Advertisement

ಇಂದು ಡಿಕೆಶಿ ಪುತ್ರಿ ಐಶ್ವರ್ಯಾ ವಿಚಾರಣೆ

11:08 PM Sep 11, 2019 | Lakshmi GovindaRaju |

ಬೆಂಗಳೂರು: ಬೇರೆ, ಬೇರೆ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿರುವ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೋಟಿಸ್‌ ನೀಡಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಪುತ್ರಿ ಐಶ್ವರ್ಯಾ ಗುರುವಾರ ಇ.ಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ. ಡಿಕೆಶಿ ಅವರು ತಮ್ಮ ಪುತ್ರಿ ಹೆಸರಿನಲ್ಲಿ ಬೇರೆ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದ್ದು, ಅವರ ಅಜ್ಜಿಯಿಂದ ಸಾಲ ಪಡೆದಿರುವ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡುವಂತೆ ನೋಟಿಸ್‌ ನೀಡಿರುವುದ ರಿಂದ ಗುರುವಾರ ಹಾಜರಾಗಲಿದ್ದಾರೆ.

Advertisement

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್‌, ಕಾನೂನಿಗೆ ತಲೆ ಬಾಗಿ ವಿಚಾರಣೆ ಎದುರಿಸುವು ದಾಗಿ ಐಶ್ವರ್ಯಾ ಹೇಳಿದ್ದಾಳೆ. ಅವಳು ತುಂಬ ವಿಶ್ವಾಸದಲ್ಲಿ ದ್ದಾಳೆ. ವಿಚಾರಣೆ ಎದುರಿಸುವ ಧೈರ್ಯ ಅವಳಿಗಿದೆ. ತಂದೆ, ಮಗಳಿಗೆ, ಮಗನಿಗೆ, ಗಂಡ, ಹೆಂಡತಿಗೆ ಸಹಾಯ ಮಾಡುವುದು ಭಾರತೀಯ ಸಂಸ್ಕೃತಿ. ಮಗಳಿಗೆ ಯಾಕೆ ಸಹಾಯ ಮಾಡಿದ್ದೀರಿ ಎಂದು ಕೇಳಿದರೆ ಏನು ಹೇಳುವುದು?

ತಂದೆಯಾಗಿ ಶಿವಕುಮಾರ್‌ ಮಗಳ ವ್ಯವಹಾರಕ್ಕೆ ಸಹಾಯ ಮಾಡಿದ್ದಾರೆ ಎಂದು ಹೇಳಿದರು. ಟಿ.ವಿ.ರಿಪೋರ್ಟರ್‌ ಈಗ ಮಾಲೀಕರಾಗಿದ್ದಾರೆ. ಏನೂ ಇಲ್ಲದ ಅಮಿತ್‌ ಶಾ ಮಗ 1 ಸಾವಿರ ಕೋಟಿ ರೂ.ಒಡೆಯನಾಗುತ್ತಾನೆ. ಅದಾನಿ ಸೇರಿದಂತೆ ಕಂಪನಿಗಳು 5 ಸಾವಿರ ಕೋಟಿಯಿಂದ ಲಕ್ಷ ಕೋಟಿ ಆಗುತ್ತವೆ. ಆದರೆ, ಇವುಗಳ ಬಗ್ಗೆ ಯಾರೂ ಪ್ರಶ್ನೆ ಮಾಡುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರ ಎಲ್ಲ ಆಸ್ತಿಯೂ ತನಿಖೆಯಾಗಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next