Advertisement
ಮಣಿಪಾಲ ಎಜು ಬಿಲ್ಡಿಂಗ್‌ನಲ್ಲಿ ಬೆಳಗ್ಗೆ 6.15ಕ್ಕೆ ಮ್ಯಾರಥಾನ್‌ಗೆ ಚಾಲನೆ ನೀಡಲಾಗುತ್ತದೆ. ಮಾಹೆ ಪ್ರೊ ಚಾನ್ಸಿಲರ್ ಡಾ| ಎಚ್.ಎಸ್. ಬಲ್ಲಾಳ್, ಸಚಿವ ಪ್ರಮೋದ್ ಮಧ್ವರಾಜ್ ಸಹಿತ ಗಣ್ಯರು ಪಾಲ್ಗೊಳ್ಳಲಿದ್ದಾರೆ. 9 ಗಂಟೆಗೆ ಕೆಎಂಸಿ ಗ್ರೀನ್ಸ್‌ನಲ್ಲಿ ಬಹುಮಾನ ವಿತರಣೆಯಾಗಲಿದೆ. ಮ್ಯಾರಥಾನ್‌ನಲ್ಲಿ 8 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ. ಒಟ್ಟು 8.50 ಲ.ರೂ. ಮೊತ್ತದ ಬಹುಮಾನ ನೀಡಲಾಗುತ್ತದೆ. ಸ್ಟಾರ್ಟಿಂಗ್ ಪಾಯಿಂಟ್, ಪೆರಂಪಳ್ಳಿ ಮತ್ತು ಕಿನ್ನಿಮೂಲ್ಕಿಯಲ್ಲಿ ಹೀಗೆ ಒಟ್ಟು 3 ಕಡೆ ಮ್ಯಾಟ್‌ನೊಂದಿಗೆ ಟೈಮಿಂಗ್ ಚಿಪ್ ಅಳವಡಿಸಲಾಗುವುದು. ಪುರುಷರು, ಮಹಿಳೆಯರು, ವಿದ್ಯಾರ್ಥಿಗಳು, ಸಿಬಂದಿ, ಮುಕ್ತ ಹೀಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
* ಮಹಿಳೆ ಮತ್ತು ಪುರುಷರ 21.1 ಕಿ.ಮೀ. ಹ್ಯಾಫ್ ಮ್ಯಾರಥಾನ್ ಓಟಕ್ಕೆ : ಮಣಿಪಾಲ ಎಜು ಕಟ್ಟಡದಿಂದ ಪ್ರಾರಂಭವಾಗಿ-ಕಂಟ್ರಿ ಇನ್ ಸರ್ಕಲ್-ಸಿಂಡಿಕೇಟ್ ಸರ್ಕಲ್-ಪೆರಂಪಳ್ಳಿ ರಸ್ತೆ-ತಿರುಗಿ ಕಂಟ್ರಿಇನ್-ಸಾಯಿರಾಧಾ ಗ್ರೀನ್‌ವ್ಯಾಲಿ-ಸೆಂಚುರಿ ಫಾರ್ಮ್-ಪೆರಂಪಳ್ಳಿ ಚರ್ಚ್-ರೈಲ್ವೇ ಸೇತುವೆ-ಗುಂಡಿಬೈಲು ಬಲಕ್ಕೆ ಅಂಬಾಗಿಲು ರಸ್ತೆ-ಅಂಬಾಗಿಲು ಎಡಕ್ಕೆ ರಾ.ಹೆ. 66-ನಿಟ್ಟೂರು-ಆಭರಣ ಮೋಟಾರ್-ಕರಾವಳಿ ಜಂಕ್ಷನ್-ಬನ್ನಂಜೆಯಲ್ಲಿ ಬಲಕ್ಕೆ-ಬ್ರಹ್ಮಗಿರಿ-ನಾಯರ್‌ಕೆರೆ-ಕಿನ್ನಿಮೂಲ್ಕಿ-ಬಿಗ್‌ಬಜಾರ್-ಉಡುಪಿ ಸರ್ವೀಸ್ ಬಸ್ ನಿಲ್ದಾಣ-ಕಿದಿಯೂರು ಹೊಟೇಲ್-ಕಲ್ಸಂಕ-ಇಂದ್ರಾಳಿಯಾಗಿ ಮಣಿಪಾಲ.
* 10 ಕಿ.ಮೀ. ಓಟ: ಮಣಿಪಾಲ ಎಜು ಕಟ್ಟಡದಿಂದ ಪ್ರಾರಂಭವಾಗಿ-ಕಂಟ್ರಿ ಇನ್ ಸರ್ಕಲ್-ಸಿಂಡಿಕೇಟ್ ಸರ್ಕಲ್-ಪೆರಂಪಳ್ಳಿ ರಸ್ತೆ-ತಿರುಗಿ ಕಂಟ್ರಿಇನ್-ಸಾಯಿರಾಧಾ ಗ್ರೀನ್‌ವ್ಯಾಲಿ-ಸೆಂಚುರಿ ಫಾರ್ಮ್-ಪೆರಂಪಳ್ಳಿ ಚರ್ಚ್-ಎಡಕ್ಕೆ ಬಾಳಿಗಾ ಆಸ್ಪತ್ರೆ-ಎಡಕ್ಕೆ ಸಗ್ರಿ ವೈಕುಂಠ ಬಾಳಿಗಾ ಕಾನೂನು ಕಾಲೇಜು-ಬಲಕ್ಕೆ ಎಂಜಿಎಂ ಮೈದಾನ-ಎಡಕ್ಕೆ ಎಸ್‌ಆರ್‌ಎಸ್ ಶಾಲೆ-ಉಡುಪಿ-ಮಣಿಪಾಲ ಮುಖ್ಯ ರಸ್ತೆಯಾಗಿ-ಇಂದ್ರಾಳಿ-ಮಣಿಪಾಲ.
* 5 ಕಿ.ಮೀ. ಓಟ: ಮಣಿಪಾಲ ಎಜು ಕಟ್ಟಡದಿಂದ ಪ್ರಾರಂಭವಾಗಿ-ಕಂಟ್ರಿ ಇನ್ ಸರ್ಕಲ್, ಡಿಸಿ ಆಫೀಸು ರಸ್ತೆ-ಆರ್‌ಟಿಒ ಆಫೀಸು-ಎಂಡ್ ಪಾಯಿಂಟ್ ರಸ್ತೆಯಾಗಿ-ತಿರುಗಿ ಆರ್‌ಟಿಒ-ಕಂಟ್ರಿ ಇನ್-ಚೈನಾ ವ್ಯಾಲಿ-ಸಿಂಡಿಕೇಟ್ ಸರ್ಕಲ್-ಪೋಸ್ಟ್ ಆಫೀಸು-ಮಣಿಪಾಲ ಎಜು ಕಟ್ಟಡ.
* 3 ಕಿ.ಮೀ. ಓಟ: : ಮಣಿಪಾಲ ಎಜು ಕಟ್ಟಡದಿಂದ ಪ್ರಾರಂಭವಾಗಿ-ಕಂಟ್ರಿ ಇನ್ ಸರ್ಕಲ್, ಡಿಸಿ ಆಫೀಸು ರಸ್ತೆ-ತಿರುಗಿ ಕಂಟ್ರಿ ಇನ್-ಚೈನಾ ವ್ಯಾಲಿ-ಸಿಂಡಿಕೇಟ್ ಸರ್ಕಲ್-ಪೋಸ್ಟ್ ಆಫೀಸು-ಮಣಿಪಾಲ ಎಜು ಕಟ್ಟಡ.