Advertisement

ಗ್ರಾಮೀಣ ಶಾಲೆಗಳಲ್ಲಿ ಇಂದಿಗೂ ಗುಣಮಟ್ಟದ ಶಿಕ್ಷಣ

01:21 PM Oct 19, 2017 | |

ಎಚ್‌.ಡಿ.ಕೋಟೆ: ಇಂದಿಗೂ ಒಳ್ಳೆಯ ಗುಣಮಟ್ಟದ ಶಿಕ್ಷಣ ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ದೊರೆಯುತ್ತಿದೆ, ಹೀಗಾಗಿ ಹಳ್ಳಿಯ ಮಕ್ಕಳು ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ನಾವೇನು ಕಡಿಮೆ ಇಲ್ಲ ಎಂಬಂತೆ ಎಸ್ಸೆಸ್ಸೆಲ್ಸಿ, ಪಿಯುಸಿ ಪದವಿ ಅಂತಿಮ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸುತ್ತಿದ್ದಾರೆ ಎಂದು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ವರದನಾಯಕ ಹೇಳಿದರು.

Advertisement

ಪಟ್ಟಣದ ಡಾ.ಬಿ.ಅಂಬೇಡ್ಕರ್‌ ಭವನದಲ್ಲಿ ತಾಲೂಕು ನಾಯಕ ಸರ್ಕಾರಿ ನೌಕರರ ಸಂಘದ ವತಿಯಿಂದ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.

ಇಂದು ಶಿಕ್ಷಣಕ್ಕೆ ಬಡತನ ಅಡ್ಡಿಯಾಗಲ್ಲ ಕಾರಣ ಸರ್ಕಾರ ಬಡ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಆನೇಕ ಯೋಜನೆಗಳನ್ನು ಜಾರಿಗೆ ಬಂದಿದೆ. ಮಕ್ಕಳಲ್ಲಿ ನನಗೂ ಸಾಧಿಸುವ ಶಕ್ತಿಯಿದೆ ಎನ್ನುವ ಭಾವನೆ ಮೂಡಬೇಕು. ಇಂದು ಹಳ್ಳಿಗಳಲ್ಲೂ ಎಲ್ಲರ ಮನೆಯಲ್ಲಿ ಟಿವಿ ಇದ್ದು ಮಕ್ಕಳು ಟಿವಿ ಮೊಬೈಲ್‌ ಅವಲಂಬನೆ ಕಡಿಮೆಯಾಗಬೇಕು. ಪೋಷಕರು ಕೂಡ ತಾವು ಅವಿದ್ಯಾವಂತರಾದರೂ ಮಕ್ಕಳು ಏನು ಓದುತ್ತಿದ್ದಾರೆ. ಎಂದು ನೋಡುವ ಕಳಜಿ ಬೆಳಸಿಕೊಳ್ಳಿ ಎಂದು ಸಲಹೆ ನೀಡಿದರು.

ನಿಜವಾದ ಶಿಕ್ಷಕ ಮಕ್ಕಳ ಕಲಿಕೆ ಪೂರ್ವವಾಗಿ ಕ್ರೀಯಯೋಜನೆ ತಯಾರು ಮಾಡಿ ಮಕ್ಕಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕ್ರೀಯಾ ಸಂಶೋಧನೆಗೆ ಮುಂದಾಗಬೇಕು ಮತ್ತು ಮಕ್ಕಳ ಜೊತೆ ಬೆರೆತು ಮಾತನಾಡಬೇಕು ಆಗ ಮಕ್ಕಳಲ್ಲಿ ಭಯ ದೂರಾಗುತ್ತದೆ. ಶಿಕ್ಷಕನ ವೃತ್ತಿ ಬೆಳವಣಿಗೆಗೂ ಸಹಕಾರಿಯಾಗುತ್ತದೆ ಎಂದು ಕಾರ್ಯಕ್ರಮದಲ್ಲಿದ್ದ ಶಿಕ್ಷಕರಿಗೆ ಕಿವಿಮಾತು ಹೇಳಿದರು.

