Advertisement

ಏಷ್ಯಾದ ಅತಿ ದೊಡ್ಡ ಸೌರವಿದ್ಯುತ್‌ ಘಟಕ ಇಂದು ಲೋಕಾರ್ಪಣೆ

06:05 AM Mar 01, 2018 | |

ತುಮಕೂರು: ಜಿಲ್ಲೆಯ ಪಾವಗಡದಲ್ಲಿ ನಿರ್ಮಾಣವಾಗಿರುವ 2 ಸಾವಿರ ಮೆಗಾವ್ಯಾಟ್‌ ಸಾಮರ್ಥ್ಯದ ಸೌರವಿದ್ಯುತ್‌ ಘಟಕ ಲೋಕಾರ್ಪಣೆ ಗುರುವಾರ ನಡೆಯಲಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಲಾರ್‌ ಪಾರ್ಕ್‌ನ ಮೊದಲ ಹಂತದ 700 ಮೆ.ವ್ಯಾ.ವಿದ್ಯುತ್‌ ಉತ್ಪಾದನೆಗೆ ಚಾಲನೆ ನೀಡಲಿದ್ದಾರೆ. ಕೇಂದ್ರ ವಿದ್ಯುತ್‌ ಮತ್ತು ಎಂಎನ್‌ಅರ್‌ಇ ಸಚಿವರಾದ ರಾಜ್‌ ಕುಮಾರ್‌ ಸಿಂಗ್‌, ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು.

2300 ರೈತರ ಸಹಕಾರದಿಂದ 13,000 ಎಕರೆ ಭೂಮಿಯಲ್ಲಿ  ಮೊದಲ ಹಂತದಲ್ಲಿ 700 ಮೆ.ವ್ಯಾ.ಉತ್ಪಾದನಾ ಘಟಕ ಅಳವಡಿಸಲಾಗಿದೆ. ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಯಮಿತ ಸಂಯುಕ್ತವಾಗಿ ಆರಂಭಿಸುತ್ತಿರುವ ಈ ಸೋಲಾರ್‌ ವಿದ್ಯುತ್‌ ಉತ್ಪಾದನಾ ಘಟಕದಿಂದ ಸುಮಾರು 2000 ಮೆ.ವ್ಯಾ.ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ. 16,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸೋಲಾರ್‌ ಪಾರ್ಕ್‌, ಏಷ್ಯಾದಲ್ಲೇ ದೊಡ್ಡದು ಎಂಬ ಖ್ಯಾತಿ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next