ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 25ನೇ ಘಟಕೋತ್ಸವ ಶನಿವಾರ (ಜೂ.10) ನಡೆಯಲಿದೆ ಎಂದು ವಿವಿ ಕುಲಪತಿ ಡಾ.ಎಂ.ಕೆ.ರಮೇಶ್ ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನ ಯಶವಂತಪುರದ ಸಿ.ವಿ.ರಾಮನ್ ರಸ್ತೆಯ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ರಾಷ್ಟ್ರೀಯ ವಿಜ್ಞಾನ ಸೆಮಿನಾರ್ ಕಾಂಪ್ಲೆಕ್ಸ್‌ನಲ್ಲಿರುವ ಜೆ.ಎನ್.ಟಾಟಾ ಆಡಿಟೋರಿಯಂನಲ್ಲಿ ಬೆಳಗ್ಗೆ 11 ಗಂಟೆಗೆ 25ನೇ ಘಟಿಕೋತ್ಸವ ನಡೆಯಲಿದೆ ಎಂದು ತಿಳಿಸಿದರು.
ವಿವಿ ಕುಲಾಧಿಪತಿ ಹಾಗೂ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅರ್ಹ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಿ¨ªಾರೆ. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಘಟಿಕೋತ್ಸವ ಭಾಷಣ ಮಾಡುವರು.
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಉಪಸ್ಥಿತರಿರಲಿದ್ದಾರೆ. ಪದ್ಮ ವಿಭೂಷಣ ಕಸ್ತೂರಿರಂಗನ್, ಡಾ.ಸತೀಶ್ಚಂದ್ರ ಹಾಗೂ ಡಾ ಎಂ.ಕೆ.ಸುದರ್ಶನ್ ಅವರಿಗೆ 25ನೇ ಘಟಕೋತ್ಸವ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ, ಡಾಕ್ಟರ್ ಆಫ್ ಸೈನ್ಸ್ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದರು.
49,560 ಅಭ್ಯರ್ಥಿಗಳು ಪದವಿಗೆ ಅರ್ಹ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ 25ನೇ ಘಟಕೋತ್ಸವದಲ್ಲಿ ವಿವಿಧ ವಿಷಯಗಳಲ್ಲಿ 49,560 ಅಭ್ಯರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಅವರ ಪೈಕಿ 51 ಪಿ.ಎಚ್‌ಡಿ, 150 ಸೂಪರ್ ಸ್ಪೆಷಾಲಿಟಿ, 7,351 ಸ್ನಾತಕೋತ್ತರ ಪದವಿ, 22 ಸ್ನಾತಕೋತ್ತರ ಡಿಪ್ಲೊಮಾ ಪದವಿ, 277 ಫೆಲೋಷಿಪ್ ಕೋರ್ಸ್, 9 ಸರ್ಟಿಫಿಕೇಟ್ ಹಾಗೂ 44,700 ಸ್ನಾತಕ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ವಿಶ್ವವಿದ್ಯಾಲಯದ ಎಲ್ಲ ನಿಖಾಯಗಳ ಒಟ್ಟು ವಿದ್ಯಾರ್ಥಿಗಳ ಒಟ್ಟಾರೆ ಫಲಿತಾಂಶ ಪ್ರತಿಶತ ಶೇ.84.26 ಆಗಿರುತ್ತದೆ ಎಂದರು.
Related Articles
ಮೌಲ್ಯಮಾಪನ ಪದ್ಧತಿ ಬದಲಾವಣೆ
2022ರ ಸೆಪ್ಟೆಂಬರ್ ಬಳಿಕ ಮೌಲ್ಯಮಾಪನ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಎರಡು ಬಾರಿ ಮೌಲ್ಯಮಾಪನ ಮಾಡಿ ಅದರಲ್ಲಿ ಎರಡು ಕಡೆ ಬಂದ ಫಲಿತಾಂಶದಲ್ಲಿ ಸರಾಸರಿ ಪರಿಶೀಲನೆ ನಡೆಸಿ ಅಂತಿಮವಾಗಿ ಬಂದ ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಇದೀಗ ಎರಡು ಬಾರಿಯ ಮೌಲ್ಯಮಾಪನದಲ್ಲಿ ಬರುವ ಹೆಚ್ಚಿನ ಅಂಕವನ್ನು ಪರಿಗಣಿಸಲಾಗುತ್ತದೆ. ಇದು ಹೆಚ್ಚಿನ ಫಲಿತಾಂಶಕ್ಕೂ ಸಹಕಾರಿಯಾಗಿದೆ ಎಂದು ವಿವಿ ಮೌಲ್ಯಮಾಪನ ಕುಲಸಚಿವ ಡಾ.ಎನ್.ರಾಮಕೃಷ್ಣ ರೆಡ್ಡಿ ಮಾಹಿತಿ ನೀಡಿದರು.
108 ಚಿನ್ನದ ಪದಕ
ರಾಜ್ಯದಲ್ಲಿ ಒಟ್ಟು 97 ವಿದ್ಯಾರ್ಥಿಗಳು 108 ಚಿನ್ನದ ಪದಕ ಪಡೆಯಲು ಅರ್ಹತೆ ಹೊಂದಿ¨ªಾರೆ. ಈ ಪೈಕಿ ಫಾರ್ಮ-ಡಿ ಕೋರ್ಸ್‌ಲ್ಲಿ ಪಿಇಎಸ್ ಕಾಲೇಜು ವಿದ್ಯಾರ್ಥಿನಿ ಡಾ.ಕೆ.ದೀಪ್ತಿ ಮತ್ತು ಅಲೈಡ್ ಹೆಲ್ತ… ಸೈನ್ಸಸ್ ಕೋರ್ಸ್ ವಿದ್ಯಾರ್ಥಿನಿ ರಜನಿ ಪಂತ ತಲಾ 3 ಚಿನ್ನದ ಪದಕ, ಎಂಬಿಬಿಎಸ್‌ನಲ್ಲಿ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ರಿಷಿಕಾ ಎಸ್.ಪಟೇಲ್, ಬಿಡಿಎಸ್ ಕೋರ್ಸ್‌ನಲ್ಲಿ ಬೆಂಗಳೂರು ದಿ ಆಕ್ಸಫರ್ಡ್ ಡೆಂಟಲ್ ಕಾಲೇಜಿನ ಡಾ.ಅಮೋಘ ಸಾರಥಿ, ಬಿಎಎಂಎಸ್ ಕೋರ್ಸ್‌ನಲ್ಲಿ ಡಾ.ಟಿ.ಸಾಯಿ ಚಿನ್ಮಯಿ ತಲಾ 2 ಚಿನ್ನ ಹಾಗೂ 1 ನಗದು ಬಹುಮಾನ ಪಡೆಯಲು ಅರ್ಹರಾಗಿದ್ದಾರೆ. ಪದಕವು 22 ಕ್ಯಾರೆಟ್ ಬಂಗಾರವುಳ್ಳ 5 ಗ್ರಾಂ ತೂಕ ಹೊಂದಿರಲಿದೆ.