Advertisement

ಇಂದು ಬಹಿರಂಗ ಪ್ರಚಾರ ಅಂತ್ಯ

04:48 PM May 10, 2018 | Team Udayavani |

ಮೈಸೂರು: ವಿಧಾನಸಭೆ ಚುನಾವಣೆಗೆ ಮೇ 12ರಂದು ಮತದಾನ ನಡೆಯಲಿರುವುದ ರಿಂದ ಗುರುವಾರ ಸಂಜೆ 6 ಗಂಟೆಗೆ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಚುನಾವಣಾ ಪ್ರಚಾರಕ್ಕೆ ಆಗಮಿಸಿರುವ ಹೊರಗಿನವರು ಕ್ಷೇತ್ರ ಬಿಟ್ಟು ಹೊರಡುವಂತೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಸೂಚಿಸಿದ್ದಾರೆ.

Advertisement

ಮತದಾನ ಮುಕ್ತಾಯವಾಗುವ ಸಮಯದ 48 ಗಂಟೆಗಳ ಮುಂಚಿತವಾಗಿ ರಾಜಕೀಯ ಪಕ್ಷಗಳು – ಅಭ್ಯರ್ಥಿಗಳು,
ಕಾರ್ಯಕರ್ತರು – ಬೆಂಬಲಿಗರು ಸಾರ್ವಜನಿಕ ಸಭೆಗಳನ್ನು ನಡೆಸುವುದು, ಕಾನೂನು ಬಾಹಿರವಾಗಿ ಗುಂಪು ಗೂಡುವುದನ್ನು ನಿರ್ಬಂಧಿಸಲು ಸಿಆರ್‌ಪಿಸಿ ಸೆಕ್ಷನ್‌ 144 ರಡಿ ಜಿಲ್ಲಾ ದಂಡಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಯೋಗ ಸೂಚಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಸಲುವಾಗಿ ಹಾಗೂ ಮುಂಜಾಗ್ರತಾ ಕ್ರಮವಾಗಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಣದಲ್ಲಿ ಇಡಬೇಕಾಗಿರುವುದ ರಿಂದ ಗುರುವಾರ ಸಂಜೆ 6 ಗಂಟೆ ಬಳಿಕ ಯಾವುದೇ ರಾಜಕೀಯ ಪಕ್ಷಗಳು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು, ಅವರ ಚುನಾವಣಾ ಏಜೆಂಟರು ಮತ್ತು ಬೆಂಬಲಿಗರು ಬಹಿರಂಗ ಪ್ರಚಾರ ನಡೆಸುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.

ಆದರೆ, ಪ್ರಜಾಪತ್ರಿನಿಧಿ ಕಾಯ್ದೆ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗ ದಂತೆ ಮನೆ ಮನೆಗೆ ತೆರಳಿ ಕರಪತ್ರಗಳನ್ನು ವಿತರಿಸಿ ಮತಯಾಚಿಸಬಹುದಾಗಿದೆ. ಈ ಅವಧಿಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಪ್ರಚಾರ ಕಾರ್ಯಕರ್ತರು ಹಾಗೂ ಕ್ಷೇತ್ರದ ಹೊರಗಿನಿಂದ ಬಂದಂತಹ ಹಾಗೂ ಆ ಕ್ಷೇತ್ರದ ಮತದಾರರಲ್ಲದವರು, ಇತರೆ ಕ್ಷೇತ್ರದಲ್ಲಿ ಉಳಿಯದೆ ತಮ್ಮ ಮತ ಕ್ಷೇತ್ರ ವ್ಯಾಪ್ತಿಯಲ್ಲಿಯೇ ವಾಸ್ತವ್ಯವಿರಬೇಕು. 

ಸಿಬ್ಬಂದಿಗೆ ಬಸ್‌ ವ್ಯವಸ್ಥೆ: ಚುನಾವಣಾ ಕಾರ್ಯಕ್ಕೆ ನೇಮಕಗೊಂಡಿರುವ ಮತಗಟ್ಟೆ ಸಿಬ್ಬಂದಿಗಳಿಗೆ ಅವರು ಕರ್ತವ್ಯ ನಿರ್ವಹಿಸು ತ್ತಿರುವ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜಿ ಸಿರುವ ವಿಧಾನಸಭಾ ಕ್ಷೇತ್ರಕ್ಕೆ ತೆರಳಲು ಶುಕ್ರವಾರ ಬೆಳಗ್ಗೆ 6 ಗಂಟೆಗೆ ಕರ್ತವ್ಯ ನಿರ್ವಹಿಸು ತ್ತಿರುವ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್‌
ಸ್ಥಳದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

