Advertisement

ಆರೋಗ್ಯಕ್ಕೆ ಪೂರಕ ಕಹಿಬೇವು

05:30 PM Sep 06, 2021 | Team Udayavani |

ಕಹಿ ಬೇವು ಪದ ಕೇಳುವಾಗಲೇ ಮುಖ ಕಿವುಚಿದಂತಾಗುತ್ತದೆ. ಆದರೆ ಹೇಳಿದಷ್ಟು ಮುಗಿಯದ ಔಷಧ ಗುಣಗಳು ಈ ಎಲೆಗಳಲ್ಲಿ ಇದ್ದರೂ ನಾವು ಮಾತ್ರ ಅನವಶ್ಯ ಮಾತ್ರೆಗಳ ಮೊರೆ ಹೋಗುತ್ತೇವೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಕಹಿ ಬೇವು ಸಹಕಾರಿಯಾಗಿದ್ದು, ಅಗಾಧ ಪ್ರಮಾಣದ ಆರೋಗ್ಯಕಾರಿ ಪ್ರಯೋಜನಗಳಿವೆ. ದೈಹಿಕ, ಮಾನಸಿಕ ಹಾಗೂ ಪಾರಮಾರ್ಥಿಕ ವಿಷಯಗಳ ಸುಧಾರಣೆಯಲ್ಲಿಯೂ ಬೇವು ಆದ್ಯ ಪಾತ್ರವಹಿಸಲಿದ್ದು, ಇದರ ಸೇವನೆಯಿಂದಾಗುವ ಪ್ರಯೋಜನಗಳ ಮಾಹಿತಿ ಇಲ್ಲಿದೆ.

Advertisement

ಕಹಿ ಬೇವು ಗುಣದಲ್ಲಿ ಅಮೃತ
ಬೇವು ರುಚಿಯಲ್ಲಿ ಕಹಿ ಎನಿಸಿದರೂ ಉಪಯೋಗದಲ್ಲಿ ಮಾತ್ರ ಬೇವು ಅಮೃತ. ಪ್ರತಿದಿನ ಬೆಳಗ್ಗೆ ಬೇವಿನ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ರೋಗ-ರುಜಿನಗಳು ಬರುವುದಿಲ್ಲ. ಹಾನಿಕಾರಕ ಅಣು ಜೀವಿ ಗಳಿಂದ ಹರಡುವ ಸೋಂಕು ರೋಗಗಳ ತಡೆಗೆ ಬೇವು ಉತ್ತಮ ಮದ್ದಾಗಿದೆ

ಮಲೇರಿಯಾ ದೂರ
ಬೇವಿನ ಸೊಪ್ಪು, ಹೂವು, ಎಣ್ಣೆ ಮತ್ತು ಇದರ ತೊಗಟೆಯಲ್ಲಿ ಹಲವು ರೋಗ ನಿವಾರಕ ಅಂಶಗಳಿದ್ದು, ಇವುಗಳಿಂದ ಔಷಧ ತಯಾರಿಸಲಾಗುತ್ತದೆ. ಚರ್ಮ ರೋಗ ನಿವಾರಣೆಗೆ ಬೇವು ಸಿದ್ಧ ಔಷಧವಾಗಿದ್ದು, ಬೇವಿನ ತಾಜಾ ಸೊಪ್ಪನ್ನು ಹಿಂಡಿ ಸೇವಿಸಿದರೆ ಶಾರೀರಿಕ ದೋಷ ಕೂಡ ನಿವಾರಣೆ ಆಗುತ್ತದೆ. ಜತೆಗೆ ಬೇವಿನ ಮರದ ತೊಗಟೆಯನ್ನು ಕೆತ್ತಿ ತೆಗೆದು ಅದರಲ್ಲಿ ಕಷಾಯ ತಯಾರಿಸಿ ಸೇವಿಸುವುದರಿಂದ ಕುಷ್ಠ ರೋಗಾದಿ ಚರ್ಮ ರೋಗಗಳು ನಿವಾರಣೆಯಾಗುತ್ತವೆ.

ಕ್ಯಾನ್ಸರ್‌ ನಿಯಂತ್ರಣ
ಬೇವಿನ ಎಲೆಗಳ ರಸವನ್ನು ಸಕ್ಕರೆಯೊಂದಿಗೆ ಸೇವಿಸುವುದರಿಂದ ಅತಿಸಾರದಿಂದ ಗುಣಮುಖರಾಗಬಹುದು. ಪ್ರತಿದಿನ ಬೆಳಗ್ಗೆ 10-12 ಬೇವಿನ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗೆದು ಒಂದು ಬಟ್ಟಲು ನೀರು ಕುಡಿದರೆ ಕ್ಯಾನ್ಸರ್‌ ಸಂಬಂಧಿರೋಗಗಳು ದೂರವಾಗುತ್ತವೆ.

ರಾಮಬಾಣ
ಮಧುಮೇಹ, ನಿಶ್ಶಕ್ತಿ, ವಾಕರಿಕೆ, ಬಾಯಾರಿಕೆ, ಗಡುವಿನ ಜ್ವರ ಸೇರಿದಂತೆ ಅನೇಕ ದೋಷಗಳಿಗೆ ಬೇವು ರಾಮಬಾಣ. ಮಲೇರಿಯಾ ಜ್ವರ ಬಂದರೆ 2 ಅಥವಾ 3 ಗ್ರಾಂ ಬೇವಿನ ಎಲೆಗಳ ಚೂರ್ಣವನ್ನಾಗಲಿ, ತೊಗಟೆಯ ಚೂರ್ಣವನ್ನಾಗಲಿ ಬಿಸಿ ನೀರಿನೊಂದಿಗೆ ಸೇವಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ.

Advertisement

ರಕ್ತ ಶುದ್ಧೀಕರಣ
ಬೇವಿನ ಸೇವನೆಯಿಂದ ರಕ್ತ ಶುದ್ಧೀಕರಣಗೊಳ್ಳುತ್ತದೆ ಹಾಗೂ ರಕ್ತದೊತ್ತಡ ಕಡಿಮೆಯಾಗುತ್ತದೆ. ರಕ್ತದಲ್ಲಿರುವ ವಿಷಕಾರಿ ವಸ್ತುಗಳನ್ನು ನಿಯಂತ್ರಿಸುವುದರಿಂದ ರಕ್ತಸಂಚಾರ ಉತ್ತಮಗೊಳ್ಳುತ್ತದೆ ಹಾಗೂ ಆರೋಗ್ಯವೂ ಸುಧಾರಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next