Advertisement

ಇಂದು ಗೀತಾ ಜಯಂತಿ- ಬಾಳಿಗೆ ಭರವಸೆ ತುಂಬುವ ಭಗವದ್ಗೀತೆ

01:30 AM Dec 23, 2023 | Team Udayavani |

ನಮ್ಮ ಬದುಕಿಗೆ ಬೇಕಾದ ವಿಷಯಗಳೆಲ್ಲವೂ ಶ್ರೀ ಮದ್ಭಗವದ್ಗೀತೆಯಲ್ಲಿದೆ. ಎಲ್ಲ ವೇದ, ಪುರಾಣ, ಉಪನಿಷತ್ತುಗಳ ಸಾರ ಸಂಗ್ರಹವೇ ಗೀತೆಯಾಗಿದೆ. ಸಾವಿರಾರು ವರ್ಷಗಳ ಹಿಂದೆ ಗೀತೆಯು ಬೋಧಿಸಲ್ಪ ಟ್ಟಿದ್ದರೂ ಇಲ್ಲಿನ ವಿಷಯಗಳು ಎಲ್ಲ ಕಾಲಕ್ಕೂ ಸಂಬಂಧಿಸಿದ್ಧಾಗಿವೆ. ಇಂದಿನ ವಿಜ್ಞಾನ ಯುಗಕ್ಕೂ ಗೀತೆಯು ಪ್ರಸ್ತುತವೇ. ಭಗವಾನ್‌ ಶ್ರೀ ಕೃಷ್ಣನು ಗೀತೆಯನ್ನು ಬೋಧಿಸಿದ್ದು ಕೇವಲ ಅರ್ಜುನನಿಗಷ್ಟೇ ಅಲ್ಲ, ಸಮಸ್ತ ಮಾನವ ಕೋಟಿಗೆ ಸಲ್ಲುತ್ತದೆ. ಗೀತೆಯು ಬದುಕಿಗೆ ಭರವಸೆಯನ್ನು ನೀಡಲು, ದಿನನಿತ್ಯದ ಜೀವ ನವನ್ನು ಉತ್ತಮ ಗೊಳಿಸಲು ದಾರಿದೀಪವಾಗಿದೆ.
ಗೀತೆಯು ಮಹರ್ಷಿ ವೇದವ್ಯಾಸರಿಂದ ರಚಿತ ವಾದ ಮಹಾಭಾರತದ ಭೀಷ್ಮ ಪರ್ವದಲ್ಲಿ ಕಂಡು ಬರುತ್ತದೆ. ಪಾಂಡವರು ಹಾಗೂ ಕೌರವರ ನಡುವೆ ನಡೆದ ಯುದ್ಧದ ಸಂದರ್ಭದಲ್ಲಿ ರಣಾಂಗಣದಲ್ಲಿ ಗೀತೆಯು ಬೋಧಿಸಲ್ಪಟ್ಟಿದೆ. ಧರ್ಮವನ್ನು ಪ್ರತಿನಿಧಿ ಸಿದ್ದ ಪಾಂಡ ವರು ಹಾಗೂ ಅಧರ್ಮ ಮಾರ್ಗದಲ್ಲಿದ್ದ ಕೌರವರ ನಡುವಿನ ಸಮರದ ನಡುವೆ ಗೀತೆಯು ಉಪದೇಶಿಸಲ್ಪ ಟ್ಟಿದ್ದರೂ ಗೀತೆಯಲ್ಲಿನ ಸಂದೇಶಗಳು ಮಾತ್ರ ಎಲ್ಲರಿಗೂ ಇಂದಿಗೂ ಅನ್ವಯಿಸುತ್ತಿರುವುದು ವಿಶೇಷವಾಗಿದೆ.

