Advertisement
ದಾವಣಗೆರೆ ಜಿಲ್ಲೆ ದಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಯ ಮೂಲಕ ದಾವಣಗೆರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಶ್ರೀ ವಿವೇಕಾನಂದ ರೋವರ್ಸ್ ಕ್ರೀವ್‌ನ ಒಟ್ಟು 17 ವಿದ್ಯಾರ್ಥಿಗಳು ಸೈಕಲ್ ಯಾತ್ರೆ ಹೊರಟಿದ್ದು, ರ್‍ಯಾಂಬ್ಲಿರ್ ಬ್ಯಾಡ್ಜ್ ಸಂಪಾದನೆಗಾಗಿ ಈ ರೀತಿಯಲ್ಲಿ ಸೈಕ್ಲಿಂಗ್ ನಡೆಸುತ್ತಿದ್ದಾರೆ.
Related Articles
Advertisement
ಈ ವಿದ್ಯಾರ್ಥಿಗಳ ತಂಡಕ್ಕೆ ನಾಗಾಭರಣ ಹಾಗೂ ಮುಸ್ತಫಾರಝಾ ನಾಯಕರು. ಉಳಿದಂತೆ ಬಾನುಕುಮಾರ್, ಭರತ್‌ಕುಮಾರ್, ಹರೀಶ್ ಎಂ., ಗಿರೀಶ್, ಪೃಥ್ವಿ, ಆಕಾಶ್, ಪ್ರಭು, ಸತೀಶ್, ಪರಶುರಾಮಪ್ಪ, ಅಭಿಷೇಕ್ ಎಚ್.ಬಿ, ಗುರುಬಸವರಾಜು, ದೀಪಕ್, ಸುದೀಪ್, ಯುವರಾಜ್ ಹಾಗೂ ಚರಣ್ ಸೇರಿ 17 ಮಂದಿ ಇದ್ದಾರೆ. ಇವರಲ್ಲಿ ಇಬ್ಬರು ಸೀನಿಯರ್‌ಗಳು ಈ ಹಿಂದೆಯೇ ಇಂತಹ ಸೈಕಲ್ ಯಾತ್ರೆ ನಡೆಸಿದ್ದು, ಉಳಿದಂತೆ ಎಲ್ಲರಿಗೂ ಹೊಸ ಅನುಭವವಾಗಿದೆ.
ರಂಬೂಟಾನ್ ಸವಿದರು:
ಶನಿವಾರ ಮಧ್ಯಾಹ್ನ 2ರ ಸುಮಾರಿಗೆ ಬಿ.ಸಿ.ರೋಡ್ ಸರ್ಕಲ್ ಬಳಿ ತಲುಪಿದ ವಿದ್ಯಾರ್ಥಿಗಳ ತಂಡ ಸರ್ಕಲ್‌ನಲ್ಲಿ ರಸ್ತೆ ಬದಿ ರಂಬೂಟಾನ್ ಮಾರಾಟ ಮಾಡುತ್ತಿದ್ದ ವ್ಯಾಪಾರಿಯಿಂದ ರಂಬೂಟಾನ್ ಹಾಗೂ ಇತರ ಹಣ್ಣುಗಳನ್ನು ಖರೀದಿಸಿ ಸವಿದರು. ಬಳಿಕ ಅಲ್ಲೇ ಹೆದ್ದಾರಿ ಬದಿ ನಿಂತು ಕೊಂಚ ವಿರಾಮ ಪಡೆದು ಮತ್ತೆ ತಮ್ಮ ಮುಂದಿನ ಹಾದಿಯತ್ತ ಸಾಗಿದರು.
ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನಮ್ಮ ಜಿಲ್ಲಾ ಸಂಸ್ಥೆಯವರು ರೂಟ್ ಸೆಟ್ ಮಾಡಿ ಉಳಿದುಕೊಳ್ಳುವುದಕ್ಕೂ ವ್ಯವಸ್ಥೆ ಮಾಡಿರುತ್ತಾರೆ. ನಾವು ಅದರಂತೆ ನಿತ್ಯವೂ ಸೈಕ್ಲಿಂಗ್ ಮಾಡಿ ನಿರ್ದಿಷ್ಟ ಜಾಗವನ್ನು ತಲುಪಬೇಕಿದೆ. ಎಲ್ಲರೂ ಜತೆಯಾಗಿ ಮಾತನಾಡಿಕೊಂಡು ಸಾಗುವುದರಿಂದ ಯಾವುದೇ ಆಯಾಸ ಎನಿಸುವುದಿಲ್ಲ. –ನಾಗಾಭರಣ, ಮುಸ್ತಫಾರಝಾ ತಂಡದ ನಾಯಕರು