Advertisement
ಟೋಕಿಯೊ ಮಹಾನಗರದ ಆಡಳಿತವು ಕಳೆದ ತಿಂಗಳು ಒಲಿಂಪಿಕ್ ಅಕ್ವಾಟಿಕ್ ಸೆಂಟರ್ ಹಾಗೂ ಸೀ ಫಾರೆಸ್ಟ್ ವಾಟರ್ ವೇ ನಿರ್ಮಾಣ ಎರಡು ತಿಂಗಳು ವಿಳಂಬವಾಗಲಿದೆ ಎಂದು ಘೋಷಿಸಿದೆ. ಆಯೋಜಕರು ಅಭ್ಯಾಸ ಪಂದ್ಯಗಳನ್ನು ಮರುನಿಗದಿ ಮಾಡಬೇಕಾದೀತು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದರಿಂದ 2020ರ ಒಲಿಂಪಿಕ್ಸ್ ಕ್ರೀಡಾಕೂಟದ ವೇಳಾಪಟ್ಟಿ ಒಂದಷ್ಟು ಗೊಂದಲ ನಿರ್ಮಾಣವಾಗಿತ್ತು.
ರೋಯಿಂಗ್ ಸ್ಪರ್ಧೆಯ ಆತಿಥ್ಯ ವಹಿಸುವ ಸೀ ಫಾರೆಸ್ಟ್ ವಾಟರ್ ವೇ ಮೇ 2019ರ ವೇಳೆಗೆ ಪೂರ್ಣಗೊಳ್ಳಲಿದೆ. ಅಲ್ಲಿ ಆಗಸ್ಟ್‌ನಲ್ಲಿ ಪರೀಕ್ಷಾರ್ಥ ಸ್ಪರ್ಧೆಗಳನ್ನು ಆಯೋಜಿಸಲು ಯಾವ ಅಡ್ಡಿಯೂ ಆಗುವುದಿಲ್ಲ. ಈಜು ಹಾಗೂ ಡೈವಿಂಗ್ ಸ್ಪರ್ಧೆಗಳನ್ನು ನಡೆಸುವ ಒಲಿಂಪಿಕ್ ಅಕ್ವಾಟಿಕ್ಸ್ ಸೆಂಟರ್ ಫೆಬ್ರವರಿ 2020ರಲ್ಲಿ ಪೂರ್ಣಗೊಳ್ಳಲಿದೆ. ಎಪ್ರಿಲ್ ಅಥವಾ ಆ ಬಳಿಕವೇ ಕ್ರೀಡಾಕೂಟ ನಡೆಯುವುದರಿಂದ ಸಮಸ್ಯೆ ಆಗುವುದಿಲ್ಲ. ಕ್ರೀಡಾಪಟುಗಳು ಸಿದ್ಧತೆಯೂ ಅಡ್ಡಿಯಿಲ್ಲ. ಒಟ್ಟಾರೆ ಟೋಕಿಯೋ 2020ರ ಒಲಿಂಪಿಕ್ಸ್ ಆಯೋಜಿಸಲು ಸರ್ವಸನ್ನದ್ಧಗೊಳ್ಳುತ್ತಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯೂ ಇಲ್ಲಿನ ಕಾಮಗಾರಿಗಳ ಗುಣಮಟ್ಟ, ಸಿದ್ಧತೆಯ ವೇಗ ಇತ್ಯಾದಿಗಳ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನಾಡಿದೆ ಎಂದು ಟಕಾಯಾ ಸ್ಪಷ್ಟಪಡಿಸಿದ್ದಾರೆ. 2020ರ ಒಲಿಂಪಿಕ್ಸ್ ಜುಲೈ 24ರಿಂದ ಆಗಸ್ಟ್ 9ರ ವರೆಗೆ ನಡೆಯಲಿದೆ.