Advertisement

ಮಸ್ಟರಿಂಗ್‌ ಸ್ಥಳಗಳು: ಪಿರಿಯಾಪಟ್ಟಣ ಕ್ಷೇತ್ರ – ಪುಷ್ಪಾಕಾನ್ವೆಂಟ್‌ – ಗೋಣಿಕೊಪ್ಪರಸ್ತೆ, ಪಿರಿಯಾಪಟ್ಟಣ. ಕೃಷ್ಣರಾಜ ನಗರ ಕ್ಷೇತ್ರ – ಸರ್ಕಾರಿ ಪ್ರಥಮ ದರ್ಜೆ ಕಾಲೇಜು – ಕೆ.ಆರ್‌.ನಗರ. ಹುಣಸೂರು ಕ್ಷೇತ್ರ – ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು – ಹುಣಸೂರು. ಹೆಗ್ಗಡದೇವನ ಕೋಟೆ ಕ್ಷೇತ್ರ-ಸೇಂಟ್‌ ಮೇರಿಸ್‌ ಕನ್ನಡ
ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ – ಎಚ್‌.ಡಿ.ಕೋಟೆ. ನಂಜನಗೂಡು ಕ್ಷೇತ್ರ – ಸರ್ಕಾರಿ ಬಾಲಕಿಯರ ಜೂನಿಯರ್‌ ಕಾಲೇಜು – ನಂಜನಗೂಡು. ಚಾಮುಂಡೇಶ್ವರಿ ಕ್ಷೇತ್ರ – ಮಹಾರಾಣಿ ಮಹಿಳಾ ಕಲಾ ಮತ್ತು ವಿಜ್ಞಾನ ಕಾಲೇಜು, ಜೆಎಲ್‌ಬಿ ರಸ್ತೆ. ಕೃಷ್ಣರಾಜ ಕ್ಷೇತ್ರ – ಮಹಾರಾಜ ಕಾಲೇಜು ಶತಮಾನೋತ್ಸವ ಭವನ. ಚಾಮರಾಜ ಕ್ಷೇತ್ರ-ಬೇಡನ್‌ ಪೊವೆಲ್‌ ಸ್ಕೂಲ್‌, ಜಿಲ್ಲಾಧಿಕಾರಿ ಕಚೇರಿ ಹಿಂಭಾಗ. 

ನರಸಿಂಹರಾಜ ಕ್ಷೇತ್ರ – ಜೆಎಸ್‌ ಎಸ್‌ ಕಾಲೇಜು – ಊಟಿ ರಸ್ತೆ. ವರುಣ ಕ್ಷೇತ್ರ – ಜೆಎಸ್‌ಎಸ್‌ ಪ್ರಥಮ ದರ್ಜೆ ಕಾಲೇಜು, ದೇವಿರಮ್ಮನಹಳ್ಳಿ, ನಂಜನಗೂಡು ತಾಲೂಕು. ಟಿ. ನರಸೀಪುರ ಕ್ಷೇತ್ರ – ವಿದ್ಯೋದಯ ಶಿಕ್ಷಣ ಸಂಸ್ಥೆ – ತಿ.ನರಸೀಪುರ. 

ಮತ ಎಣಿಕೆ ಕೇಂದ್ರಗಳು: ಪಿರಿಯಾಪಟ್ಟಣ, ಕೃಷ್ಣರಾಜ ನಗರ, ವರುಣಾ, ಚಾಮರಾಜ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ, ಮೈಸೂರಿನ ಕೆ.ಆರ್‌.ಎಸ್‌ ರಸ್ತೆಯ ಕೂರ್ಗಳ್ಳಿಯಲ್ಲಿರುವ ಎನ್‌ಐಇ ಕಾಲೇಜಿನಲ್ಲಿ ನಡೆಯಲಿದ್ದು, ಚಾಮುಂಡೇಶ್ವರಿ, ಕೃಷ್ಣರಾಜ, ನರಸಿಂಹರಾಜ, ತಿ.ನರಸೀಪುರ, ಹುಣಸೂರು, ಎಚ್‌.ಡಿ. ಕೋಟೆ, ನಂಜನಗೂಡು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಹುಣಸೂರು ರಸ್ತೆಯಲ್ಲಿರುವ ಸರ್ಕಾರಿ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜು ನೂತನ ಕಟ್ಟಡದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next