Advertisement
ಉತ್ತರ ಪ್ರದೇಶದ ಅಧಿಕಾರಿಗಳು ತಮ್ಮ ಗ್ರಾಮಕ್ಕೆ ಆಗಮಿಸುವ ಸುದ್ದಿ ತಿಳಿದ ಗ್ರಾಮಸ್ಥರು ಗ್ರಾಮದಲ್ಲಿ ತೋರಣ ಕಟ್ಟಿ, ಪ್ರತಿ ರಸ್ತೆಯನ್ನೂ ಸ್ವತ್ಛಗೊಳಿಸಿ ರಂಗೋಲಿ ಹಾಕಿ ಹಬ್ಬದ ವಾತಾವರಣ ನಿರ್ಮಿಸಿದ್ದರು. ಶಾಲಾ ಮಕ್ಕಳು ಬ್ಯಾಂಡ್ ಸೆಟ್ ಮೂಲಕ ಉತ್ತರ ಪ್ರದೇಶದ ಅಧಿಕಾರಿಗಳನ್ನು ಸ್ವಾಗತಿಸಿದರು.
Related Articles
Advertisement
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದ ನಂತರ ಸ್ವತ್ಛ ಭಾರತ್ ಯೋಜನೆಯನ್ನು ಜಾರಿಗೆ ತಂದು ದೇಶದ ಪ್ರತಿಯೊಂದು ಕುಟುಂಬವೂ ಶೌಚಾಲಯ ನಿರ್ಮಿಸಿಕೊಳ್ಳುವುದಕ್ಕೆ ಪೋ›ತ್ಸಾಹ ಹಾಗೂ ಆರ್ಥಿಕ ಸಹಕಾರ ನೀಡಿದ್ದಾರೆ. ಇದರ ಪರಿಣಾಮವಾಗಿ ಕೋಲಾರ ಜಿಲ್ಲೆ ದೇಶದ ಮೊಟ್ಟಮೊದಲ ಬಯಲು ಶೌಚ ಮುಕ್ತ ಜಿಲ್ಲೆಯಾಗಿ ಆಯ್ಕೆಯಾಗಿದೆ ಎಂದರು.
ಕೇಂದ್ರ ಪಂಚಾಯತ್ ರಾಜ್ ಮತ್ತು ಅಭಿವೃದ್ಧಿ ಇಲಾಖೆಯ ಎಸ್‌ಬಿಎಂ ಉಪ ನಿರ್ದೇಶಕಿ ವಿಮಲಾ ಮಾತನಾಡಿ, ಶೌಚಾಲಯ ಪ್ರತಿಯೊಂದು ಮನೆಯ ಹೆಣ್ಣು ಮಕ್ಕಳ ಘನತೆಯಾಗಿದೆ. ಶೌಚಾಲಯ ಆಸ್ಪತ್ರೆ ಇದ್ದಂತೆ. ಶೌಚಾಲಯಗಳನ್ನು ಬಳಕೆ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಜಿಲ್ಲೆಯಲ್ಲಿ ಪ್ರತಿಯೊಂದು ಕುಟುಂಬಗಳು ಸರ್ಕಾರದ ಅನುದಾನ ಹಾಗೂ ಸ್ವ ಇಚ್ಛೆಯಿಂದ ಶೌಚಾಲಯ ನಿರ್ಮಿಸಿಕೊಂಡು ಬಳಕೆ ಮಾಡುವಂತೆ ಜಿಪಂ ಸಿಇಒ ಕಾವೇರಿ ಶ್ರಮಿಸಿದ್ದರಿಂದ ರಾಷ್ಟ್ರ ಮಟ್ಟದಲ್ಲಿ ಮೊದಲನೆ ಸ್ಥಾನ ಪಡೆದುಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಗೀತಮ್ಮ ವೆಂಕಟೇಶಗೌಡ, ಗ್ರಾಪಂ ಅಧ್ಯಕ್ಷತೆ ರಾಧಮ್ಮ, ಉಪಾಧ್ಯಕ್ಷ ಕೃಷ್ಣಪ್ಪ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಸೋಮಶೇಖರ್, ಉತ್ತರ ಪ್ರದೇಶ ಐಎಎಸ್ ಅಧಿಕಾರಿಗಳಾದ ಜೀತೇಂದ್ರ ಪ್ರತಾಪ್ ಸಿಂಗ್, ರಿತೇಶ್ ಶರ್ಮ, ಸಂಜಯ್ ಸಿಂಗ್, ದಿನೇಶ್ ಕುಮಾರ್ ಸಿಂಗ್, ರಾಕೇಶ್ ತ್ಯಾಗಿ, ನಂದಿನಿ ಜೈನ್, ರಾಘವೇಂದ್ರ ದ್ವಿವೇದಿ,
ಅಲೋಕ್ ಕುಮಾರ್, ಪವನ್ ಕುಮಾರ್, ಅಶಿತೊಷ್ ಕುಮಾರ್, ನಿತೇಶ್ ಕುಮಾರ್, ಸರೋಜ್ ಸಿಂಗ್, ಗ್ರಾಪಂ ಸದಸ್ಯರಾದ ಭಾರತಿ, ವೆಂಕಟೇಶ್, ರೋಜಾರಾಜಪ್ಪ, ತಾಪಂ ಇಒ ಅಮರಪ್ಪ ಹೊಸಪೇಟೆ, ಎಸ್‌ಬಿಎಂ ಜಿಲ್ಲಾ ನೋಡಲ್ ಅಧಿಕಾರಿ ಜಗದೀಶ್, ಸಿಡಿಪಿಒ ರತ್ನಮ್ಮ, ಬಿಆರ್‌ಸಿ ಸಮನ್ವಯಾಧಿಕಾರಿ ವಿಜಿಯಕುಮಾರ್, ಪಿಡಿಒಗಳಾದ ಗೋವಿಂದಗೌಡ, ಹರಿಶ್, ವೇಣು, ಗ್ರಾಮಸ್ಥರು ಹಾಜರಿದ್ದರು.