Advertisement

ಅಸೂಯೆ ಇಲ್ಲದವರು, ಸರ್ವಜೀವಿಗಳ ಸ್ನೇಹಿತರಾ ಗಿರುವವರು, ಅಹಂಕಾರ ಇಲ್ಲದವರು, ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸುವವರು ಕ್ಷಮಾಶೀ ಲರು, ಸದಾ ತೃಪ್ತರು, ಸಂತುಷ್ಟರು, ದೃಢಮನಸ್ಸಿನಿಂದ ಭಕ್ತಿ ಸೇವೆ ಮಾಡುವವರೂ ತನ್ನ ಬುದ್ಧಿ ಮನಸ್ಸುಗಳನ್ನು ನನ್ನಲ್ಲಿ ನಿಲ್ಲಿಸಿರುವ ಭಕ್ತರು ನನಗೆ ಪ್ರಿಯರು ಎಂದಿದ್ಧಾನೆ ಗೀತಾಚಾರ್ಯ.

ತಮ್ಮ ಜೀವನದಲ್ಲಿ ಕೆಲಸ ಕಾರ್ಯಗಳಿಗೆ ಪ್ರಾಮುಖ್ಯ ನೀಡುವವರಿಗೆ ಗೀತೆಯ ಕರ್ಮ ಯೋ ಗವು ಸೂಕ್ತವೆನಿಸಬಹುದು. ಭಾವ ಪ್ರಧಾನರಾದವರಿಗೆ ಭಕ್ತಿಯೋಗ, ಹಾಗೆಯೇ ವೈಚಾರಿಕ ಮನೋಭಾವದ ವರಿಗೆ ಜ್ಞಾನಯೋಗವು ಪ್ರಿಯವಾಗಬಹುದು. ಗೀತೆ ಯ ಪ್ರಸಿದ್ಧ ಉಕ್ತಿ “ಕರ್ಮಣ್ಯೇ ವಾಧಿಕಾರಸ್ತೇ ಮಾಫ‌ಲೇಷು ಕದಾಚನ’. ಮಾನವನು ಹುಟ್ಟಿನಿಂದ ಸಾಯುವ ತನಕವೂ ಕರ್ಮವನ್ನು ಮಾಡುತ್ತಲೇ ಇರುತ್ತಾನೆ. ಅಂದರೆ ಆತ ಕರ್ಮಾಧೀನ. ಆತ ಕರ್ಮವನ್ನು ತ್ಯಜಿಸು ವಂತಿಲ್ಲ, ಕರ್ಮ ಫ‌ಲಾಪೇಕ್ಷೆಯನ್ನು ತ್ಯಜಿಸ ಬೇಕು. ಪ್ರತಿ ಯೊಬ್ಬರು ತಮ್ಮ ತಮ್ಮ ಕರ್ಮಫ‌ಲಗಳಿಂದಾಗಿ ಸುಖ- ದುಃಖಗಳನ್ನು ಅನುಭವಿಸುತ್ತಾರೆ. ಈ ರೀತಿಯ ಮನೋಭಾವವು ನಮ್ಮ ದೈನಂದಿನ ಬದುಕಿನಲ್ಲಿ ಆವಶ್ಯಕ. ಫ‌ಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದಲ್ಲಿ ಕೆಲಸ ದಲ್ಲಿ ಏಕಾಗ್ರತೆ ಇರುತ್ತದೆ, ಒತ್ತಡವಿರುವುದಿಲ್ಲ.

