Advertisement

2019ರ ಮಹಾ ಚುನಾವಣೆ: 250 ಸ್ಥಾನಗಳಲ್ಲಿ ಮಾತ್ರ ಕಾಂಗ್ರೆಸ್‌ ಸ್ಪರ್ಧೆ?

11:12 AM Jun 16, 2018 | udayavani editorial |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಸರಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬರುವುದನ್ನು ತಡೆಯಲು ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಪಕ್ಷ 2019ರ ಲೋಕಸಭಾ ಚುನಾವಣೆಯಲ್ಲಿ 250 ಸ್ಥಾನಗಳಿಗೆ ಮಾತ್ರವೇ ಸ್ಪರ್ಧಿಸಲಿದೆ. ಹಾಗಾದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಪಕ್ಷ ಅತೀ ಕಡಿಮೆ ಸ್ಥಾನಗಳಿಗೆ ಸ್ಪರ್ಧಿಸಿದಂತಾಗುತ್ತದೆ.

Advertisement

ಕಾಂಗ್ರೆಸ್‌ ಪಕ್ಷ ತನ್ನ ಸ್ಪರ್ಧೆಯನ್ನು ಕೇವಲ 250 ಸ್ಥಾನಗಳಿಗೆ ಸೀಮಿತಗೊಳಿಸುವುದರ ಉದ್ದೇಶ ಬಿಜೆಪಿಯೇತರ ಪಕ್ಷಗಳಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವುದಕ್ಕಾಗಿ ಎನ್ನುವುದು ಗಮನಾರ್ಹ. ಕೇಸರಿ ಪಕ್ಷ ಮುಂದಿನ ಬಾರಿ ಅಧಿಕಾರಕ್ಕೆ ಬಾರದಂತೆ ತಡೆಯಲು ಕಾಂಗ್ರೆಸ್‌, ಬಿಜೆಪಿಯೇತರ ಪಕ್ಷಗಳ ಮಹಾಘಟಬಂಧನವನ್ನು ರೂಪಿಸಲು, ಸಂಘಟಿತ ಹೋರಾಟವನ್ನು ಸಾದರಪಡಿಸಲು ಉದ್ದೇಶಿಸಿದೆ ಎಂದು ಮೂಲಗಳು ಹೇಳಿವೆ. 

ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಪಕ್ಷ ಈಗಾಗಲೇ 2019ರ ಲೋಕಸಭಾ ಚುನಾವಣೆಗಾಗಿ ವಿವಿಧ ರಾಜ್ಯಗಳಲ್ಲಿ ವಿವಿಧ ಪಕ್ಷಗಳೊಂದಿಗೆ ಸೀಟು ಹಂಚಿಕೊಳ್ಳುವ ಸೂತ್ರವನ್ನು ಈಗಾಗಲೇ ಸಿದ್ಧಪಡಿಸಿದೆ. ಈ ನಿಟ್ಟಿನಲ್ಲಿ ಅದು ಎ ಕೆ ಆ್ಯಂಟನಿ ನೇತೃತ್ವದ ಸಮಿತಿಗೆ 2019ರ ಲೋಕಸಭಾ ಚುನಾವಣೆಯ ರಣತಂತ್ರಕ್ಕೆ ಮಾರ್ಗನಕ್ಷೆಯನ್ನು ರೂಪಿಸುವಂತೆ ಕೇಳಿಕೊಂಡಿದೆ. ಈ ಸಮಿತಿಯು ಕಾಂಗ್ರೆಸ್‌ ಜಿಲ್ಲಾ ಮತ್ತು ರಾಜ್ಯ ಸಮಿತಿಗಳಿಂದ ಜನರ ಆಶೋತ್ತರಗಳನ್ನು ಮತ್ತು ಪಕ್ಷ ಎದುರಿಸಬೇಕಾಗುವ ಸವಾಲುಗಳ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿದೆ. 

ಈ ಸಮಿತಿಯ ಅಭಿಪ್ರಾಯದ ಪ್ರಕಾರ ಕಾಂಗ್ರೆಸ್‌ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳಲ್ಲಿ , ಹೆಚ್ಚೆಂದರೆ 250 ಸ್ಥಾನಗಳಲ್ಲಿ ಸ್ಪರ್ಧಿಸುವುದು ಒಳಿತೆಂದು ಹೇಳಲಾಗಿದೆ. ಆ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಬಿಜೆಪಿಯೇತರ ಪಕ್ಷಗಳೊಂದಿಗೆ ಮಹಾಘಟಬಂಧನ ರಚಿಸಿಕೊಳ್ಳುವುದಕ್ಕೆ ಸಾದ್ಯವಾಗುವುದಲ್ಲದೆ ಬಿಜೆಪಿ ಎದುರು ಸಂಘಟಿತ ಶಕ್ತಿಯ ಹೋರಾಟವನ್ನು ಸಾದರಪಡಿಸುವುದಕ್ಕೆ ಸಾಧ್ಯವಾಗುವುದೆಂದು ಅಭಿಪ್ರಾಯಪಡಲಾಗಿದೆ. 

ಹಾಗಿದ್ದರೂ ಕಾಂಗ್ರೆಸ್‌ ಪಕ್ಷ 2014ರ ಸಂಸತ್‌ ಚುನಾವಣೆಯಲ್ಲಿ ತಾನು ಗೆದ್ದಿದ್ದ 44 ಲೋಕಸಭಾ ಸ್ಥಾನಗಳನ್ನು ಇತರ ಪಕ್ಷಗಳೊಂದಿಗೆ ಹಂಚಿಕೊಳ್ಳದಿರಲು ನಿರ್ಧರಿಸಿದೆ. ಈ ಸೀಟುಗಳನ್ನು ಕಾಂಗ್ರೆಸ್‌ ಅಂದು ಪ್ರಬಲ ಮೋದಿ ಅಲೆ ಇದ್ದ ಹೊರತಾಗಿಯೂ ಜಯಿಸಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next