Advertisement

ಉದ್ಘಾಟನೆಗೆ 11 ಸದಸ್ಯರ ಭಾರತ ತಂಡ 

10:10 PM Aug 22, 2021 | Team Udayavani |

ಟೋಕಿಯೊ: ಮಂಗಳವಾರ ನಡೆಯಲಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಕೇವಲ 11 ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಚೆಫ್ ಡಿ ಮಿಷನ್‌ ಗುರುಶರಣ್‌ ಸಿಂಗ್‌ ಈ ಕುರಿತು ಮಾಹಿತಿ ನೀಡಿದರು.

Advertisement

ಈ ಹನ್ನೊಂದರಲ್ಲಿ ಐವರು ಕ್ರೀಡಾಪಟುಗಳಾದರೆ, ಉಳಿದ 6 ಮಂದಿ ಅಧಿಕಾರಿಗಳಾಗಿದ್ದಾರೆ.  ಹೈಜಂಪರ್‌ ಮರಿಯಪ್ಪನ್‌ ತಂಗವೇಲು ಪಥಸಂಚಲ ನದಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿದು ಸಾಗಲಿದ್ದಾರೆ. ಡಿಸ್ಕಸ್‌ ತ್ರೋವರ್‌ ವಿನೋದ್‌ ಕುಮಾರ್‌, ಜಾವೆಲಿನ್‌ ಎಸೆತಗಾರ ಟೇಕ್‌ ಚಂದ್‌, ಪವರ್‌ಲಿಫ್ಟರ್‌ಗಳಾದ ಜೈದೀಪ್‌ ಮತ್ತು ಸಕಿನಾ ಖಾತುನ್‌ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿರುವ ಇತರ ಕ್ರೀಡಾಪಟುಗಳು. ಟೇಬಲ್‌ ಟೆನಿಸಿಗರಾದ ಸೋನಾಲ್‌ ಪಟೇಲ್‌ ಮತ್ತು ಭವಿನಾ ಪಟೇಲ್‌ ಅವರಿಗೆ ಮರುದಿನ ಸ್ಪರ್ಧೆ ಇರುವ ಕಾರಣ ಸಮಾರಂಭದಿಂದ ದೂರ ಉಳಿಯಲಿದ್ದಾರೆ.

6 ಮಂದಿ ಅಧಿಕಾರಿಗಳು :

6 ಮಂದಿಯ ಅಧಿಕಾರಿಗಳ ತಂಡದ ನಾಲ್ವರ ಹೆಸರು ಈಗಾಗಲೇ ಅಧಿಕೃತಗೊಂಡಿದೆ. ಇದರಲ್ಲಿ ಚೆಫ್ ಡಿ ಮಿಷನ್‌ ಗುರುಶರಣ್‌ ಸಿಂಗ್‌ ಕೂಡ ಸೇರಿದ್ದಾರೆ. ಉಳಿದವರೆಂದರೆ ಡೆಪ್ಯುಟಿ ಚೆಫ್ ಡಿ ಮಿಷನ್‌ ಅರ್ಹಾನ್‌ ಬಗಾಟಿ, ಕೋವಿಡ್‌-19 ಅಧಿಕಾರಿ ವಿ.ಕೆ. ದಬಾಸ್‌, ಮರಿಯಪ್ಪನ್‌ ಅವರ ಕೋಚ್‌ ಮತ್ತು ಪ್ಯಾರಾ ಆ್ಯತ್ಲೆಟಿಕ್ಸ್‌ ಅಧ್ಯಕ್ಷ ಸತ್ಯನಾರಾಯಣ್‌.

Advertisement

Udayavani is now on Telegram. Click here to join our channel and stay updated with the latest news.

Next