Advertisement
ದ.ಕ. ಜಿಲ್ಲಾಡಳಿತದ ವತಿಯಿಂದ ಮಂಗಳೂರಿನ ನೆಹರೂ ಮೈದಾನದಲ್ಲಿ ಗುರುವಾರ ಜರಗಿದ 68ನೇ ಗಣರಾಜ್ಯೋತ್ಸವದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಗಣರಾಜ್ಯೋತ್ಸವ ಸಂದೇಶ ನೀಡಿದರು.ಜಾತಿ, ಭಾಷೆ, ಪಂಗಡಗಳ ಸಂಕುಚಿತ ಭಾವನೆಧಿಗಳಿಂದ ಹೊರಬಂದು ಭವ್ಯ ಭಾರತ ನಿರ್ಮಾಣದ ಸಂಕಲ್ಪ ತೊಡಬೇಕು ಎಂದರು.
ಮಹಾತ್ಮಾ ಗಾಂಧೀಜಿಯವರ ವಿಚಾರಧಿಧಾರೆಧಿಗಳನ್ನು ಪ್ರಚುರಪಡಿಸಲು ಅನುಕೂಲಧಿವಾಗುವಂತೆ ಪ್ರತಿ ಜಿಲ್ಲಾ ಕೇಂದ್ರದಲ್ಲಿ ತಲಾ 3 ಕೋಟಿ ರೂ. ವೆಚ್ಚದಲ್ಲಿ ಗಾಂಧಿಭವನ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಪಶುಭಾಗ್ಯ ಕಾರ್ಯಕ್ರಮದಡಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಹಸು, ಕುರಿ, ಹಂದಿ, ಕೋಳಿ ಘಟಕಗಳನ್ನು ಸ್ಥಾಪಿಸಲು ಸಹಾಯಧನ ನೀಡುವುದಕ್ಕಾಗಿ ಈಗಾಗಲೇ 88 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ರಮಾನಾಥ ರೈ ತಿಳಿಸಿದರು. 94ಸಿ ಅರ್ಜಿ ಸ್ವೀಕಾರ ಅವಧಿ ವಿಸ್ತರಣೆ
94ಸಿ ತಿದ್ದುಪಡಿ ಕಾಯಿದೆಯಡಿ ಗ್ರಾಮೀಣ ಪ್ರದೇಶದಲ್ಲಿ ಅರ್ಜಿ ಸ್ವೀಕಾರ ಅವಧಿಯನ್ನು ಫೆ. 21ರ ವರೆಗೆ ವಿಸ್ತರಣೆ ಮಾಡಲಾಗಿದೆ. ನಗರ ಪ್ರದೇಶದಲ್ಲಿ 94ಸಿಸಿ ಕಾಯ್ದೆಯಂತೆ ಅರ್ಜಿ ಸ್ವೀಕರಿಸಲು ಫೆ. 27ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
Related Articles
Advertisement
ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಶಾಸಕರಾದ ಜೆ.ಆರ್. ಲೋಬೊ, ಬಿ.ಎ. ಮೊದಿನ್ ಬಾವಾ, ಮೇಯರ್ ಹರಿಧಿನಾಥ್, ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಪಂ ಸಿಇಒ ಡಾ| ಎಂ.ಆರ್. ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ, ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.
ಕೊರಗ ಸಮುದಾಯದ ಅಭಿವೃದ್ಧಿಗೆ 13.81 ಕೋ.ರೂ.ಕೊರಗ ಸಮುದಾಯದ ಅಭಿವೃದ್ಧಿ ಮತ್ತು ಇತರ ಯೋಜನೆಗಳಿಗಾಗಿ ಜಿಲ್ಲೆಗೆ 13.81 ಕೋಟಿ ರೂ. ವಿಶೇಷ ಅನುಧಿದಾನವನ್ನು ಸರಕಾರ ಘೋಷಿಸಿದೆ. ಮೊದಲ ಕಂತಾಗಿ 10 ಕೋಟಿ ರೂ.ಗಳನ್ನು ಈಗಾಧಿಗಲೇ ಬಿಡುಧಿಗಡೆ ಮಾಡಲಾಗಿದೆ ಎಂದು ಸಚಿವ ರೈ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 3,030 ಎಂಡೋಸಲ್ಫಾನ್ ಸಂತ್ರಸ್ತಧಿರಿದ್ದು, ಈ ಫಲಾನುಭವಿಗಳಿಗೆ ಮಿತಧಿವೇತನಧಿವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತಿದೆ. ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪನೆಗಾಗಿ ಕ್ರಿಯಾ ಯೋಜನೆ ರೂಪಿಸಧಿಲಾಗುತ್ತಿದೆ ಎಂದು ಅವರು ವಿವರಿಸಿದರು.