Advertisement
ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾಕ್ಕೆ ಸೋತುದನ್ನು ಕಂಡಾಗ ದ್ವಿತೀಯ ದರ್ಜೆಯ ಭಾರತ ತಂಡ ಈ ಕೂಟದಲ್ಲಿ ಬಹಳ ಮುಂದೆ ಸಾಗಲಿಕ್ಕಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ ಅನಂತರ ಸತತ 3 ಲೀಗ್ ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಗರಿಮೆಯೊಂದಿಗೆ ಎಲ್ಲರಿಗಿಂತ ಮೊದಲೇ ಫೈನಲ್ ಟಿಕೆಟ್ ಕಾದಿರಿಸಿದ್ದು ಭಾರತದ ಹಿರಿಮೆಗೆ ಸಾಕ್ಷಿ. ಈ ಹಾದಿಯಲ್ಲಿ 2 ಸಲ ಸ್ಪಿರಿಟೆಡ್ ಬಾಂಗ್ಲಾದೇಶಕ್ಕೆ ಸೋಲುಣಿಸಿದ್ದನ್ನು ಮರೆಯುವಂತಿಲ್ಲ. ಮೂರನೇ ಸಲವೂ ಜಯ ಟೀಮ್ ಇಂಡಿಯಾದ್ದೇ ಆಗಬಹುದೆಂಬುದು ಸಹಜ ನಿರೀಕ್ಷೆ.
ಸರಣಿಯಲ್ಲಿ ಇದೇ ಮೊದಲ ಸಲ ಆಡಲಿಳಿದು ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಮುನ್ನಡೆಸಿದ “ಆ್ಯಂಗ್ರಿ ಮ್ಯಾನ್’ ಶಕಿಬ್ ಅಲ್ ಹಸನ್ ಕೂಡ ಅಪಾಯಕಾರಿ ಆಟಗಾರ. ಅವರು “ಆ್ಯಂಗ್ರಿ’ ಆದುದಕ್ಕೆ ಕಾರಣ, ಈ ಪಂದ್ಯದ ಅಂತಿಮ ಹಂತದಲ್ಲಿ ನಡೆದ ಘಟನೆ.
Related Articles
Advertisement
ಕಾಕತಾಳೀಯವೆಂಬಂತೆ, ಮೆಲ್ಬರ್ನ್ನಲ್ಲಿ ನಡೆದ ಭಾರತ-ಬಾಂಗ್ಲಾದೇಶ ನಡುವಿನ 2015ರ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲೂ ಇಂಥದೇ ಘಟನೆಯೊಂದು ಸಂಭವಿಸಿತ್ತು. ಆಗ ರೋಹಿತ್ ಶರ್ಮ ಫುಲ್‌ಟಾಸ್ ಎಸೆತವೊಂದಕ್ಕೆ ಕ್ಯಾಚ್ ನೀಡಿದಾಗ ಅದನ್ನು ನೋಬಾಲ್ ಎಂದು ಅಂಪಾಯರ್ ತೀರ್ಪಿತ್ತಿದ್ದರು. ಇದನ್ನು ಬಾಂಗ್ಲಾ ಕ್ರಿಕೆಟಿಗರು ಬಲವಾಗಿ ವಿರೋಧಿಸಿದ್ದರು. ಈಗ ಇಂಥದೇ ಎಸೆತಕ್ಕೆ ನೋಬಾಲ್ ನೀಡದ ಕಾರಣ ವಿರೋಧಿಸಿದ್ದಾರೆ. ಕ್ರಿಕೆಟಿನ ವೈಚಿತ್ರ್ಯಗಳಲ್ಲಿ ಇದೂ ಒಂದು!
ಮತ್ತೂಂದು ಹ್ಯಾಟ್ರಿಕ್ಭಾರತದೆದುರಿನ ಮೊದಲ ಲೀಗ್ ಪಂದ್ಯವನ್ನು 6 ವಿಕೆಟ್‌ಗಳಿಂದ ಕಳೆದುಕೊಂಡ ಬಾಂಗ್ಲಾ, ಮರು ಮುಖಾಮುಖೀಯಲ್ಲಿ ರಹೀಂ ಅವರ ಭಾರೀ ಹೋರಾಟದ ನಡುವೆಯೂ 17 ರನ್ನುಗಳ ಸೋಲಿಗೆ ಗುರಿಯಾಯಿತು. ಆದರೆ ಈ ಸೋಲುಗಳ ಕತೆ ಹಾಗಿರಲಿ, ಭಾರತದೆದುರಿನ ಉಳಿದೊಂದು ಪಂದ್ಯ ಗೆದ್ದರೆ ಬಾಂಗ್ಲಾ ಚಾಂಪಿಯನ್ನೇ ಆಗಲಿದೆ ಎಂಬುದನ್ನು ಮರೆಯುವಂತಿಲ್ಲ! ಶ್ರೀಲಂಕಾ ವಿರುದ್ಧ ಹಾರಾಡಿದ ಬಾಂಗ್ಲಾದೇಶದ ಆಟ ಭಾರತದ ವಿರುದ್ಧ ನಡೆಯಲಿಲ್ಲ ಎಂಬುದು ಇಲ್ಲಿಯ ತನಕ ಸತ್ಯ. ಆದರೆ ರವಿವಾರ ರಾತ್ರಿ ಏನೂ ಆಗಬಹುದು. ಲಂಕೆಯನ್ನು ಹೊರದಬ್ಬಿದ ಬಳಿಕ ಬಾಂಗ್ಲಾದ ಸ್ಪಿರಿಟ್ ಸಹಜವಾಗಿಯೇ ಹೆಚ್ಚಿದೆ. ಹೀಗಾಗಿ ರೋಹಿತ್ ಪಡೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಈ ಕೂಟದಲ್ಲಿ ಗೆಲುವಿನ ಹ್ಯಾಟ್ರಿಕ್ ಸಾಧಿಸಿರುವ ಟೀಮ್ ಇಂಡಿಯಾ, ಬಾಂಗ್ಲಾ ಟೈಗರ್ ವಿರುದ್ಧವೂ ಹ್ಯಾಟ್ರಿಕ್ ಪೂರೈಸಬೇಕಿದೆ. ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಸುರೇಶ್ ರೈನಾ, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್, ವಿಜಯ್ ಶಂಕರ್, ಶಾದೂìಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಜೈದೇವ್ ಉನಾದ್ಕತ್, ಯಜುವೇಂದ್ರ ಚಾಹಲ್. ಬಾಂಗ್ಲಾದೇಶ: ತಮಿಮ್ ಇಕ್ಬಾಲ್, ಲಿಟ್ಟನ್ ದಾಸ್, ಶಬ್ಬೀರ್ ರೆಹಮಾನ್, ಮುಶ್ಫಿಕರ್ ರಹೀಂ, ಸೌಮ್ಯ ಸರ್ಕಾರ್, ಮಹಮದುಲ್ಲ, ಶಕಿಬ್ ಅಲ್ ಹಸನ್ (ನಾಯಕ), ಮೆಹಿದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ರುಬೆಲ್ ಹೊಸೇನ್, ನಜ್ಮುಲ್ ಇಸ್ಲಾಮ್. ಆರಂಭ: ಸಂಜೆ 7.00
ಪ್ರಸಾರ: ಡಿ ನ್ಪೋರ್ಟ್