Advertisement

ಮಗುವನ್ನು ರೇಪ್‌ ಮಾಡಿ ಸುಟ್ಟು, ರಸ್ತೆ ಬದಿ ಎಸೆದ

08:15 AM Feb 14, 2017 | Team Udayavani |

ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈಯಲ್ಲಿ ರವಿವಾರ 3 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಸುಟ್ಟು ಕೊಂದು ಹಾಕಲಾಗಿದೆ. ಅರೆಬರೆ ಸುಟ್ಟ ದೇಹವನ್ನು ರಸ್ತೆ ಬದಿಯಲ್ಲಿ ಎಸೆದ ಭೀಕರ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಷ್ಯಾಂತ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 

Advertisement

ಮಗು ಕಿರುಚಬಾರದೆಂದು ಬಾಯಿಗೆ ಬಟ್ಟೆ ತುರುಕಿದ್ದ. ಇದರಿಂದಾಗಿ ಆಕೆಗೆ ಉಸಿರುಕಟ್ಟಿದೆ.  ಆತನ ಮೊಬೈಲ್‌ನಲ್ಲಿಯೂ ಮಕ್ಕಳ ಲೈಂಗಿಕ ಚಿತ್ರಗಳೂ ಇದ್ದವೆಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ದಷ್ಯಾಂತ್‌ ಸಾಫ್ಟ್ ವೇರ್‌ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಚೆನ್ನೈಯ ಮುಗಳಿವಕ್ಕಮ್‌ನಲ್ಲಿರುವ  ಅಪಾರ್ಟ್‌ಮೆಂಟ್‌ವೊಂದರಲ್ಲಿ ಆಡಿಕೊಂಡಿದ್ದ ಮಗುವನ್ನು ಆತ ಅಪಹರಿಸಿದ್ದ. ಈ ಬಗ್ಗೆ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು.  ಅಕ್ಕಪಕ್ಕದ ಮನೆಯವರು ನೀಡಿದ ಸುಳಿವಿನ ಆಧಾರದಲ್ಲಿ ದಷ್ಯಾಂತ್‌ನನ್ನು  ಬಂಧಿಸಿದಾಗ ಕ್ರೂರ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next