Advertisement

ಕೆರಿಬಿಯನ್ನರ ವಿರುದ್ಧ ಏಕದಿನ ಕದನ

09:42 AM Aug 09, 2019 | Team Udayavani |

ಪ್ರೊವಿಡೆನ್ಸ್‌ (ಗಯಾನ): ಟಿ20 ಕ್ರಿಕೆಟ್‌ನಲ್ಲಿ ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡಿದ ಹುರುಪಿನಲ್ಲಿರುವ ಟೀಮ್‌ ಇಂಡಿಯಾ ಒಂದೇ ದಿನದ ವಿರಾಮ ಮುಗಿಸಿ ಏಕದಿನ ಸರಣಿಗೆ ಅಣಿಯಾಗಿದೆ.

Advertisement

3 ಪಂದ್ಯಗಳ ಮುಖಾಮುಖೀ ಗುರುವಾರದಿಂದ ಆರಂಭವಾಗಲಿದ್ದು, ಇಲ್ಲಿಯೂ ಕೊಹ್ಲಿ ಪಡೆ ಮೇಲುಗೈ ಸಾಧಿಸುವ ಯೋಜನೆಯಲ್ಲಿದೆ.

ಇನ್ನೊಂದೆಡೆ ಆತಿಥೇಯ ವೆಸ್ಟ್‌ ಇಂಡೀಸ್‌ ಪಾಲಿಗೆ ಇದು ಭಾರೀ ಸವಾಲಿನ ಸರಣಿ. ಮೊದಲನೆಯದಾಗಿ ಟಿ20 ಸೋಲಿಗೆ ಸೇಡು ತೀರಿಸಿಕೊಳ್ಳಬೇಕಿದೆ. ಹಾಗೆಯೇ ವಿಶ್ವಶ್ರೇಷ್ಠ ಕ್ರಿಕೆಟಿಗ, ಯುನಿವರ್ಸ್‌ ಬಾಸ್‌ ಕ್ರಿಸ್‌ ಗೇಲ್‌ ಅವರಿಗೆ ವಿದಾಯ ಕೊಡುಗೆಯನ್ನೂ ನೀಡಬೇಕಿದೆ. ಭಾರತದೆದುರಿನ ತವರಿನ ಸರಣಿ ಬಳಿಕ ತಾನು ಕ್ರಿಕೆಟಿಗೆ ನಿವೃತ್ತಿ ಹೇಳಲಿದ್ದೇನೆ ಎಂದು ಗೇಲ್‌ ಘೋಷಿಸಿದ್ದರು.

ವಿಶ್ವಕಪ್‌ ಬಳಿಕ ಮೊದಲ ಪಂದ್ಯ
ಇದು ವಿಶ್ವಕಪ್‌ ಬಳಿಕ ಎರಡೂ ತಂಡಗಳು ಆಡುತ್ತಿರುವ ಮೊದಲ ಏಕದಿನ ಪಂದ್ಯ. ವಿಶ್ವಕಪ್‌ನ ನೆಚ್ಚಿನ ತಂಡವಾಗಿದ್ದ ಭಾರತ ಸೆಮಿಫೈನಲ್‌ನಲ್ಲಿ ಎಡವಿದರೆ, ವೆಸ್ಟ್‌ ಇಂಡೀಸ್‌ ನಾಕೌಟ್‌ ಪ್ರವೇಶಿಸುವ ಮೊದಲೇ ಹೊರಬಿತ್ತು. ಈ ಬಲಾಬಲವನ್ನು ಅವಲೋಕಿಸುವಾಗ ಏಕದಿನ ಸರಣಿಯಲ್ಲೂ ಕೊಹ್ಲಿ ಬಳಗ ಫೇವರಿಟ್‌ ಆಗಿ ಕಾಣುತ್ತದೆ. ರೋಹಿತ್‌, ರಾಹುಲ್‌, ಕೊಹ್ಲಿ, ಜಡೇಜ, ಶಮಿ ಅವರೆಲ್ಲ ವಿಶ್ವಕಪ್‌ನಲ್ಲಿ ಮಿಂಚು ಹರಿಸಿದ್ದರು. ಆದರೆ ಅಪಾಯಕಾರಿ ಬುಮ್ರಾಗೆ ವಿಶ್ರಾಂತಿಯಲ್ಲಿದ್ದಾರೆ.


