Advertisement

Solar eclipse; ಇಂದು ವರ್ಷದ ಮೊದಲ ಪೂರ್ಣ ಸೂರ್ಯಗ್ರಹಣ

12:50 AM Apr 08, 2024 | Team Udayavani |

ವಾಷಿಂಗ್ಟನ್‌: ಎ.8ರ ಸೋಮವಾರ ಈ ವರ್ಷದ ಮೊದಲ ಸಂಪೂರ್ಣ ಸೂರ್ಯ ಗ್ರಹಣ ಘಟಿಸ ಲಿದೆ. ಆದರೆ ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲ, ಉತ್ತರ ಅಮೆರಿಕದಲ್ಲಿ ಮಾತ್ರ ಗೋಚರಿಸಲಿದ್ದು, ಬರಿಗಣ್ಣಿನಿಂದ ನೋಡಬಾರದು ಎಂದು ನಾಸಾ ಸೂಚಿಸಿದೆ. ಭಾರತೀಯ ಕಾಲ ಮಾನದ ಪ್ರಕಾರ, ಸೋಮ ವಾರ ರಾತ್ರಿ 9 ಗಂಟೆ 12ನಿಮಿಷಕ್ಕೆ ಸೂರ್ಯ ಗ್ರಹಣ ಆರಂಭವಾಗಿ, ತಡರಾತ್ರಿ 2.22ಕ್ಕೆ ಗ್ರಹಣ ಬಿಡಲಿದೆ. ಭಾರತದಲ್ಲಿ ಸೋಮವಾರ ಅಮಾವಾಸ್ಯೆ ಇದ್ದು, ಮಂಗಳವಾರ ಹೊಸ ಸಂವತ್ಸರ ಆರಂಭವಾಗಲಿದೆ. ಅಂದು ಕ್ರೋಧಿ ನಾಮ ಸಂವತ್ಸರ ಯುಗಾದಿ ಹಬ್ಬವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next