Advertisement

ಭೌತಶಾಸ್ತ್ರ ಕಲಿಕೆಯ ಅಗತ್ಯ ಇಂದು ಹೆಚ್ಚಾಗಿದೆ

02:41 PM Sep 26, 2018 | |

. ಭೌತಶಾಸ್ತ್ರಕ್ಕೂ ನಮ್ಮ ದೈನಂದಿನ ಬದುಕಿಗೂ ಇರುವ ಸಾಮ್ಯತೆ ಏನು?
ಭೌತಶಾಸ್ತ್ರವು ಮೂಲ ವಿಜ್ಞಾನದ ಸ್ವರೂಪವಾಗಿದೆ. ಜಗತ್ತಿನ ಎಲ್ಲ ಆಗುಹೋಗುಗಳು ಭೌತಶಾಸ್ತ್ರದ ನಿಯಮದ ಪ್ರಕಾರವೇ ನಡೆಯುತ್ತಿದೆ. ಯಾವುದೇ ವಸ್ತು ಚಲನೆಗೆ, ವಸ್ತುಗಳ ಶಕ್ತಿಯ ಬಿಡುಗಡೆಗೆ ಮೂಲ ವಿಜ್ಞಾನವೇ ಭೌತಶಾಸ್ತ್ರ. ಚಲನೆಗಳು ನಡೆಯದಿದ್ದರೆ ನಮ್ಮ ನಿತ್ಯ ಜೀವನ ಸುಸೂತ್ರವಾಗಿ ನಡೆಯಲು ಸಾಧ್ಯವಿಲ್ಲ.

Advertisement

. ತಂತ್ರಜ್ಞಾನ ಯುಗದಲ್ಲಿ ಇಂದು ನಾವಿರುವಾಗ ಭೌತಶಾಸ್ತ್ರದ ಕಲಿಕೆಯ ಮಹತ್ವ ಏನಿದೆ?
ತಂತ್ರಜ್ಞಾನ ಕ್ಷೇತ್ರದಲ್ಲಿ ಭೌತಶಾಸ್ತ್ರದ ಕಲಿಕೆಯ ಅಗತ್ಯ ಹೆಚ್ಚಿದೆ. ಮೂಲ ವಿಜ್ಞಾನವೇ ಭೌತಶಾಸ್ತ್ರವಾಗಿದ್ದು, ಇದರಿಂದವೇ ಅನೇಕ ಶಕ್ತಿಗಳು ಬೆಳೆದು ಬಂದಿವೆ. ಸಧ್ಯ ಭಾರತ ಈ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಸಾಧನೆ ಮಾಡಿವೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರ ಬೆಳವಣಿಗೆಯಾಗುತ್ತಿದೆ. ಭೌತ್ತ ಶಾಸ್ತ್ರದ ಮೂಲ ವಿಜ್ಞಾನದ ಕಲಿಕೆಯ ಅವಶ್ಯವಿದೆ.

. ಭೌತಶಾಸ್ತ್ರ ಕಲಿಕೆಯಲ್ಲಿ ವಿದ್ಯಾರ್ಥಿಗಳ ಆಸಕ್ತಿ ಹೇಗಿದೆ? ಭೌತಶಾಸ್ತ್ರ ಪಠ್ಯಕ್ರಮದಲ್ಲಿ ಯಾವುದಾದರೂ ಬದಲಾವಣೆಗಳಾಗಬೇಕು ಎಂದೆನಿಸುತ್ತದೆಯೇ? ಹೇಗೆ?
ಭೌತಶಾಸ್ತ್ರದ ಕಲಿಕೆಯಲ್ಲಿ ವಿದ್ಯಾರ್ಥಿಗಳ ಆಸಕ್ತಿ ಉತ್ತಮವಾಗಿದೆ. ಅದಕ್ಕೆ ಮುಖ್ಯವಾಗಿ ಭೌತಶಾಸ್ತ್ರವನ್ನು ಕಲಿಯುವುದಕ್ಕೆ ಆಸಕ್ತರಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಮೂಲ ಭೌತಶಾಸ್ತ್ರವನ್ನು ಸೊಗಸಾಗಿ ಕಲಿಸುವುದರಿಂದ ಆ ವಿದ್ಯಾರ್ಥಿಗಳಿಂದ ಮುಂದಿನ ಹಂತದಲ್ಲಿ ಉತ್ತಮ ಕಲಿಕೆ ಸಾಧ್ಯ. ಭೌತಶಾಸ್ತ್ರ ಪಠ್ಯಕ್ರಮದಲ್ಲಿ ಸರಕಾರ ಮತ್ತಷ್ಟು ಬದಲಾವಣೆ ಮಾಡಲು ಅವಶ್ಯಕತೆ ಇದೆ. ಶಿಕ್ಷಕರು, ವಿಜ್ಞಾನಿ, ವಿದ್ಯಾರ್ಥಿಗಳನ್ನು ಒಟ್ಟು ಸೇರಿ ಒಳ್ಳೆಯನಿರ್ಧಾರಗಳನ್ನು ಹಂಚಿಕೊಂಡು ಶಿಕ್ಷಣ ನೀಡಬೇಕಿದೆ.

.ಭೌತಶಾಸ್ತ್ರ ಕಲಿಕೆ- ಉದ್ಯೋಗ ಕ್ಷೇತ್ರದಲ್ಲಿ ಅವಕಾಶಗಳು ಹೇಗಿವೆ?
ಭೌತಶಾಸ್ತ್ರ ವಿಷಯ ಕಲಿತ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಬಹುದು. ವಿಜ್ಞಾನಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಬಹುದು. ರಾಷ್ಟ್ರದಲ್ಲಿ ಹೆಚ್ಚಿನ ಸಂಶೋಧನ ಕೇಂದ್ರಗಳಿದ್ದು, ಇಲ್ಲಿ ಭೌತಶಾಸ್ತ್ರ ಕಲಿತ ವಿದ್ಯಾರ್ಥಿಗಳಿಗೆ ಬೇಡಿಕೆ ಇದೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭೌತಶಾಸ್ತ್ರದ ಮಹತ್ವ ಹೇಗಿದೆ? ಅದರಲ್ಲಿ ಬದಲಾವಣೆಗಳು ಬೇಕು ಎಂದೆನಿಸುತ್ತದೆಯೇ? ಹೇಗೆ?
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭೌತಶಾಸ್ತ್ರದ ಮಹತ್ವ ಚೆನ್ನಾಗಿದೆ. ದೊಡ್ಡ ಸಂಸ್ಥೆಗಳಲ್ಲಿ ಸಂಶೋಧನೆ ನಡೆಸಲು ಅವಕಾಶವಿದೆ. ವಿದ್ಯಾರ್ಥಿಗಳು ಕೂಡ ಅಲ್ಲಿಯ ಪ್ರವೇಶ ಪರೀಕ್ಷೆಗಳಲ್ಲಿ ಗಮನಾರ್ಹ ಸಾಧನೆ ತೋರುತ್ತಿದ್ದಾರೆ. 

Advertisement

ಡಾ| ಈಶ್ವರ್‌ ಭಟ್‌,
ಸಹ ಪ್ರಾಧ್ಯಾಪಕ, ಭೌತಶಾಸ್ತ್ರಜ್ಞ ವಿಭಾಗ,
ಸಂತ ಅಲೋಶಿಯಸ್‌ ಪದವಿ ಕಾಲೇಜು ಮಂಗಳೂರು

 ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next