Advertisement
ಜೈವಿಕ ಇಂಧನ ಎಂದರೆ? ಸಸ್ಯ, ಕೃಷಿ ತ್ಯಾಜ್ಯ, ಪ್ರಾಣಿ ತ್ಯಾಜ್ಯ ಹಾಗೂ ಇತರ ಸಾವಯವ ಪರಿಕರಗಳಿಂದ ದೊರೆಯುವ ಇಂಧನವೇ ಜೈವಿಕ ಇಂಧನ. ಈ ಇಂಧನಗಳನ್ನು ಪಳೆಯುಳಿಕೆ ಇಂಧನಗಳ ಪರ್ಯಾಯವಾಗಿ ಬಳಸಬಹುದಾಗಿದೆ.
ಆರೋಗ್ಯ ಯುತ ಪರಿಸರ ನಿರ್ಮಾಣದಲ್ಲಿ ಜೈವಿಕ ಇಂಧನ ಸಹಕಾರಿಯಾಗಿದೆ. ಇವು ನವೀಕರಿಸಬಹುದಾದ ಇಂಧನ ಮೂಲಗಳಾಗಿವೆ. ಇವುಗಳಿಂದ ಇಂಗಾಲದ ಹೊರಸೂಸುವಿಕೆ ಯನ್ನು ಶೇ.90 ರಷ್ಟು ತಡೆಯಬಹುದಾಗಿದ್ದು ವಾಯುಮಾಲಿನ್ಯವನ್ನು ನಿಯಂತ್ರಿಸಿ, ಪರಿಸರವನ್ನು ಸಂರಕ್ಷಿಸಬಹುದಾಗಿದೆ. ಇದರಿಂದ ನಮ್ಮ ಸುತ್ತಮುತ್ತಲಿನ ಪ್ರಕೃತಿಯನ್ನು ಹಸುರಾಗಿ ಉಳಿಸಲು ಸಾಧ್ಯ. ಜೈವಿಕ ಇಂಧನಗಳ ಬಳಕೆ ಹೆಚ್ಚಿದಂತೆ ಕಚ್ಚಾ ತೈಲಗಳ ಮೇಲಿನ ಅವಲಂಬನೆ ಕಡಿಮೆಯಾಗುವುದರ ಜತೆಯಲ್ಲಿ ಇದಕ್ಕಾಗಿ ವ್ಯಯಿಸಲಾಗುತ್ತಿರುವ ಭಾರೀ ಪ್ರಮಾಣದ ಹಣವನ್ನೂ ಉಳಿಸಬಹುದಾಗಿದೆ. ಭಾರತ ಮತ್ತು ಜೈವಿಕ ಇಂಧನ
ಭಾರತ ಸರಕಾರದ ಪೆಟ್ರೋ ಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು 2015ರಿಂದ ಜೈವಿಕ ಇಂಧನ ದಿನವನ್ನು ಆಚರಿಸುತ್ತಿದೆ. ಭಾರತವು ಜೈವಿಕ ಇಂಧನಗಳ ಉತ್ಪಾ
ದನೆಯಲ್ಲಿ ಮುಂಚೂಣಿಯಲ್ಲಿರುವ ದೇಶಗಳಲ್ಲಿ ಒಂದಾಗಿದೆ. ಭಾರತ ಸರಕಾರ ಇಂಧನ ಆಮದು ಅವಲಂಬನೆಯನ್ನು ಕಡಿಮೆ ಮಾಡುವ, ಪರಿಸರದ ಸುರಕ್ಷೆಯ ಸಲುವಾಗಿ ಜೈವಿಕ ಇಂಧನದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನುನೀಡಿದೆ.
Related Articles
Advertisement
ಭಾರತ ಸರಕಾರವು 2018ರಲ್ಲಿ ರಾಷ್ಟ್ರೀಯ ಜೈವಿಕ ಇಂಧನ ನೀತಿಯನ್ನು ಜಾರಿಗೆ ತಂದಿತು. 2030ರ ವೇಳೆಗೆ ಶೇ.20ರಷ್ಟು ಎಥೆನಾಲ್ ಮಿಶ್ರಣ ಹಾಗೂ ಶೇ.5ರಷ್ಟು ಜೈವಿಕ ಇಂಧನ ಮಿಶ್ರಣವನ್ನು ಸಾಧ್ಯಗೊಳಿಸುವುದು ಇದರ ಉದ್ದೇಶ. ಇದರೊಂದಿಗೆ ಜೈವಿಕ ಇಂಧನಗಳ ಫೀಡ್‌ಸ್ಟಾಕ್‌ಗಳನ್ನು ಹೆಚ್ಚಿಸುವುದು. ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್ ಮಿಶ್ರಣವನ್ನು ಹೆಚ್ಚಿಸುವ ಗುರಿಯನ್ನು ಹೊಂದುವುದು. ಅಲ್ಲದೇ ಪೆಟ್ರೋಲ್ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮೇಕ್ ಇನ್ ಇಂಡಿಯಾ ಯೋಜನೆಯಡಿ ವಿಶೇಷ ಆರ್ಥಿಕ ವಲಯಗಳಲ್ಲಿ ಹಾಗೂ ರಫ್ತು ಕೇಂದ್ರಗಳಲ್ಲಿ ಜೈವಿಕ ಇಂಧನಗಳ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ಮೂಲಕ 2047ರ ವೇಳೆಗೆ ಭಾರತ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಯನ್ನು ಈ ನೀತಿ ಹೊಂದಿದೆ.
ಭಾರತ ಸರಕಾರವು 2ಜಿ ಎಥೆನಾಲ್ ಉತ್ಪಾದನೆಯನ್ನು ಉತ್ತೇಜಿಸಲು “ಪ್ರಧಾನ್‌ಮಂತ್ರಿ ಜೀ-ವನ್’ ಯೋಜನೆ ಯನ್ನು ಜಾರಿಗೆ ತಂದಿದೆ. ಇದೀಗ ಜಿ-20 ರಾಷ್ಟ್ರಗಳ ಶೃಂಗ ಸಭೆಯ ಚುಕ್ಕಾಣಿ ಹಿಡಿದಿರುವ ಭಾರತ ಜೈವಿಕ ಇಂಧನಗಳ ಉತ್ಪಾದನೆಗೆ ಅಂತಾರಾಷ್ಟ್ರೀಯ ಸಹಕಾರದ ನಿರೀಕ್ಷೆಯಲ್ಲಿದೆ.