ತಾಲೂಕು ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷರಾದ ಚಿಕ್ಕನಾಯ್ಕ ಅವರು ಮಾತನಾಡಿ, ಸಮಾಜದಲ್ಲಿ 50 ವರ್ಷಗಳ ಹಿಂದೆ ಸಮಾಜದ ಜನರು ಸರ್ಕಾರಿ ಕೆಲಸದಲ್ಲಿ ಹುಡಿಕಿದರು 100ಕ್ಕೆ ಮುರ್‍ನಾಲ್ಕು ಜನರು ಸಿಗುತ್ತಿರಲಿಲ್ಲ, ಇಂದು ಕಾಲ ಬದಲಾಗಿದೆ ತಾಲೂಕಿನಲ್ಲಿ ಸಮಾಜದ ಜನರು 250,ಕ್ಕೂ ಹೆಚ್ಚು ಸಂಖ್ಯೆಯಲ್ಲಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ, ಇಂದು ಒಬ್ಬರನ್ನು ನೋಡಿ ಕಲಿಯುವ ಓದುವ ಸ್ಪರ್ಧಾಮನೋಬಾವ ಸಮಾಜದ ಜನರಲ್ಲಿ ಮೂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Advertisement

ಮೈಸೂರು ಬಿಎಲ್‌ಎಂಎಲ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿರುವ ನಂಜುಂಡನಾಯ್ಕ ಮಾತನಾಡಿ, ಮಕ್ಕಳಲ್ಲಿ ಗುರಿ ಇರಬೇಕು, ಗುರಿಯ ಹಿಂದೆ ಗುರು ಇರಬೇಕು, ಪೋಷಕರು ಮಕ್ಕಳ ಓದಿಗೆ ಸಹಕರಿಸಬೇಕು ಎಂದರು. ನಿರ್ಧಿಷ್ಟ ಗುರಿ ಛಲದೊಂದಿಗೆ ಓದಿ ಕಷ್ಟವನ್ನು ದಾಟಿ ಬಂದರೆ ಅವಕಾಶಗಳು ತಾನಾಗಿಯೇ ಹುಡಿಕೊಂಡು ಬರುತ್ತವೆ. ನಾನು ತಂದೆಯವರ ಹೆಸರಲ್ಲಿ ಟ್ರಸ್ಟ್‌ ಆರಂಭಿಸುವ ಚಿಂತನೆಯಲ್ಲಿದ್ದು ಆ ಟ್ರಸ್ಟ್‌ ಮೂಲಕ ಸಮಾಜದಿಂದ ಉನ್ನತ ಶಿಕ್ಷಣಕ್ಕಾಗಿ ಮೈಸೂರಿನಂತಹ ನಗರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪಿಯಿಸಿ ಪದವಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ತಾಲೂಕು ನಾಯಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉಪನ್ಯಾಸಕ ಹೆಬ್ಬಲಗುಪ್ಪೆಶಿವಪ್ಪ, ಸಂಘದ ಪದಾಧಿಕಾರಿಗಳಾದ ನಾಗನಾಯ್ಕ, ಮಹದೇವಪ್ಪ, ಹನುಮಂತನಾಯಕ, ಸಿದ್ದರಾಜು, ರತ್ನಮ್ಮ, ವೆಂಕಟಸುಬ್ಬನಾಯ್ಕ, ವಾಸುದೇವ್‌, ಮಹದೇವನಾಯ್ಕ, ಶಿವಲಿಂಗನಾಯ್ಕ, ವೆಂಕಟರಂಗನಾಯ್ಕ, ನಿವೃತ್ತ ಪೊಲೀಸ್‌ ಅಧಿಕಾರಿ ಬಸವನಾಯ್ಕ, ಕೆಂಡನಾಯ್ಕ ಸೇರಿದಂತೆ ಸಮಾಜದ 200ಕ್ಕೂ ಹೆಚ್ಚು ನೌಕರ ಬಂಧುಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next