Advertisement

ಇಂದು ಕಸಾಪ ಸಮ್ಮೇಳನ, ಕಸಾಪ ಭವನ ಉದ್ಘಾಟನೆ

07:29 AM Jan 30, 2019 | Team Udayavani |

ತುರುವೇಕೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿ ರುವ ಕನ್ನಡ ಭವನದ ಉದ್ಘಾಟನೆ ನೆನಪಿಗಾಗಿ ಇದೇ ಬುಧವಾರ ಮತ್ತು ಗುರುವಾರ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮ್ಮಿಕೊಳ್ಳಲಾಗಿದೆ.

Advertisement

ತಾಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ನಂ.ರಾಜು ಅಧ್ಯಕ್ಷರಾದ ನಂತರ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡವೊಂದು ಪಡೆದು ಸಾಹಿತ್ಯ ಪರಿಷತ್‌ನ ಚಟುವಟಿಕೆ ನಡೆಸುತ್ತಿದ್ದರು. ಇದಕ್ಕೆ ಒಂದು ರೂಪ ಕೊಡಬೇಕೆಂದು ತೀರ್ಮಾನಿಸಿ ಕೇವಲ ಒಂದೂವರೆ ವರ್ಷದಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಇದಕ್ಕೆ ತಾಪಂ 20×35 ಅಳತೆಯ ನಿವೇಶನ ಉಚಿತವಾಗಿ ನೀಡಿದ್ದಾರೆ. ಅಲ್ಲದೇ ತಾಪಂನಿಂದ 5 ಲಕ್ಷ ರೂ. ಅನುದಾನ ನೀಡಿದ ಫ‌ಲವಾಗಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣವಾಗಿದೆ.

ವಿವಿಧ ಗಣ್ಯರ ದೇಣಿಗೆ: ಮಾಜಿ ಶಾಸಕ ಚಲನಚಿತ್ರ ನಟ ಜಗ್ಗೇಶ್‌ 1 ಲಕ್ಷ ರೂ., ಆದಿ ಚುಂಚನಗಿರಿ ಸಂಸ್ಥಾನ ಮಠದಿಂದ 1 ಲಕ್ಷ ರೂ., ಗುಬ್ಬಿ ತಾಲೂಕಿನ ಬೋರಮ್ಮ ಮತ್ತು ನರಸಿಂಹಯ್ಯ ದಂಪತಿ 1 ಲಕ್ಷ ರೂ. ದೇಣಿಗೆ ನೀಡಿ ಮತ್ತು 1500ಕ್ಕೂ ಹೆಚ್ಚು ಸಾಹಿತ್ಯಾ ಭಿಮಾನಿಗಳು ಅವರ ಕೈಲಾದ ದೇಣಿಗೆ ನೀಡಿದರ ಫ‌ಲವಾಗಿ ಮೂರು ಅಂತಸ್ತಿನ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ.

ಪುಸ್ತಕ, ಪೀಠೊಪಕರಣ ಉಚಿತ ಕೊಡುಗೆ: ನೆಲ ಮಹಡಿಯಲ್ಲಿ ಗ್ರಂಥಾಲಯವನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಿದ್ದು, ತಾಲೂಕಿನವರೇ ಆದ ನಿವೃತ್ತ ಐಎಎಸ್‌ ಅಧಿಕಾರಿ ಶಂಕರಲಿಂಗೇಗೌಡರವರು ಉಚಿತವಾಗಿ ಪೀಠೊಪಕರಣ ನೀಡಿ 10 ಸಾವಿರ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಪುಸ್ತಕ ಪ್ರಾಧಿಕಾರದಿಂದ ಮತ್ತು ಕಸಾಪದಿಂದ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹೆಚ್ಚು ಪುಸ್ತಕಗಳನ್ನು ಒದಗಿಸಲಾಗಿದೆ.

ಇವುಗಳನ್ನು ಒದಗಿಸಲು ನಿವೃತ್ತ ಅಧಿಕಾರಿ ಮಂಗೀಕುಪ್ಪೆ ಗಂಗಣ್ಣ ಕೈಜೋಡಿಸಿದ್ದಾರೆ. ಮೊದಲನೇ ಮಹಡಿಯಲ್ಲಿ ಸಾಹಿತ್ಯ ಪರಿಷತ್‌ನ ಸಭಾಂಗಣ ಹಾಗೂ ವಿವಿಧ ಸ್ಪರ್ಧಾ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುವ ಸಭಾಂಗಣ ನಿರ್ಮಿ ಸಿದ್ದು, ಪ್ರತಿ ವಾರವೊಮ್ಮೆ ಸಂಪನ್ಮೂಲ ವ್ಯಕ್ತಿಯನ್ನು ಇಲ್ಲಿಗೆ ಕರೆಯಿಸಿ ಅವರಿಂದ ಉಚಿತವಾಗಿ ಸ್ಪರ್ಧಾ ಪರೀಕ್ಷೆ ತೆಗೆದುಕೊಳ್ಳುವ ಮಕ್ಕಳಿಗೆ ಉಚಿತ ತರಬೇತಿ ನೀಡಲಾಗುವುದು.

