Advertisement
ಎ. 8ರಂದು ಶ್ರೀ ಚಕ್ರಪಾಣಿ ಕ್ಷೇತ್ರಕ್ಕೆ ಕೊಪ್ಪರಿಗೆ ಒಪ್ಪಿಸಿ ಧ್ವಜಸ್ತಂಭ ಏರಿಸಲಾಯಿತು. ರಾತ್ರಿ 8ರಿಂದ ಚಕ್ರಪಾಣಿ ದೇವಸ್ಥಾನಕ್ಕೆ ವೈದ್ಯನಾಥ ದೈವ ಭೇಟಿ, ಭಂಡಾರ ಗುಡಿಯಿಂದ ದೈವಸ್ಥಾನಕ್ಕೆ ಭಂಡಾರ ಆಗಮನವಾಗಿ ಧ್ವಜಾರೋಹಣವಾಯಿತು. ಎ. 9ರಂದು ಅರಸು ದೈವಗಳ ಕಂಚಿಲು ಬಲಿ ಸೇವೆ ಜರಗಿತು. ಎ. 10ರಂದು ವೈದ್ಯನಾಥ ದೈವದ ಅರ್ಧಬಂಡಿ ನೇಮ ನಡೆಯಿತು.
ಎ. 11ರಿಂದ ಅರಸು ದೈವದ ಇಡೀ ಬಂಡಿ ನೇಮ, ಎ.12ರಿಂದ ಧೂಮಾವತಿ ಬಂಟ ದೈವಗಳ ನೇಮ, ಎ. 13ರಿಂದ ವೈದ್ಯನಾಥ ದೈವದ ವಲಸರಿ ನೇಮ, ಪರಿವಾರ ದೈವಗಳ ನೇಮ ನಡೆಯಲಿದೆ. ಬಳಿಕ ಧ್ವಜಾವರೋಹಣವಾಗಿ ಭಂಡಾರ ನಿರ್ಗಮನವಾಗಲಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.