ಪಡುಬಿದ್ರಿ: ಟೋಲ್ ಗೇಟ್ ಸಮಸ್ಯೆ ಬಗೆಹರಿಸಿ, ಟೋಲ್ ವಿನಾಯತಿ ನೀಡಬೇಕೆಂದು ಆಗ್ರಹಿಸಿ ಹೆಜಮಾಡಿ, ಪಡುಬಿದ್ರಿ ಗ್ರಾಮಾಂತರ ಪ್ರದೇಶಗಳಿಗೆ ತೆರಳುವ ಬಸ್ ಗಳ ಸಂಚಾರವನ್ನು ನಿಲ್ಲಿಸಿ ಸರ್ವಿಸ್ ಮಾಲಕರ ಸಂಘವು ಪ್ರತಿಭಟನೆ ನಡೆಸುತ್ತಿದೆ.
ಸ್ಥಳೀಯ ಸರ್ವಿಸ್ ಬಸ್ ಗಳಿಗೆ ಟೋಲ್ ವಿನಾಯತಿ ಕೊಡಬೇಕು ಎಂದು ಆಗ್ರಹಿಸಿ ಅನಿರ್ಧಿಷ್ಟಾವಧಿಯವರೆಗೆ ಸರ್ವಿಸ್ ಬಸ್ ಸಂಚಾರವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ.
ಇದನ್ನೂ ಓದಿ:ಸಿ.ಡಿ ಪ್ರಕರಣದ ಪ್ರೊಡ್ಯೂಸರ್, ಡೈರಕ್ಟರ್, ಆ್ಯಕ್ಟರ್ ಯಾರೆಂದು ಗೊತ್ತಾಗಲಿದೆ: ಸಿ.ಟಿ ರವಿ
ಸದ್ಯ ಈ ಭಾಗದಲ್ಲಿ ಓಡಾಡುವ 26 ಬಸ್ ಗಳ ಸಂಚಾರ ನಿಲ್ಲಿಸಲಾಗಿದೆ. ಸಮಸ್ಯೆ ಬಗೆಹರಿಯದಿದ್ದಲ್ಲಿ ನಾಳೆಯಂದಲೇ ತಡೆರಹಿತ ಬಸ್ ಗಳ ಓಡಾಟ ನಿಲುಗಡೆ ವಿಚಾರವನ್ನು ತುರ್ತು ಸಭೆ ಕರೆದು ಚರ್ಚಿಸಲಾಗುತ್ತದೆ ಎಂದು ಬಸ್ ಮಾಲಕರು ತಿಳಿಸಿದ್ದಾರೆ.
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿಯಾದ ನಟ ಶಿವರಾಜ್ ಕುಮಾರ್