Advertisement

Kota: ಟೋಲ್‌ ತಪ್ಪಿಸಲು ನಕಲಿ ಆರ್‌ಸಿ ಸೃಷ್ಟಿ

08:58 PM Oct 17, 2024 | Team Udayavani |

ಕೋಟ: ಸಾಸ್ತಾನ ಟೋಲ್‌ನಲ್ಲಿ ಟೋಲ್‌ ತಪ್ಪಿಸುವ ಸಲುವಾಗಿ ನಕಲಿ ದಾಖಲೆ ಸೃಷ್ಟಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

ಸಾಸ್ತಾನ ಟೋಲ್‌ನಲ್ಲಿ ಕರಿಕಲ್‌ ಕಟ್ಟೆಯಿಂದ ಮಾಬುಕಳದವೆರೆಗೆ ಇರುವ ಸ್ಥಳೀಯ ನಿವಾಸಿಗಳಿಗೆ ಸುಂಕ ವಿನಾಯಿತಿ ಇದ್ದು ಅ. 15ರಂದು ಬಲೆನೋ ಕಾರೊಂದರ ಆರ್‌.ಸಿ.ಯನ್ನು ಸ್ಕ್ಯಾನರ್‌ನಲ್ಲಿ ಪರಿಶೀಲಿಸಿದಾಗ ಆರ್‌ಸಿ ವಿಳಾಸದಲ್ಲಿ ಮಯ್ನಾದಿ ಅಹಮ್ಮದ್‌ ಸಾಹೇಬ ಪಡುಕರೆ ಕೋಟ ಎಂದಿದ್ದು, ಆರ್‌ಸಿ ಪ್ರತಿಯನ್ನು ನೋಡಿದಾಗ ಎಡಿಟ್‌ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ಪರಿಶೀಲಿಸಿದಾಗ ಕಾರಿನ ಆರ್‌ಸಿ ಮಾಲಕರ ವಿಳಾಸ ಕಾಳಾವರ ಗ್ರಾಮ ಕುಂದಾಪುರ ತಾಲೂಕು ಎಂದಿದ್ದು, ಅನುಮಾನಗೊಂಡು ಹೆಜಮಾಡಿ ಟೋಲ್‌ನಲ್ಲಿ ಪರಿಶೀಲಿಸಿದಾಗ ಅಲ್ಲಿಯೂ ಸಹ ಸ್ಥಳೀಯ ವಿಳಾಸದ ಆರ್‌ಸಿ ನೀಡಿ ವಿನಾಯಿತಿ ಪಡೆದಿರುವುದು ಕಂಡುಬಂದಿದೆ.

ಆರೋಪಿಯು ಟೋಲ್‌ನಲ್ಲಿ ಸುಂಕ ವಿನಾಯಿತಿ ಪಡೆಯುವ ಉದ್ದೇಶದಿಂದ ಕಾರಿನ ಆರ್‌ಸಿಯ ವಿಳಾಸವನ್ನು ಬದಲಾಯಿಸಿ ಆರ್‌ಸಿಯಲ್ಲಿರುವ ವಿಳಾಸ ತನ್ನ ಸ್ವಂತ ವಿಳಾಸ ಎಂದು ಬಿಂಬಿಸಿ ನಕಲಿ ಆರ್‌ಸಿ ತಯಾರಿಸಿ ಟೋಲ್‌ ಸಂಸ್ಥೆಗೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನೂರಾರು ನಕಲಿ ಐಡಿ
ಶುಲ್ಕ ವಿನಾಯಿತಿಯನ್ನು ಪಡೆಯುವ ಉದ್ದೇಶದಿಂದ ನೂರಾರು ಮಂದಿ ವಾಹನ ಸವಾರರು ಈ ರೀತಿ ನಕಲಿ ಐ.ಡಿ.ಯನ್ನು ಸೃಷ್ಟಿಸಿಕೊಂಡಿರುವ ಬಗ್ಗೆ ಟೋಲ್‌ನವರಿಗೆ ಅನುಮಾನವಿದ್ದು, ಇದೀಗ ಹಂತ-ಹಂತವಾಗಿ ಈ ರೀತಿಯ ಐ.ಡಿ.ಗಳನ್ನು ಪರಿಶೀಲಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ರೀತಿಯ ಕೃತ್ಯ ಎಸಗುವವರ ವಿರುದ್ಧ ನಿರಂತರವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಟೋಲ್‌ನವರ ಪರವಾಗಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಯೋಗೀಶ್‌ ನಾಯರಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next