Advertisement

2ನೇ ಅಂತಸ್ತಿನಲ್ಲಿ ಅತಿಥಿ ಗೃಹ ನಿರ್ಮಿಸಲಾಗಿದೆ. ಇವೆಲ್ಲವೂ ಕೇವಲ ಒಂದೂವರೆ ವರ್ಷ ಅವಧಿಯಲ್ಲಿ ನಿರ್ಮಾಣಗೊಂಡಿದೆ. ಇದರ ನೆನಪಿಗಾಗಿ ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ 4ನೇ ಕನ್ನಡ ಸಾಹಿತ್ಯ ಪರಿಷತ್‌ ಸಮ್ಮೇಳನ ಹಮ್ಮ್ಮಿಕೊಂಡಿದ್ದು ತಾಲೂಕಿನವರೇ ಆದ ಪವಾಡ ಬಯಲು ತಜ್ಞ ಡಾ.ಹುಲಿಕಲ್‌ ನಟರಾಜ್‌ ಅವರನ್ನು ಸಮ್ಮೇಳಾನಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

4 ಸಾವಿರ ಆಸನ ವ್ಯವಸ್ಥೆ: ಇದಕ್ಕಾಗಿ ಸುಸಜ್ಜಿತವಾದ ವೇದಿಕೆ ನಿರ್ಮಾಣಗೊಂಡಿದ್ದು, ಸುಮಾರು 4 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ವೇದಿಕೆಗೆ ತಾಲೂಕಿ ನವರೇ ಆದ ಮಾಜಿ ಮಂತ್ರಿ ದಿ. ತಾಳಕೆರೆ ಸುಬ್ರಮಣ್ಯ ನವರ ಹೆಸರಿನಲ್ಲಿ ವೇದಿಕೆ ನಿರ್ಮಾಣಗೊಂಡಿದ್ದು, ಸ್ವಾಗತ ದ್ವಾರಕ್ಕೆ ತಾಲೂಕಿನ ಹಿರಿಯ ರಾಜಕಾರಣಿ ವಿಧಾನಸಭಾ ವಿರೋಧಪಕ್ಷದ ನಾಯಕರಾಗಿದ್ದ ದಿ. ಬಾಣಸಂದ್ರ ಹುಚ್ಚೇಗೌಡರವರ ಹೆಸರಿನಲ್ಲಿ ದ್ವಾರ ನಿರ್ಮಿಸಲಾಗಿದೆ.

ಈಗಾಗಲೇ ಪಟ್ಟಣದ್ಯಾಂತ ಬೃಹತ್‌ ಕಟೌಟ್, ಬ್ಯಾನರ್‌, ಮತ್ತು ಕನ್ನಡ ಬಾವುಟಗಳನ್ನು ಹಾಕಿ ಪಟ್ಟಣವನ್ನು ಮದುವಣಗಿತ್ತಿಯಂತೆ ಸಿಂಗಾರ ಗೊಳಿಸಲಾಗಿದೆ. ಬುಧವಾರ ಬೆಳಗ್ಗೆ 8 ಗಂಟೆಗೆ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ತಹಶೀಲ್ದಾರ್‌ ನಹೀಮ್‌ ಉನ್ನಿಸಾ ನೆರವೇರಿಸಲಿದ್ದಾರೆ.

ಕ್ಷೇತ್ರ ಶಿಕ್ಷಾಣಾಧಿಕಾರಿ ಹನುಮನಾಯ್ಕ ನಾಡ ಧ್ವಜಾರೋಹಣ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಂ. ರಾಜು ಪರಿಷತ್‌ನ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಆನೆಯ ಮೇಲೆ ನಾಡದೇವತೆ ಭುವನೇಶ್ವರಿಯ ಭಾವಚಿತ್ರ ಮೆರವಣಿಗೆ ಹಾಗೂ ಅಲಂಕೃತಗೊಂಡ ವಾಹನದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಪ್ರವಾಸಿ ಮಂದಿರದಿಂದ ಬಯಲು ರಂಗಮಂದಿರದ ವೇದಿಕೆ ವರೆಗೂ ಮೆರವಣಿಗೆ ಮಾಡಲಿದ್ದು, ಇದಕ್ಕೆ ವಿವಿಧ ಕಲಾತಂಡಗಳು ಆಗಮಿಸಲಿವೆ.

