ನವದೆಹಲಿ: ಪ್ರೊಬಾಕ್ಸಿಂಗ್‌ನಲ್ಲಿ ಡಬ್ಲ್ಯೂಬಿಒ ಏಷ್ಯಾ ಫೆಸಿಪಿಕ್ ಸೂಪರ್ ಮಿಡಲ್ ವೇಟ್ ಹಣಾಹಣಿಯಲ್ಲಿ ವಿಜೇಂದರ್ ಸಿಂಗ್ ಶನಿವಾರ ಚೀನಾ ಎದುರಾಳಿ ಜುಲ್ಫಿಕರ್ ಮಾಯ್‌ಮಾಯ್ ಥಿಯಾಲಿ ಅವರನ್ನು ಎದುರಿಸಲಿದ್ದಾರೆ.
ಈ ಪಂದ್ಯವನ್ನು ವೀಕ್ಷಿಸಲು ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ಗಣ್ಯರು ಆಗಮಿಸುವ ನಿರೀಕ್ಷೆ ಇದೆ. ತವರಿನಲ್ಲಿ ನಡೆಯಲಿರುವ ಮತ್ತೂಂದು ಪಂದ್ಯದಲ್ಲಿ ಭಾರೀ ಅಭಿಮಾ ನಿಗಳ ಸಮ್ಮುಖದಲ್ಲಿ ವಿಜೇಂದರ್ ಕಣಕ್ಕೆ ಇಳಿಯಲಿದ್ದಾರೆ. 2ನೇ ಡಬ್ಲ್ಯೂಬಿಒ ಟ್ರೋಫಿ ಗೆಲುವಿನ
ನಿರೀಕ್ಷೆಯಲ್ಲಿದ್ದಾರೆ. ಸತತ ಗೆಲುವಿನ ಅಲೆಯಲ್ಲಿರುವ ವಿಜೇಂದರ್‌ಗೆ ಚೀನಾ ಎದುರಾಳಿ ಜುಲ್ಫಿàಕರ್ ಕಠಿಣ ಎದುರಾಳಿಯಾಗುವ ಸಾಧ್ಯತೆ ಇದೆ. ವಿಜೇಂದರ್ ಮ್ಯಾಂಚೆಸ್ಟರ್‌ನಲ್ಲಿ ತರಬೇತಿ ಪಡೆದು ಬಂದಿದ್ದಾರೆ.
ಜುಲ್ಫಿಕರ್ ಮಾಯ್‌ಮಾಯ್‌ಥಿಯಾಲಿ ಚೀನಾದ ನಂಬರ್ ಒನ್ ಬಾಕ್ಸರ್. ವಿಶ್ವ ಮಟ್ಟದಲ್ಲಿ 127ನೇ ರ್‍ಯಾಂಕಿಂಗ್ ಹೊಂದಿದ್ದಾರೆ. ಅನುಭವದಲ್ಲಿ 22 ವರ್ಷದ ಜುಲ್ಫಿಕರ್ ಮಾಯ್ ಮಾಯ್‌ಥಿಯಾಲಿ ವಿಜೇಂದರ್ ಸಿಂಗ್‌ಗಿಂತ ಕಡಿಮೆ ಇದೆ. ಒಟ್ಟಿನಲ್ಲಿ ಕ್ರೀಡಾ ಪಂಡಿತರ ಲೆಕ್ಕಾಚಾರದ ಪ್ರಕಾರ ವಿಜೇಂದರ್ ಗೆಲುವು ಕಷ್ಟವಾಗಲಾರದು ಎನ್ನಲಾಗಿದೆ. ಚೀನಾ-ಭಾರತ ನಡುವಿನ ಕದನ ಎಂದೇ ಬಣ್ಣಿಸಲಾಗಿದೆ.