ಭಕ್ತಿ ಎಂದರೆ ದೇವರ ಮೇಲಿನ ಪ್ರೀತಿ. ದೇವರನ್ನು ಪ್ರೀತಿಸುತ್ತ ಎಲ್ಲ ಕೆಲಸ ಕಾರ್ಯಗಳನ್ನು ದೇವರ ಸೇವೆ ಯೆಂದು ತಿಳಿದು ಅದರಂತೆ ವ್ಯವಹರಿಸುತ್ತ ಬದುಕು ಸಾಗಿಸುವುದೇ ಭಕ್ತಿಯೋಗ. ವೈಚಾರಿಕತೆಯಿಂದ ದೇವರ ಸ್ವರೂಪವನ್ನು ತಿಳಿದುಕೊಂಡು ಈಶ್ವರಾರ್ಪಣ ಭಾವದಿಂದ ಕರ್ತವ್ಯಗಳನ್ನು ನಿರ್ವಹಿಸುತ್ತ ಸಾಕ್ಷಾತ್ಕಾ ರವನ್ನು ಪಡೆಯುವುದೇ ಜ್ಞಾನ ಮಾರ್ಗ. ಮಾನವನಿಗೆ ಹುಟ್ಟಿನಿಂದ ಕೊನೇ ದಿನದ ತನಕವೂ ತನ್ನ ಜೀವನದಲ್ಲಿ ತಿಳಿದುಕೊಳ್ಳಬೇಕಿರುವುದು ಬಹಳಷ್ಟಿರುತ್ತದೆ. ಜ್ಞಾನವು ಬದುಕಿನ ಅಮೂಲ್ಯ ಸಂಪತ್ತು. ಯಾರೂ ಕದಿಯ ಲಾಗದ, ಹಂಚಿದಷ್ಟೂ ವೃದ್ಧಿಸುವ ಜ್ಞಾನವನ್ನು ಹೊಂದಿದವರಿಗೆ ಎಲ್ಲೆಡೆ ಸದಾ ಗೌರವ, ಮಾನ, ಸಮ್ಮಾನ ದೊರೆಯುವುದು. “ಉದ್ಧರೇದಾತ್ಮನಾತ್ಮಾನಂ’ ಎಂಬಂ ತೆ ಪ್ರತಿಯೊಬ್ಬರೂ ತಮ್ಮ ಶ್ರೇಯಸ್ಸನ್ನು ತಾವೇ ಸಾಧಿಸಬೇಕು ಎನ್ನುತ್ತದೆ ಗೀತೆ.

ವಿದ್ಯಾರ್ಥಿಗಳಲ್ಲಿ, ಯುವಕರಲ್ಲಿ ಧೈರ್ಯ, ಆತ್ಮ ವಿಶ್ವಾಸವನ್ನು ಬೆಳೆಸುವಲ್ಲಿ ಗೀತೆಯು ಸಹಕಾರಿ ಯಾಗಿದೆ. ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡದೆ ನಿರಾಶರಾಗುವವರಿಗೆ ಗೀತೆಯ ಸಂದೇಶವು ಮನೋ ಸ್ಥೆರ್ಯ ನೀಡಬಲ್ಲದು. ಉತ್ಸಾಹ ತುಂಬ ಬಲ್ಲದು.

Advertisement

ಬದುಕು ಶಾಶ್ವತವಲ್ಲ. ಹುಟ್ಟಿದವನು ಸಾಯಲೇ ಬೇಕು, ಇರುವಷ್ಟು ದಿನ ಚೆನ್ನಾಗಿ ಬಾಳಬೇಕು. ಸುಖಃ ದುಃಖ, ಲಾಭ-ನಷ್ಟ, ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಬದುಕಿನಲ್ಲಿ ಎಂತಹದೇ ಸಂಪತ್ತು, ಸೌಭಾಗ್ಯ ಬಂದರೂ ಅವು ಸ್ವಲ್ಪ ಕಾಲ ನಮಗೆ ಸಂತಸ ನೀಡಬಹುದು. ಬಳಿಕ ಅವು ನಾಶವಾಗಬಹುದು. ಸುಖ ನೀಡುವ ವಸ್ತುಗಳೇ ದುಃಖವನ್ನು ನೀಡು ತ್ತವೆ. ಇಂತಹ ಸಂದರ್ಭದಲ್ಲಿ ಗೀತೆಯು ಮಾನ ವನಿಗೆ ಧೈರ್ಯವನ್ನು ನೀಡುತ್ತದೆ. ಯಾರು ಅನನ್ಯ ಭಕ್ತಿ ಯಿಂದ ನನ್ನನ್ನು ಪೂಜಿಸುವರೋ ಅವರೆಲ್ಲರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ ಎಂಬುದಾಗಿ ಗೀತಾಚಾರ್ಯ ಹೇಳಿದ್ಧಾನೆ. ಮಾನವ ಕೋಟಿಗೆ ಗೀತೆಯು ನೀಡಿದ ಅತ್ಯಂತ ಭರವಸೆಯ ಮಾತಿದು.

ಯಜ್ಞನಾರಾಯಣ ಉಳ್ಳೂರ, ಕೋಟೇಶ್ವರ

 

Advertisement

Udayavani is now on Telegram. Click here to join our channel and stay updated with the latest news.

Next