Advertisement

ವಿನೋದ್‌ ಕುಮಾರ್‌ ಕಂಚಿಗೆ ಆಕ್ಷೇಪ

10:51 PM Aug 29, 2021 | Team Udayavani |

ನವದೆಹಲಿ : ಎಫ್52 ಡಿಸ್ಕಸ್‌ ತ್ರೋ ಸ್ಪರ್ಧೆಯಲ್ಲಿ ವಿನೋದ್‌ ಕುಮಾರ್‌ 19.91 ಮೀ. ದೂರದ ಸಾಧನೆಗೈದು ಕಂಚಿನ ಪದಕ ಗೆದ್ದರು. ಇದು ಕೂಡ ಏಶ್ಯನ್‌ ಪ್ಯಾರಾ ದಾಖಲೆಯಾಗಿದೆ. ಆದರೆ ವಿನೋದ್‌ ಕುಮಾರ್‌ ಕಂಚಿನ ಪದಕದ ಜಯಕ್ಕೆ ಇತರ ದೇಶಗಳ ಸ್ಪರ್ಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಹೀಗಾಗಿ ಫ‌ಲಿತಾಂಶವನ್ನು ಸೋಮವಾರ ಪ್ರಕಟಿಸಲು ನಿರ್ಧರಿಸಲಾಗಿದೆ. ಆಕ್ಷೇಪದ ಪ್ರಕಾರ ವಿನೋದ್‌ ಎಫ್52 ವಿಭಾಗದಲ್ಲಿ ಸ್ಪರ್ಧಿಸುವಂತಿಲ್ಲ. ಆದರೆ ಪ್ಯಾರಾಲಿಂಪಿಕ್‌ ಸಮಿತಿ ಆ. 22ರಂದು ಹೇಳಿರುವ ಪ್ರಕಾರ, ದುರ್ಬಲ ಮಾಂಸಖಂಡಗಳಿರುವವರು, ನಿಧಾನಗತಿಯ ಚಲನೆ ಹೊಂದಿರುವವರು, ಕಾಲಿನಲ್ಲಿ ಅಸಮಾನ ಶಕ್ತಿಯಿರುವವರು ಭಾಗವಹಿಸಬಹುದು.

ಈ ಹಿನ್ನೆಲೆಯಲ್ಲಿ ಈ ವರ್ಗದಲ್ಲಿ ಪಾಲ್ಗೊಳ್ಳಲು ವಿನೋದ್‌ಗೆ ಅರ್ಹತೆಯಿದೆ. ಆದರೂ ಆಕ್ಷೇಪವೇಕೆ ಎನ್ನುವುದು ತಿಳಿದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next