ಕೆಲವು ಹೊಸಮುಖಗಳ ಪರಾಕ್ರಮದಿಂದ ಭಾರತ ಟಿ20 ಸರಣಿಯನ್ನು ಕ್ಲೀನ್‌ ಸ್ಪೀಪ್‌ ಆಗಿ ವಶಪಡಿಸಿಕೊಂಡಿತ್ತು. ನವದೀಪ್‌ ಸೈನಿ, ಕೃಣಾಲ್‌ ಪಾಂಡ್ಯ, ದೀಪಕ್‌ ಚಹರ್‌ ಇಲ್ಲಿನ ಹೀರೋಗಳಾಗಿದ್ದರು. ಆದರೆ ಇವರಲ್ಲಿ ಏಕದಿನದಲ್ಲಿ ಕಾಣಿಸಿಕೊಳ್ಳುವವರು ಸೈನಿ ಮಾತ್ರ. 50 ಓವರ್‌ಗಳ ಪಂದ್ಯಕ್ಕೂ ತಾನು ಸೈ ಎನಿಸಿಕೊಳ್ಳುವುದು ಸೈನಿ ಗುರಿ.
ಉಳಿದಂತೆ, ಬಹುತೇಕ ವಿಶ್ವಕಪ್‌ ತಂಡವೇ ಇಲ್ಲಿ ಕಣಕ್ಕಿಳಿಯುತ್ತಿದೆ. ಅಲ್ಲಿ ಅವಕಾಶ ಪಡೆಯದ ಪಾಂಡೆ, ಅಯ್ಯರ್‌, ಖಲೀಲ್‌ ಅಹ್ಮದ್‌ ಇಲ್ಲಿ ಭಾರೀ ನಿರೀಕ್ಷೆಯಲ್ಲಿದ್ದಾರೆ. ಧವನ್‌ ಮರಳಿದ್ದರಿಂದ ರಾಹುಲ್‌ ಮತ್ತೆ 4ನೇ ಕ್ರಮಾಂಕದಲ್ಲಿ ಆಡುವುದು ಅನಿವಾರ್ಯ.

ನೈಜ ಸಾಮರ್ಥ್ಯ ತೋರೀತೇ ವಿಂಡೀಸ್‌?
ವೆಸ್ಟ್‌ ಇಂಡೀಸ್‌ ತಂಡದಲ್ಲಿ ಗಮನಾರ್ಹ ಬದಲಾವಣೆ ಸಂಭವಿಸಿದೆ. ಎಡಗೈ ಆರಂಭಕಾರ ಜಾನ್‌ ಕ್ಯಾಂಬೆಲ್‌, ಆಲ್‌ರೌಂಡರ್‌ಗಳಾದ ರೋಸ್ಟನ್‌ ಚೇಸ್‌, ಕಿಮೊ ಪೌಲ್‌ ಅವರನ್ನೆಲ್ಲ ಮರಳಿ ಕರೆಸಿಕೊಳ್ಳಲಾಗಿದೆ. ವಿಂಡೀಸ್‌ ಕ್ರಿಕೆಟಿಗರು ನೈಜ ಸಾಮರ್ಥ್ಯ ತೋರಿದರೆ ಈ ಸರಣಿ ರೋಚಕವಾಗಿ ಸಾಗಲಿದೆ.

Advertisement

ತಂಡಗಳು
ಭಾರತ:
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ, ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ರಿಷಭ್‌ ಪಂತ್‌, ರವೀಂದ್ರ ಜಡೇಜ, ಕುಲದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ಕೇದಾರ್‌ ಜಾಧವ್‌, ಮೊಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌, ಖಲೀಲ್‌ ಅಹ್ಮದ್‌, ನವದೀಪ್‌ ಸೈನಿ.
ವೆಸ್ಟ್‌ ಇಂಡೀಸ್‌:
ಜಾಸನ್‌ ಹೋಲ್ಡರ್‌ (ನಾಯಕ), ಕ್ರಿಸ್‌ ಗೇಲ್‌, ಜಾನ್‌ ಕ್ಯಾಂಬೆಲ್‌, ಎವಿನ್‌ ಲೆವಿಸ್‌, ಶೈ ಹೋಪ್‌, ಶಿಮ್ರನ್‌ ಹೈಟ್‌ಮೈರ್‌, ನಿಕೋಲಸ್‌ ಪೂರನ್‌, ರೋಸ್ಟನ್‌ ಚೇಸ್‌, ಫ್ಯಾಬಿಯನ್‌ ಅಲೆನ್‌, ಕಾರ್ಲೋಸ್‌ ಬ್ರಾತ್‌ವೇಟ್‌, ಕೀಮೊ ಪೌಲ್‌, ಶೆಲ್ಡನ್‌ ಕಾಟ್ರೆಲ್‌, ಒಶೇನ್‌ ಥಾಮಸ್‌, ಕೆಮರ್‌ ರೋಚ್‌.

Advertisement

Udayavani is now on Telegram. Click here to join our channel and stay updated with the latest news.

Next