Advertisement

ಶ್ರೀಕೃಷ್ಣನ ನಾಡಿಗೆ ಇಂದು ಮೋದಿ

07:40 AM May 01, 2018 | Team Udayavani |

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಪೈಕಿ ಉಡುಪಿಗೇ ಮೊದಲಿಗೆ ವಿಧಾನಸಭಾ ಚುನಾವಣೆ ಪ್ರಚಾರ ಸಂಬಂಧ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಉಡುಪಿ ಜಿಲ್ಲಾ ಬಿಜೆಪಿ ಸಜ್ಜಾಗಿದೆ.

Advertisement

ಮೋದಿ ಪ್ರಧಾನಿಯಾದ ಬಳಿಕ 
ಮೊದಲ ಭೇಟಿ

ವಿಶೇಷವೆಂದರೆ ಜಿಲ್ಲಾ ಜನರಿಗೆ ನರೇಂದ್ರ ಮೋದಿ ಪ್ರಧಾನಿ. ಬಿಜೆಪಿ ಪಕ್ಷದವರಿಗೆ ಅವರು ಪ್ರಧಾನಿ ಮತ್ತು ತಮ್ಮ ಪಕ್ಷದ ವರಿಷ್ಠ. ಈ ಹಿಂದೆ ಮೂರು ಬಾರಿ ಮೋದಿಯವರು ಉಡುಪಿಗೆ ಬಂದಿದ್ದರೂ ಈ ಬಾರಿ ವಿಶೇಷವೇ ಬೇರೆ. ಎರಡು ಬಾರಿ ಬಂದಾಗಲೂ ಅವರು ಒಂದು ರಾಜ್ಯದ ಮುಖ್ಯಮಂತ್ರಿ. ಈ ಬಾರಿ ದೇಶದ ಪ್ರಧಾನಿ. ಪ್ರಧಾನಿ ಪಟ್ಟಕ್ಕೇರಿದ ಬಳಿಕ ಉಡುಪಿಗೆ ಇದು ಮೊದಲ ಭೇಟಿ.

ಈ ಐತಿಹಾಸಿಕ ಕ್ಷಣಕ್ಕೆ ವೇದಿಕೆ ಯಾಗಲಿರುವ ಎಂಜಿಎಂ ಕಾಲೇಜು ಮೈದಾನವನ್ನು ಮೇ 1ರ ಬಹಿರಂಗ ಸಮಾವೇಶಕ್ಕೆ ಸಂಪೂರ್ಣವಾಗಿ ಸಿದ್ಧಗೊಳಿ ಸಲಾಗುತ್ತಿದೆ. ಸುಮಾರು ಒಂದು ಲಕ್ಷ ಮಂದಿ ಸೇರುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಯಾವುದೇ ಕಾರಣಕ್ಕೂ ಕಾರ್ಯಕ್ರಮದಲ್ಲಿ ಸಣ್ಣ ಲೋಪವೂ ಆಗದಂತೆ ಪೂರ್ವ ಸಿದ್ಧತಾ ಸಭೆಗಳನ್ನು ನಡೆಸಿ ಸ್ಥಳೀಯ ಮುಖಂಡರು ಕ್ರಮ ಕೈಗೊಳ್ಳುತ್ತಿದ್ದಾರೆ. ಮಧ್ಯಾಹ್ನ ವೇಳೆ ಕಾರ್ಯಕ್ರಮ ನಡೆಯುತ್ತಿರುವುದರಿಂದ ಬಿಸಿಲಿನ ತಾಪದಿಂದ ರಕ್ಷಿಸಲು ಇಡೀ ಮೈದಾನಕ್ಕೆ ಪೆಂಡಾಲ್‌ ಹಾಕಲಾಗಿದೆ. ಸುಮಾರು 1 ಸಾವಿರ ಮಂದಿ ಸ್ವಯಂಸೇವಕರನ್ನು ಕಾರ್ಯಕ್ರಮದ ಯಶಸ್ವಿಗೆ ನಿಯೋಜಿಸಲಾಗಿದೆ.

ಬಿಗಿ ಭದ್ರತೆ 
ಪ್ರಧಾನಿಯವರು ಪಾಲ್ಗೊಳ್ಳುವ ಬಹಿರಂಗ ಸಭೆಗೆ ಜಿಲ್ಲಾ ಪೊಲೀಸ್‌ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಳ್ಳುತ್ತಿದೆ. ಈಗಾಗಲೇ ಮೋದಿಯವರ ಆಗಮನ, ನಿರ್ಗಮನ ವೇಳೆ ಹಾಗೂ ಕಾರ್ಯಕ್ರಮದ ಸಂದರ್ಭದಲ್ಲೂ ಯಾವುದೇ ಅವಘಡ, ಗೊಂದಲಗಳು ಉದ್ಭವಿಸದಂತೆ ವಾಹನ ಸಂಚಾರದಲ್ಲಿ ಕೆಲವು ಬದಲಾವಣೆಗಳನ್ನು ಕೈಗೊಳ್ಳಲಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ಹಲವು ಸಭೆ ನಡೆಸಿ ಸಿಬಂದಿಯನ್ನು ನಿಯೋಜಿಸಿದ್ದಾರೆ. 

ರಸ್ತೆ ದುರಸ್ತಿ, ಸ್ವತ್ಛತೆ
ನಗರದ ಪ್ರಮುಖ ರಸ್ತೆಯಾದ ಉಡುಪಿ-ಮಣಿಪಾಲ ಮುಖ್ಯರಸ್ತೆಯನ್ನು ನಗರಸಭೆ ಸಿಬಂದಿ ಸ್ವತ್ಛಗೊಳಿಸುವಲ್ಲಿ ಕಾರ್ಯೋನ್ಮುಖವಾಗಿದೆ. ರಸ್ತೆ ಅಕ್ಕಪಕ್ಕದ ಕಳೆಗಿಡಗಳನ್ನು ಕತ್ತರಿಸುವುದು, ಪ್ರಧಾನಿಯವರು ಸಾಗುವ ಪ್ರಮುಖ ರಸ್ತೆಯ ಗುಂಡಿಗಳಿಗೆ ತೇಪೆ ಹಾಕುತ್ತಿರುವುದಲ್ಲದೇ, ಸಮಾವೇಶ ನಡೆಯುವ ಮೈದಾನದ ಸಂಪರ್ಕ ರಸ್ತೆಗಳಲ್ಲಿ ಒಂದಾಗಿರುವ ಬಿ.ಎಡ್‌. ಕಾಲೇಜು ರಸ್ತೆಯನ್ನು ಸೋಮವಾರ ದುರಸ್ತಿಪಡಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next