Advertisement
ಮೇ ತಿಂಗಳಿನಲ್ಲಿ ಕಾರಿನಲ್ಲಿ ಕುಂದಾಪುರಕ್ಕೆ ಹೋಗಿ ಬಂದಿದ್ದು ಆ ವೇಳೆ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ 40 ರೂ. ಫಾಸ್ಟ್‌ಟ್ಯಾಗ್ ಮೂಲಕ ಪೇಟಿಎಂನಿಂದ ಕಡಿತವಾಗಿದೆ. ಈ ಬಗ್ಗೆ ಮೊಬೈಲ್‌ಗೆ ಸಂದೇಶ ಬಂದಿತ್ತು. ಆದರೆ ಕಳೆದ ನವೆಂಬರ್ 15ರಂದು ಬೆಳಗ್ಗೆ 6ಕ್ಕೆ ಪೇಟಿಎಂನಿಂದ ಮತ್ತೆ ಹೆಜಮಾಡಿ ಟೋಲ್‌ನಲ್ಲಿ 40 ರೂ. ಪೇಟಿಎಂನಿಂದ ಕಡಿತವಾಗಿರುವ ಬಗ್ಗೆ ಸಂದೇಶ ಬಂದಿತ್ತು. ಈ ವೇಳೆ ನನ್ನ ಕಾರು ಕದ್ರಿಯಲ್ಲಿಯೇ ಇತ್ತು. ಮೇ ಅನಂತರ ಹೆಜಮಾಡಿ ಟೋಲ್ ಮೂಲಕ ಹೋಗಿರಲಿಲ್ಲ ಎಂದು ಚಂದ್ರಮೋಹನ್ ಭಂಡಾರಿ ಅವರು ದೂರಿದ್ದು ಈ ಬಗ್ಗೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೂ ದೂರು ನೀಡಿದ್ದಾರೆ.
ಇದು ಟೋಲ್‌ಪ್ಲಾಝಾದವರಿಂದ ಆಗುತ್ತಿರುವ ವಂಚನೆಯೇ ಅಥವಾ ಬೇರೆ ಯಾವುದಾದರೂ ರೂಪದ ಮೋಸವೇ ಎಂಬುದನ್ನು ಪತ್ತೆ ಮಾಡಬೇಕಿದೆ. ಇದೇ ರೀತಿ ಬೆಂಗಳೂರಿನ ಟೋಲ್ ಪ್ಲಾಜಾಗಳಲ್ಲಿ ಹಾದು ಬಂದಿರುವ ವಾಹನದ ಕೆಲವು ಮಾಲಕರಿಗೂ ತೊಂದರೆಯಾಗಿರುವ ಮಾಹಿತಿ ಇದೆ ಎಂದು ಭಂಡಾರಿ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ. ಖಾತೆಯಿಂದ ಹಣ ಕಡಿತವಾಗಿರುವ ಕುರಿತು ಕೂಡಲೇ ಟೋಲ್ ಪ್ಲಾಜಾದವರಿಗೆ ತಿಳಿಸಿದ್ದು ಅವರು ವಾಹನದ ನೋಂದಣಿ ಸಂಖ್ಯೆ ನೀಡಲು ತಿಳಿಸಿದ್ದಾರೆ. ಅದರಂತೆ ನೀಡಿದ್ದೇನೆ. ಆದರೆ ಹಣ ಮರುಪಾವತಿ ಆಗಿಲ್ಲ. ಹಣ ಯಾಕೆ ಕಡಿತವಾಗಿದೆ ಎಂಬ ಪ್ರಶ್ನೆಗೂ ಉತ್ತರ ದೊರೆತಿಲ್ಲ ಎಂದು ಅವರು ದೂರಿದ್ದಾರೆ.
Related Articles
ಟೋಲ್ ಪ್ಲಾಜಾದಿಂದ ಈ ರೀತಿ ಹಣ ಕಡಿತವಾಗುವುದು ಅಸಾಧ್ಯ. ಇದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಇಂತಹ ದೂರು ಬೇರೆ ಯಾರಿಂದಲೂ ಇದುವರೆಗೆ ಬಂದಿಲ್ಲ ಎಂದು ಹೆಜಮಾಡಿ ಟೋಲ್‌ಪ್ಲಾಜಾದ ಮ್ಯಾನೇಜರ್ ಶಿವಪ್ರಸಾದ್ ರೈ ಪ್ರತಿಕ್ರಿಯಿಸಿದ್ದಾರೆ.
Advertisement