ಧಾರವಾಡ: ರೈತರ ಸಾಲಮನ್ನಾಕ್ಕೆ ಸಾರ್ವಜನಿಕವಾಗಿ ಆಗ್ರಹ, ಒತ್ತಡಗಳು ಹೆಚ್ಚುತ್ತಿರುವ ಬೆನ್ನಲ್ಲೇ ಜಿಪಂ
ಸದಸ್ಯರೊಬ್ಬರು ತಾವು ಈವರೆಗೂ ಪಡೆದ ಗೌರವಧನವನ್ನು ಸರ್ಕಾರಕ್ಕೆ ಮರಳಿಸಲು ಮುಂದಾಗುವ ಮೂಲಕ ಸಾಲಮನ್ನಾಕ್ಕೆ ಮನವಿ ಮಾಡಿದ್ದಾರೆ.
ಗುಡಗೇರಿ ಜಿಪಂ ಸದಸ್ಯೆ ಜ್ಯೋತಿ ಬೆಂತೂರ ಅವರು ತಾವು ಈವರೆಗೆ ಪಡೆದ ಗೌರವಧನ 1,02,700 ರೂ.ಗಳನ್ನು ಜು.2ರಂದು ಮುಖ್ಯಮಂತ್ರಿಗಳಿಗೆ ಡಿಡಿ ಮೂಲಕ ತಲುಪಿಸಲು ಮುಂದಾಗಿದ್ದಾರೆ.
ಅಷ್ಟೇ ಅಲ್ಲ, ತಮ್ಮ ಸದಸ್ಯತ್ವದ ಮುಂದಿನ 32 ತಿಂಗಳಲ್ಲಿ ಬರುವ 2 ಲಕ್ಷ ರೂ.ಗಳ ಗೌರವ ಧನವನ್ನೂ ಅಗತ್ಯ ಬಿದ್ದರೆ ನೀಡುವುದಾಗಿ ಮುಖ್ಯಮಂತ್ರಿಗೆ ಪತ್ರ ಬರೆದು ತಿಳಿಸಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜ್ಯೋತಿ ಬೆಂತೂರ, ರಾಜ್ಯದಲ್ಲಿ ರೈತರ ಸಂಕಷ್ಟ ಕಂಡು ಈ ನಿರ್ಧಾರ ಕೈಗೊಂಡಿದ್ದು, ಇದು ಇತರೆ ಸದಸ್ಯರಿಗೆ ಮಾದರಿಯಾಗಲಿ ಎಂಬುದೇ ನನ್ನ ಆಶಯ. ರೈತ ಸಮುದಾಯದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲಮನ್ನಾ ಮಾಡುತ್ತಿರುವ ಕಾರ್ಯಕ್ಕೆ ಈ ಹಣ ಬಳಕೆ ಆಗಲಿ ಎಂದು ತಿಳಿಸಿದರು. ಇದಕ್ಕೆ ಪ್ರೇರಣೆಗೊಂಡ ಗುಡಗೇರಿ ಗ್ರಾಪಂ ಅಧ್ಯಕ್ಷ ಚನ್ನಬಸನಗೌಡ ಚಿಕ್ಕನಗೌಡ ತಮಗೆ ಇಲ್ಲಿಯವರೆಗೆ ಬಂದಿರುವ ಗೌರವಧನವನ್ನು ರೈತರ ಸಾಲಮನ್ನಾಕ್ಕೆ ನೀಡಲು ಬಯಸಿರುವುದಾಗಿ ತಿಳಿಸಿದರು.
ನನಗೆ ಬರುವ ಗೌರವಧನವನ್ನು ಸಾಲಮನ್ನಾ ಹಣಕ್ಕೆ ಸೇರಿಸಿಕೊಳ್ಳಲೆಂದು ಸರ್ಕಾರಕ್ಕೆ ಮರಳಿ ನೀಡಲು ಬಯಸಿದ್ದೇನೆ.ಇಲ್ಲಿಯವರೆಗೆ ಪಡೆದ ಗೌರವಧನದ 1,02,700 ರೂ. ಡಿಡಿಯನ್ನು ಜು.2ರಂದು
ಮುಖ್ಯಮಂತ್ರಿಗಳಿಗೆ ಸಲ್ಲಿಸುತ್ತೇನೆ.
– ಜ್ಯೋತಿ ಬೆಂತೂರು, ಧಾರವಾಡ ಜಿಪಂ ಸದಸ್ಯೆ