂರು ನೀಡಿಲ್ಲ. ನನ್ನ ವಿರುದ್ಧ ಯಾವುದೇ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ. ಆದರೂ ಯಾವ ಕಾರಣಕ್ಕೆ ನನ್ನ ಹೆಸರು ಯಾಕೆ ತಳುಕು ಹಾಕುತ್ತಿದ್ದಾರೆ’ ಎನ್ನುವುದು ಗೊತ್ತಾಗಿಲ್ಲ ಎಂದಿದ್ದಾರೆ.