Advertisement
ಪುತ್ತೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಬೊಳುವಾರು ಜಂಕ್ಷನ್ ನಲ್ಲಿ ಇ – ಟಾಯ್ಲೆಟ್ ಇಡಲಾಗಿದೆ. ಪ್ರತಿಯೊಂದಕ್ಕೆ 12 ಲಕ್ಷ ರೂ.ಗಳಂತೆ 21 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಆದರೆ, ಮಳೆ ನೀರು ಹರಿದು ಪಕ್ಕದಲ್ಲಿರುವ ಶೌಚಾಲಯದ ಪಿಟ್ ಸೇರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಮಾಡಿದರೆ, ಈ ಸಮಸ್ಯೆ ಇರುವುದಿಲ್ಲ. ಸದ್ಯದ ಸ್ಥಿತಿಯಲ್ಲಿ ಶೌಚಾಲಯ ಪಿಟ್ ತುಂಬಿ ಹೋಗಿರುವುದರಿಂದ, ಸಾಮಾನ್ಯ ಜನರಿಗೆ ಸಮಸ್ಯೆಯಾಗಿದೆ. ಮಾತ್ರವಲ್ಲ, ಶೌಚಾಲಯವನ್ನು ಬಳಸಲು ಹಿಂದೆ- ಮುಂದೆ ನೋಡುವಂತಾಗಿದೆ. ಶೌಚಾಲಯ ಇದ್ದು, ಬಳಕೆಗೆ ಯೋಗ್ಯವಾಗಿಲ್ಲವಾದರೆ, ಮುಂದೆ ಅಶುಚಿತ್ವ ಕಾಣಿಸಿಕೊಳ್ಳುವ ಆತಂಕ ಎದುರಾಗಿದೆ.
ಇ-ಟಾಯ್ಲೆಟನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಇದರ ಪಿಟ್ ತುಂಬಿ ಹೋಗಿಲ್ಲ. ಸಮೀಪದಲ್ಲಿರುವ ಶೌಚಾಲಯದ
ಪಿಟ್ ತುಂಬಿದೆ. ಇದಕ್ಕೆ ಕಾರಣ ಮಳೆ ನೀರು. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
- ರೂಪಾ ಶೆಟ್ಟಿ ಪೌರಾಯುಕ್ತೆ,
ಪುತ್ತೂರು ನಗರಸಭೆ ಅಸಹನೀಯ ವಾಸನೆ ಟಾಯ್ಲೆಟ್ ಪಿಟ್ ತುಂಬಿರುವುದರಿಂದ, ಕೆಟ್ಟ ವಾಸನೆ ಬರುತ್ತಿದೆ. ಇದರ ಪಕ್ಕವೇ ರಿಕ್ಷಾ ಸರತಿ ಸಾಲು ಇದೆ. ದಿನವಿಡೀ ಇದೇ ವಾಸನೆಯನ್ನು ಸಹಿಸಿಕೊಂಡು ಕುಳಿತುಕೊಳ್ಳಬೇಕು. ಸಾರ್ವಜನಿಕರು ಮೂಗಿಗೆ ಬಟ್ಟೆ ಕಟ್ಟಿಕೊಂಡು ನಡೆದಾಡುತ್ತಿದ್ದಾರೆ. ಹರಿದು ಹೋಗುವ ಮಳೆನೀರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿದರೆ, ಸಮಸ್ಯೆ ತಪ್ಪುತ್ತದೆ.
- ಇಸ್ಮಾಯಿಲ್ ಬೊಳುವಾರು
ಅಧ್ಯಕ್ಷ, ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ- ಮಾಲಕ ಸಂಘ