Advertisement
ಯಾವಾಗ ?ಡಿ.3ರ ಮಧ್ಯರಾತ್ರಿ ಪಾಕಿಸ್ಥಾನದ ಭೂಸೇನೆ ಹಾಗೂ ವಾಯುಸೇನೆ ಭಾರತದ ಪಂಜಾಬ್ ಪ್ರಾಂತ ಹಾಗೂ ಸೇನಾ ನೆಲೆಗಳ ಮೇಲೆ ದಾಳಿ ಆರಂಭಿಸಿದ್ದವು. ಬೆಳಗ್ಗೆ 5.30ರ ಹೊತ್ತಿಗೆ ಏನಾಯಿತು ಎಂದು ತಿಳಿಯುವ ಹೊತ್ತಿಗೆ ಆಗಲೇ ಪಾಕ್ ಭಾರತದ ಮೇಲೆ ಸಂಪೂರ್ಣ ಯುದ್ಧವನ್ನು ಸಾರಿ ಬಿಟ್ಟಿತ್ತು. ಒಟ್ಟಾರೆ 13 ದಿನಗಳ ಕಾಲ ಯುದ್ಧ ಸಾಗಿತ್ತು. ಭಾರತದ ಮೇಲೆ ಸದಾ ಹಗೆಯನ್ನು ಸಾಧಿಸಿಕೊಂಡು ಬರುತ್ತಿದ್ದ ಪಾಕ್‌ನ ಈ ದಾಳಿಗೆ ಪ್ರತಿಯಾಗಿ ದಿಟ್ಟ ಉತ್ತರ ಕೊಡಬೇಕೆಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಪಾಕ್ ಎದುರು ಯುದ್ಧವನ್ನು ಸಾರಿದ್ದರು.
ಭಾರತದ ಭೂಸೇನೆಯೂ ಏಕಕಾಲದಲ್ಲಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ಥಾನದ ಮೇಲೆ ದಾಳಿ ಮಾಡಿ, ಪಾಕಿಸ್ಥಾನ ವನ್ನು ಅಕ್ಷರಶಃ ಹುಟ್ಟಡಗಿಸಿತು. ಪೂರ್ವ ಪಾಕಿಸ್ಥಾನದಲ್ಲಿ ಢಾಕಾ ವರೆಗೂ ಹೋದ ಭೂಸೇನೆ, ಅಲ್ಲಿನ ಜನರಲ್ ಅನ್ನು ಶರಣಾಗುವಂತೆ ಮಾಡಿತು. ಡಿ.16ರಂದು ಪಾಕಿಸ್ಥಾನದ ಈಸ್ಟರ್ನ್ ಕಮಾಂಡ್‌ನ ಕಮಾಂಡರ್ ಲೆ| ಜ| ಎಎಕೆ ನಿಯಾಜಿ, ಭಾರತದ ಈಸ್ಟರ್ನ್ ಕಮಾಂಡ್‌ನ ಕಮಾಂಡರ್ ಲೆ| ಜ| ಜಗ್ಜೀತ್ ಸಿಂಗ್ ಅರೋರಾ
ಅವರ ಮುಂದೆ ಶರಣಾದರು. ಪಾಕ್ ದಾಳಿಗೆ ಕಾರಣ ಏನು?
1970ರ ಡಿ.6ರಂದು ಪೂರ್ವ ಮತ್ತು ಪಶ್ಚಿಮ ಪಾಕಿಸ್ಥಾನದಲ್ಲಿ ಚುನಾವಣೆ ನಡೆದಿತ್ತು. 1970ರ ಡಿ.6ರಂದು ಪೂರ್ವ ಪಾಕಿಸ್ಥಾನದಲ್ಲಿನ ಶೇಕ್ ಮುಜಿºàರ್ ರೆಹಮಾನ್ ಅವರ ಅವಾಮಿ ಲೀಗ್ ಹೆಚ್ಚಿನ ಮತಗಳಿಂದ ಗೆಲುವನ್ನು ತನ್ನದಾಗಿಸಿಕೊಂಡಿತ್ತು. ಅತ್ತ ಪಶ್ಚಿಮ ಪಾಕಿಸ್ಥಾನದಲ್ಲಿ ಝುಲ್ಫಿಕರ್ ಅಲಿ ಭುಟ್ಟೋ ಅವರ ಪಾಕಿಸ್ಥಾನ ಪೀಪಲ್ಸ್ ಪಾರ್ಟಿ ಸೋಲನ್ನು ಅನುಭವಿಸಿತ್ತು. ಈ ಚುನಾವಣೆಯಲ್ಲಿ ಭಾರೀ ಬಹುಮತ ಪಡೆದಿದ್ದ ಶೇಕ್ ಮುಜಿºàರ್ ರೆಹಮಾನ್ ಅವರೇ ಪ್ರಧಾನಿಯಾಗಬೇಕಾಗಿತ್ತು. ಆದರೆ ಝುಲ್ಫೀ ಕರ್ ಭುಟ್ಟೋ ಅವರು ಸೇನೆಯ ಮನವೊಲಿಕೆ ಮಾಡಿ, ಮುಜಿºàರ್ ಅವರಿಗೆ ಪ್ರಧಾನಿ ಪಟ್ಟ ಸಿಗದಂತೆ ನೋಡಿಕೊಂಡರು. ಇದನ್ನು ವಿರೋಧಿಸಿ ಮುಜಿºàರ್ ಅವರು ಪ್ರತಿಭಟನೆ ಆರಂಭಿಸಿದ್ದರು. ಈ ಪ್ರತಿಭಟನೆಗೆ ಭಾರತ ಬೆಂಬಲ ನೀಡಿತು. ಅಲ್ಲದೆ ಗಡಿಯಲ್ಲಿ ಬಿಎಸ್‌ಎಫ್ ಅಲ್ಪ ಪ್ರಮಾಣದ ಸಹಾಯ ಮಾಡಿತ್ತು. ಆದರೆ ಪರಿಸ್ಥಿತಿ ಹದಗೆಟ್ಟ ಕಾರಣದಿಂದಾಗಿ 1971ರಲ್ಲಿ ಭಾರತ ಈಸ್ಟರ್ನ್ ಕಮಾಂಡ್, ಆಪರೇಷನ್ ಜಾಕ್‌ಪಾಟ್ ಆರಂಭಿಸಿತು. ಈ ಮೂಲಕ ಬಾಂಗ್ಲಾ ಸ್ವಾತಂತ್ರ್ಯಹೋರಾಟಕ್ಕೆ ಸಹಾಯ ಮಾಡಲಾಯಿತು. ಇದರಿಂದ ಕೆರಳಿದ್ದ ಪಾಕ್ ಪೂರ್ವ ಪಾಕಿಸ್ಥಾನದಲ್ಲಿ ಹಿಂದೂಗಳನ್ನೇ ನೇರವಾಗಿ ಗುರಿಯಾಗಿಸಿಕೊಂಡು ನರಮೇಧ ನಡೆಸುತ್ತಿತ್ತು. ಪೂರ್ವ ಪಾಕಿಸ್ಥಾನದಲ್ಲಿ ಅವಾಮಿ ಲೀಗ್‌ನ ಗೆರಿಲ್ಲಾಗಳ ಕೈ ಮೇಲಾಗುತ್ತಿದ್ದಂತೆ 1971ರ ಡಿ.3ರಂದು ಪಾಕ್ ಭಾರತದ ಮೇಲೆ ದಾಳಿ ಆರಂಭಿಸಿತ್ತು.
Related Articles
Advertisement