ಬೆಂಗಳೂರು: ವಿಶ್ವ ತಂಬಾಕು ಮುಕ್ತ ದಿನ ಅಂಗವಾಗಿರಾಷ್ಟ್ರೀಯ ನರರೋಗ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್ ) “ಕಮಿಟ್‌ಟು ಕ್ವಿಟ್’ (ವರ್ಜಿಸಲು ಬದ್ಧರಾಗಿ) ಅಭಿಯಾನವನ್ನುಹಮ್ಮಿಕೊಂಡಿದೆ.ತಂಬಾಕು ಉತ್ಪನ್ನಗಳಾದ ಧೂಮಪಾನ, ಗುಟ್ಕಾಬಳಸುವವರ ಶ್ವಾಸಕೋಶಗಳು ಹೆಚ್ಚು ಹಾನಿಯಾಗಿರುತ್ತವೆ.
ಇದರಿಂದ ಕೊರೊನಾ ಸಂದರ್ಭದಲ್ಲಿ ಅಪಾಯಹೆಚ್ಚಿರುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.ಜತೆಗೆ ಧೂಮಪಾನ ಮಾಡುವ ಸ್ಥಳದಲ್ಲಿ ಸೋಂಕುಹರಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಈಗಾಗಲೇ ಈಅಂಶಗಳನ್ನು ಅರಿತ ಹಲವರು ಕೊರೊನಾ ಬಂದ ನಂತರಧೂಮಪಾನದಿಂದ ದೂರಾಗಿದ್ದಾರೆ.
ಇನ್ನು ಸಾಕಷ್ಟು ಮಂದಿಧೂಮಪಾನವನ್ನು ಬಿಡಲು ಮುಂದಾಗುತ್ತಿದೆ. ಅವರ ಉತ್ಸಾಹವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿಮ್ಹಾನ್ಸ್ ಜಾಗೃತಿಅಭಿಯಾನವನ್ನು ಹಮ್ಮಿಕೊಂಡಿದೆ.
ನೀವು ತಂಬಾಕು ಬಿಟ್ಟ ಕತೆ ಶೇರ್ ಮಾಡಿ: ನಿಮ್ಹಾನ್ಸ್‌ನಮಾನಸಿಕ ಆರೋಗ್ಯ ವಿಭಾಗ, ಮನೋವೈದ್ಯಕೀಯಸಾಮಾಜಿಕ ಕಾರ್ಯ ವಿಭಾಗ ಸಂಯುಕ್ತಾಶ್ರಯಲ್ಲಿ ಮೇ31 ರಿಂದ ಜೂನ್ 1ರವರೆಗೂ ಅಭಿಯಾನ ನಡೆಯುತ್ತಿದೆ.”ಐ ಆ್ಯಮ್ ದಿ ಚಾಂಪಿಯನ್ ಆಫ್ ಮೈ ಸ್ಟೋರಿ’ ಎಂಬಥೀಮ್ ಹೊಂದಿದೆ.
ತಂಬಾಕು ಸೇವನೆ ಬಿಟ್ಟಿರುವವರುಅವರ ಕತೆಯನ್ನು ವಿಡಿಯೋ, ಆಡಿಯೋ ಅಥವಾಬರಹದ ಮೂಲಕ ತಲುಪಿಸಿದರೆ ಅದನ್ನು ನಿಮ್ಹಾನ್ಸ್‌ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗುತ್ತದೆ. ಈಮೂಲಕ ಜನರಲ್ಲಿ ಜಾಗೃತಿ ಹೆಚ್ಚಾಗಿ, ತಂಬಾಕು ಬಿಡಲುಮುಂದಾಗುವವರಿಗೆ ಪ್ರೇರೇಪಣೆ ಸಿಗಲಿದೆ ಎಂದುಮಾನಸಿಕ ಆರೋಗ್ಯ ವಿಭಾಗದ ಪ್ರಾಧ್ಯಾಪಕಿ ಡಾ.ಲತಾತಿಳಿಸಿದ್ದಾರೆ.
ನಿಮ್ಮ ಕತೆಯನ್ನು ಕಳುಹಿಸಬೇಕಾದ ವಿಳಾಸ: tobaccoquit0@gmail.comಸಹಾಯವಾಣಿ: ತಂಬಾಕು ಬಿಡಿಲು ಸಿದ್ಧರಿರುವವರಿಗೆಮಾನಸಿಕ ಸ್ಥೈರ್ಯ ತುಂಬುನ ನಿಟ್ಟಿನಲ್ಲಿ ರಾಷ್ಟ್ರಮಟ್ಟದಆಪ್ತ ಸಮಾಲೋಚನಾ ಸಹಾಯವಾಣಿ ಇದ್ದು, ಕನ್ನಡ,ಇಂಗ್ಲೀಷ್ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ.ಸಹಾಯವಾಣಿ ಸಂಖ್ಯೆ: 1800 11 2356.