Advertisement
ಹಿರಿಯ ಅಧಿಕಾರಿಗಳ ಮೊಕ್ಕಾಂ: ದಕ್ಷಿಣ ವಲಯ ಐಜಿಪಿ ವಿಫುಲ್ ಕುಮಾರ್, ಜಿಲ್ಲಾಧಿಕಾರಿ ರಂದೀಪ್ ಡಿ., ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹುಣಸೂರಿನಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿ ಅವಲೋಕಿಸಿದರು.
Related Articles
Advertisement
ಬಿಜೆಪಿ ಅಧಿಕಾರಕ್ಕೆ: ರಾಜ್ಯದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಉತ್ತಮವಾಗಿ ನಡೆಯುತ್ತಿದ್ದು, ಎಲ್ಲೆಡೆ ದೊರೆಯುತ್ತಿರುವ ಅದ್ಭುತ ಜನಬೆಂಬಲ ಬಿಜೆಪಿಯನ್ನು ಗೆಲ್ಲಿಸಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ರಾಜ್ಯದ ಕೆಲವೇ ಕ್ಷೇತ್ರಗಳಿಗೆ ಮಾತ್ರ ಪರಿವರ್ತನಾ ಯಾತ್ರೆ ತಲುಪಿದ್ದು, ಅನೇಕ ಕ್ಷೇತ್ರಗಳಿಗೆ ಹೋಗಬೇಕಿದೆ. ಆದರೆ ಅತ್ಯಂತ ಯಶಸ್ಸಿನೊಂದಿಗೆ ಪರಿವರ್ತನಾ ಯಾತ್ರೆ ಪೂರ್ಣಗೊಳ್ಳಲಿದ್ದು, ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪಮುಖ್ಯಮಂತ್ರಿ ಆಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪಪ್ಪೂ ಬಗ್ಗೆ ಮಾತಾಡಲ್ಲ: ಗುಜರಾತ್ ಚುನಾವಣೆಯಲ್ಲಿ ಕಳೆದ ಬಾರಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಆ ಮೂಲಕ ಉತ್ತರ ಪ್ರದೇಶದಲ್ಲಿ ಎದ್ದಿರುವಂತೆ ಗುಜರಾತ್, ಕರ್ನಾಟಕ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಬಿಜೆಪಿ ಬಿರುಗಾಳಿ ಎದ್ದೇಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿ, ನಂತರ ಬೇರೊಬ್ಬರ ಬಗ್ಗೆ ಮಾತನಾಡಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಪ್ಪೂಗಳ ಬಗ್ಗೆ ಮಾತನಾಡುವ ಅಭ್ಯಾಸವಿಲ್ಲ ಎಂದು ರಾಹುಲ್‌ಗಾಂಧಿ ಪಟ್ಟಾಭಿಷೇಕದ ಕುರಿತು ಲೇವಡಿ ಮಾಡಿದರು.
ನಾವೂ ಸುಮ್ಮನೇ ಕೂರುವುದಿಲ್ಲ: ದಮನಕಾರಿ ನೀತಿ ಕೈಬಿಟ್ಟು,ಶಾಂತಿ ಸೌಹಾರ್ದತೆಯಿಂದ ಬದುಕುವುದನ್ನು ಕಲಿಯಲಿ, ಸಿಎಂ ಸಿದ್ದರಾಮಯ್ಯ ಏಕಚಕ್ರಾಧಿಪತ್ಯ ಸ್ಥಾಪಿಸಲು ಹೊರಟಿದ್ದಾರೆ. ಇದರ ಪರಿಣಾಮವಾಗಿ ಬಹು ಸಂಖ್ಯಾತರ ಭಾವನೆಗಳನ್ನು ಕೆರಳಿಸುವ ಕೆಲಸ ನಡೆದಿದೆ. ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ನಾವೂ ಸುಮ್ಮನೇ ಕೂರುವುದಿಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ತಿಳಿಸಿದರು.