Advertisement
ಶ್ರೀರಂಗಪಟ್ಟಣದ ಕಾವೇರಿ ನದಿ ತೀರದ ಸಂಗಮ, ಪಶ್ಚಿಮ ವಾಹಿನಿ, ಸ್ನಾನಘಟ್ಟ ಹಾಗೂಗೋಸಾಯಿ ಘಾಟ್ ಸೇರಿದಂತೆ ವಿವಿಧ ಕಡೆ ಪಿಂಡ ಪ್ರದಾನಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಜನಸಂದಣಿ ಹಾಗೂ ಗಲಾಟೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲು ಪೊಲೀಸ್ ಭದ್ರತೆ ನೀಡಲು ಮುಂದಾಗಿದೆ.
Related Articles
Advertisement
ನಿಯಮ ಪಾಲಿಸುವಂತೆ ಸೂಚನೆ: ನದಿ ತೀರದ ಯಾವ ಭಾಗಗಳಲ್ಲಿ ಪೂಜೆ ಮಾಡಿ ಕೊಡುವ ವೈಧಿಕರು, ಪಂಡಿತರು, ಪೂಜಾರಿಗಳನ್ನು ಕರೆಸಿ ಸಭೆ ನಡೆಸಿ ನಿರ್ದೇಶನ ನೀಡಲು ಕ್ರಮ ಕೈಗೊಳ್ಳಲಾಗಿದೆ. ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದ್ದು, ಮತ್ತೆ ನಾಳೆ ಇನ್ನೊಂದು ಸಭೆ ಕರೆಯಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಸ್ವಚ್ಛತೆಗೆ ಆದ್ಯತೆ: ನದಿಗಳಲ್ಲಿ ಪಿಂಡ ಪ್ರದಾನ ಮಾಡಲು ಬರುವ ಸಾರ್ವಜನಿಕರು ಯಾವುದೇ ರೀತಿಯ ಬಟ್ಟೆ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ನದಿಗೆ ಬಿಡದಂತೆ ಸೂಚಿಸಲಾಗಿದೆ. ಅಲ್ಲದೆ, ಪುರಸಭೆ ಸಿಬ್ಬಂದಿಗಳು ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಅನುಪಯುಕ್ತ ಬಟ್ಟೆ, ತ್ಯಾಜ್ಯಗಳನ್ನು ಒಂದು ಹಾಕುವಂತೆಪುರಸಭೆಯಿಂದ ವ್ಯವಸ್ಥೆ ಮಾಡಲಾಗಿದೆ. ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ: ಕೊರೊನಾ ಇರುವುದರಿಂದ ಬರುವ ಸಾರ್ವಜನಿಕರುಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು. ಅಲ್ಲದೆ, ಸಾಮಾಜಿಕ ಅಂತರಕಾಯ್ದುಕೊಂಡು ಕಾರ್ಯಗಳನ್ನು ಮಾಡಬೇಕು. ಗುಂಪು ಸೇರಬಾರದು ಎಂಬ ನಿಯಮಗಳನ್ನು ಹಾಕಲಾಗಿದ್ದು, ಜನರ ಆರೋಗ್ಯದ ದೃಷ್ಟಿಯಿಂದ ತಾಲ್ಲೂಕು ಆಡಳಿತಕ್ರಮಕೈಗೊಂಡಿದೆ.
ಪೂಜೆಗಾಗಿ ನಡೆದಿತ್ತು ಮಾರಾಮಾರಿ : ಕಳೆದ ವರ್ಷ ಕಾವೇರಿ ಸಂಗಮದಲ್ಲಿ ಪಿಂಡ ಪ್ರದಾನ ಪೂಜೆಗಾಗಿ ಸಾರ್ವಜನಿಕರನ್ನು ತಮ್ಮತ್ತ ಕರೆದುಕೊಂಡು ಹೋಗುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಕುಡುಗೋಲು, ಮಚ್ಚುಗಳಿಂದ ಪರಸ್ಪರ ಹಲ್ಲೆಗೆ ಯತ್ನಿಸಿದ ಘಟನೆಗಳು ನಡೆದಿದ್ದವು. ಈ ವಿಚಾರದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಈ ಬಾರಿ ಯಾವುದೇ ಗಲಾಟೆ, ಗದ್ದಲಗಳು, ಜನಸಂದಣಿ ಸೇರದಂತೆ ತಾಲೂಕು ಆಡಳಿತ ಅಗತ್ಯ ಕ್ರಮ ಕೈಗೊಳ್ಳಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ಅಕ್ರಮ ಕುಟೀರ ನಿರ್ಮಾಣ : ಕಳೆದ ಬಾರಿ ನದಿ ತೀರದಲ್ಲಿ ಅಕ್ರಮವಾಗಿ ಕುಟೀರಗಳನ್ನು ನಿರ್ಮಿಸಿಕೊಂಡು ಪಿಂಡ ಪ್ರದಾನ ಹಾಗೂ ವಾಮಚಾರ ಮಾಡುವ ಮೂಲಕ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳುಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತ ಆಡಳಿತ ತೆರವುಗೊಳಿಸಿತ್ತು. ಇದರಿಂದ ಅಲ್ಲಿನ ಸಾರ್ವಜನಿಕರು ತಾಲೂಕು ಆಡಳಿತ ವಿರುದ್ಧ ಪ್ರತಿಭಟನೆ ನಡೆಸಿದ್ದರು. ನಂತರ ಮತ್ತೆಕುಟೀರಗಳು ತಲೆ ಎತ್ತಿವೆ.