ಮಂಗಳೂರು: ಅಕೆ¾ (ಎಸಿಎಂಇ) ಮೂವೀಸ್ ಇಂಟರ್‌ನ್ಯಾಶನಲ್ ಸಂಸ್ಥೆಯ ಮೂಲಕ ಮಂಗಳೂರು ಮೂಲದ ದುಬಾೖಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಅವರ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ; ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ ಬಹುನಿರೀಕ್ಷಿತ “ಮಾರ್ಚ್ 22′ ಕನ್ನಡ ಸಿನೆಮಾದ ಧ್ವನಿಸುರುಳಿ (ಆಡಿಯೋ) ಬಿಡುಗಡೆಯು ಜು. 20ರಂದು ಸಂಜೆ 6ಕ್ಕೆ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರಿನಲ್ಲಿ ನಡೆಯಲಿದೆ.
“ಮಾರ್ಚ್ 22′ ಸಿನೆಮಾದ ತಾರೆಯರ ಹಾಗೂ ಗಣ್ಯರ ವಿಶೇಷ ಉಪಸ್ಥಿತಿಯಲ್ಲಿ ಸಿನೆಮಾದಲ್ಲಿ ಪ್ರಮುಖ ಪಾತ್ರ ವಹಿಸಿರುವ ಅನಂತ್‌ನಾಗ್ ಆಡಿಯೋ ಬಿಡುಗಡೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಿನೆಮಾದ ಹಾಡುಗಳ ಟೀಸರ್‌ನ್ನು ನಟ ಆಶಿಷ್ ವಿದ್ಯಾರ್ಥಿ ಬಿಡುಗಡೆಗೊಳಿಸಲಿದ್ದಾರೆ ಎಂದು ಹರೀಶ್ ಶೇರಿಗಾರ್ ಅವರು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರ ನಿರ್ದೇಶಕ ಕೂಡ್ಲು ರಾಮಕೃಷ್ಣ, ನಟರಾದ ಅನಂತ್‌ನಾಗ್, ಆಶಿಷ್ ವಿದ್ಯಾರ್ಥಿ, ಜೈಜಗದೀಶ್, ಶರತ್ ಲೋಹಿತಾಶ್ವ ಹಾಗೂ ಕಲಾವಿದರು ಉಪಸ್ಥಿತರಿದ್ದರು.
ವಿಶ್ವದ ಬೇರೆ ಯಾವುದೇ ದೇಶದಲ್ಲಿ ಇರದಷ್ಟು ಧರ್ಮಗಳು, ಜಾತಿಗಳು ಭಾರತದಲ್ಲಿವೆ. ವೈವಿಧ್ಯ ಮಯ ಧಾರ್ಮಿಕ ನಂಬಿಕೆಗಳ ಹೊರತಾಗಿಯೂ ಇಲ್ಲಿ ಜನರು ಅನ್ಯೋನ್ಯತೆಯಿಂದಿದ್ದಾರೆ. ಭಾರತೀಯೇತರ ಪ್ರಜೆ ಊಹಿಸಲೂ ಆಗದ ರೀತಿಯ ಸೌಹಾರ್ದದ ಬದುಕನ್ನು ಇಲ್ಲಿ ಕಾಣಬಹುದು. ಆದಾಗ್ಯೂ ಕೆಲವೊಮ್ಮೆ ಕೆಲವು ಪ್ರಚೋದನೆ ಗಳಿಂದಾಗಿ ಧಕ್ಕೆ ಆಗಿದೆ. ದೇಶಕ್ಕೆ ಸ್ವಾತಂತ್ರÂ ಬಂದು 70 ವರ್ಷ ಕಳೆದಿದ್ದರೂ ಈ ಕಹಿ ನೆನಪು ಹಾಗೆಯೇ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು “ಮಾರ್ಚ್ 22′ ಸಿನೆಮಾ ತಂಡ ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಪ್ರಾಸ್ತವಿಕ ಪರಿಕಲ್ಪನೆಯೊಂದಿಗೆ ಅದ್ಭುತ ಕಥೆಯೊಂದನ್ನು ಜನ ಎಂದೆಂದಿಗೂ ನೆನಪಿಡುವಂತೆ ಮಾಡುವ ಪ್ರಯತ್ನಕ್ಕೆ ಮುಂದಾಗಿದೆ’ ಎಂದು ಹರೀಶ್ ವಿವರಿಸಿದರು.
ಜೀವಜಲದ ಮಹತ್ವ ಮತ್ತು ಜಾಗೃತಿಯ ಸಂದೇಶ ಸಾರುವ “ಮಾರ್ಚ್ 22′ ಸಿನೆಮಾದ ಬಗ್ಗೆ ಕನ್ನಡ ಸಿನೆಮಾಭಿಮಾನಿಗಳು ಬಹುನಿರೀಕ್ಷೆಯನ್ನಿಟ್ಟುಕೊಂಡಿದ್ದು, ಸಿನೆಮಾ ಬಿಡು ಗಡೆಗೂ ಮುನ್ನವೇ ಭಾರೀ ಸುದ್ದಿ ಮಾಡುತ್ತಿದೆ.
ತಾರಾಗಣದಲ್ಲಿ…
ಅನಂತ್‌ನಾಗ್, ಗೀತಾ, ಶರತ್ ಲೋಹಿತಾಶ್ವ, ಆಶೀಷ್ ವಿದ್ಯಾರ್ಥಿ, ಸಾಧು ಕೋಕಿಲಾ, ಜೈಜಗದೀಶ್, ರವಿ ಕಾಲೇ, ವಿನಯಾ ಪ್ರಸಾದ್, ಪದ್ಮಜಾ ರಾವ್, ರಮೇಶ್ ಭಟ್, ಶ್ರೀನಿವಾಸ ಮೂರ್ತಿ, ರವೀಂದ್ರನಾಥ್; ಆರ್ಯವರ್ಧನ್ ಮತ್ತು ಕಿರಣ್‌ರಾಜ್ ನಾಯಕರು, ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿಯರು. ಕಿಶೋರ್, ಸೃಜನ್ ರೈ, ಶಾಂತಾ ಆಚಾರ್ಯ, ಚಿದಾನಂದ ಪೂಜಾರಿ, ಸುವರ್ಣ ಸತೀಶ್, ಪ್ರಶೋಭಿತ ಮುಂತಾದವರು ನಟಿಸಿದ್ದಾರೆ. ದುಬಾೖಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಹೆಸರಾಂತ ಉದ್ಯಮಿ, ಕನ್ನಡಿಗ ಡಾ| ಬಿ.ಆರ್. ಶೆಟ್ಟಿ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ವಿಶೇಷ.