ಸೋಮನಕುಣಿತ, ಚಿಲಿಪಿಲಿ ಗೊಂಬೆ, ವೀರಗಾಸೆ, ಲಿಂಗದೇವರು, ಸೋಬಾನೆ ಪದ, ಯಕ್ಷಗಾನ ಕಲಾ ವಿದರು, ಸ್ತಬ್ಧ ಚಿತ್ರಗಳು, ಹುಲಿವೇಷಧಾರಿಗಳು, ಈ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿವೆ. ಬೆಳಗ್ಗೆ 10 ಗಂಟೆಗೆ ಬಿಇಒ ಕಚೇರಿಯ ಮುಂಭಾಗ ನಿರ್ಮಿಸಿರುವ ನಮ್ಮ ಕನ್ನಡ ಭವನ ಉದ್ಘಾಟನೆ ಆಗಲಿದ್ದು, ಆದಿಚುಂಚನ ಗಿರಿ ಪೀಠಾಧ್ಯಕ್ಷ ಡಾ.ನಿರ್ಮಾಲಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸ ಲಿದ್ದಾರೆ.

ಆದಿ ಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಅವರು ಆರ್ಶಿವಾದ, ಕನ್ನಡ ಭವನ ಉದ್ಘಾಟನೆ ಕಸಾಪ ರಾಜ್ಯಾ ಧ್ಯಕ್ಷ ಡಾ. ಮನು ಬಳಗಾರ್‌, ಕೆಇಆರ್‌ಸಿ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡರಿಂದ ಗ್ರಂಥಾಲಯ ಉದ್ಘಾಟನೆ, ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣನವರಿಂದ ಅಪೆಕ್ಸ್‌ ಸಭಾಂಗಣ ಉದ್ಘಾಟನೆ, ಶಾಸಕ ಮಸಾಲೆ ಜಯರಾಮ್‌ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್‌, ಸಂಸದ ಎಸ್‌.ಪಿ.ಮುದ್ದ ಹನುಮೇಗೌಡ, ಜಿಲ್ಲಾಧ್ಯಕ್ಷರಾದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಾ.ಹ.ರಮಾಕುಮಾರಿ, ಪ್ರಾಸ್ತಾವಿಕ ನುಡಿ ಕಸಾಪ ತಾಲೂಕು ಅಧ್ಯಕ್ಷ ನಂ.ರಾಜುರವರಿಂದ, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್‌ ಸದಸ್ಯರಾದ ಬೆಮೆಲ್‌ ಕಾಂತರಾಜು, ವೈ.ಎ.ನಾರಾಯಣಸ್ವಾಮಿ, ಚೌಡರೆಡ್ಡಿ ತೂಪಲ್ಲಿ,

ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಜಗ್ಗೇಶ್‌, ಎಂ.ಡಿ.ಲಕ್ಷ್ಮೀ ನಾರಾಯಣ್‌, ಎಚ್.ನಂಜೇಗೌಡ, ಎಸ್‌.ರುದ್ರಪ್ಪ, ಮತ್ತು ಕನ್ನಡ ಭವನ ನಿರ್ಮಾಣ ಸಮಿತಿಯ ಮಂಗಿಕುಪ್ಪೆ ಗಂಗಣ್ಣ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾದ ಸಿ. ಮಹಾಲಿಂಗಯ್ಯ ಆಗಮಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ತಾಲೂಕಿನ ಜಿಪಂ ಸದಸ್ಯರು, ತಾಪಂ ಸದಸ್ಯರು, ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಹೋಬಳಿ ಕಸಾಪ ಅಧ್ಯಕ್ಷರು

ಮತ್ತು ಸದಸ್ಯರು ವಿವಿಧ ಸಂಘ-ಸಂಸ್ಥೆಗಳ ಹಾಗೂ ಕನ್ನಡ ಪರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಲಿದ್ದು, ತಾಲೂಕಿನಾದ್ಯಂತ ಇರುವ ಎಲ್ಲಾ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು ಶಾಲಾ ಕಾಲೇಜು ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ಸಮ್ಮೇಳನ ನೆನಪಿಗಾಗಿ ಅಮೃತ ಮಹಲ್‌ ಎಂಬ ಕೈಪಿಡಿ ಹೊರತರಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next